ಬೆಂಗಳೂರು:ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಎರಡನೇ ಅತ್ಯುನ್ನತ ಹುದ್ದೆ ಸರ ಕಾರ್ಯವಾಹ ಆಗಿ ಕರ್ನಾಟಕದವರಾದ ದತ್ತಾತ್ರೇಯ ಹೊಸಬಾಳೆ ಆಯ್ಕೆಯಾಗಿದ್ದಾರೆ. ಆರೆಸ್ಸೆಸ್ ವಲಯದಲ್ಲಿ ದತ್ತಾಜಿ ಎಂದೇ ಕರೆಯಲ್ಪಡುವ ದತ್ತಾತ್ರೇಯ ಹೊಸಬಾಳೆ ಅವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮದಲ್ಲಿ.
1955ರ ಡಿ.1ರಂದು ಆರೆಸ್ಸೆಸ್ ಕಾರ್ಯಕರ್ತರ ಮನೆಯಲ್ಲಿ ಜನಿಸಿದ ದತ್ತಾತ್ರೇಯ ಹೊಸಬಾಳೆ, ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಪದವೀಧರ. 1968ರಲ್ಲಿ ಆರೆಸ್ಸೆಸ್ ಸೇರಿ, 1972ರಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌(ಎಬಿವಿಪಿ) ಯಲ್ಲಿ ಸಕ್ರಿಯರಾದರು. 1978ರಿಂದ ಪೂರ್ಣ ಕಾಲಿಕ ಕಾರ್ಯಕರ್ತರಾದರು. ಮುಖ್ಯವಾಗಿ ಈಶಾನ್ಯ ರಾಜ್ಯಗಳಲ್ಲಿ ರಾಷ್ಟ್ರೀಯ ವಿಚಾರಗಳನ್ನು ಪಸರಿಸುವ ಅನುಭವ ಹೊಂದಿದ್ದಾರೆ.
ಇದನ್ನೂ ಓದಿ:ನಾವಿಬ್ರು ಡಿವೋರ್ಸ್ ಆದ್ರೆ ನಿನ್​ ತಂಗಿನಾ ಇಟ್ಟುಕೊಳ್ಳಬಹುದಾ?: ಪತಿಯ ಪ್ರಶ್ನೆಗೆ ಪತ್ನಿಯ ಶಾಕಿಂಗ್​ ಉತ್ತರ!
ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ಸಂಸ್ಕೃತದಲ್ಲಿ ಮಾತನಾಡಬಲ್ಲರು. 2004ರಲ್ಲಿ ಆರೆಸ್ಸೆಸ್‌ನ ಬೌದ್ಧಿಕ ಚಟುವಟಿಕೆ ಮೇಲ್ವಿಚಾರಣೆಯ ಅಖಿಲ ಭಾರತೀಯ ಬೌದ್ಧಿಕ ಪ್ರಮುಖರಾದರು. 2009ರಿಂದ ಅಖಿಲ ಭಾರತೀಯ ಸಹ ಸರಕಾರ್ಯವಾಹರಾದರು. ಮುಖ್ಯವಾಗಿ ಯುವಕರನ್ನು ಆರೆಸ್ಸೆಸ್‌ನತ್ತ ಸೆಳೆಯುವ ದೂರಗಾಮಿ ಯೋಜನೆಗಳತ್ತ ಗಮನ ಹರಿಸುವ ಹೊಣೆ. ಉತ್ತಮ ವಾಗ್ಮಿ, ಅನೇಕ ವಿಚಾರಗಳನ್ನು ಮುಕ್ತವಾಗಿ ಮಾತನಾಡುವ ಹೊಸಬಾಳೆ 2018ರಲ್ಲೆ ಸರಕಾರ್ಯವಾಹ ಆಗುತ್ತಾರೆ ಎಂಬ ಸುದ್ದಿಗಳಿದ್ದವು.
ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಈ ಸುಂದರಿಯ ಹಿಂದಿದೆ ಮತ್ತೊಂದು ಕರಾಳ ಮುಖ!

ಆರ್​​ಎಸ್​ಎಸ್​ ನೂತನ ಸರಕಾರ್ಯವಾಹ ಆಗಿ ಆಯ್ಕೆಯಾದ ಕರ್ನಾಟಕದ ದತ್ತಾತ್ರೇಯ ಹೊಸಬಾಳೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + 8 =
Remember me
