ಮುಂಬೈ:ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ 18 ತಿಂಗಳಲ್ಲಿ 108 ಕೆಜಿ ತೂಕ ಇಳಿಸಿಕೊಂಡಿದ್ದರು. ಅನಂತ್​ ಅಂಬಾನಿ ತೂಕವನ್ನು ಇಳಿಸಿಕೊಳ್ಳಲು ಫಿಟ್ನೆಸ್​​ ಟ್ರೈನರ್​ ಆಗಿರುವ ವಿನೋದ್​​ ಚನ್ನಾ ಅವರ ಪಾತ್ರ ಬಹುಮುಖ್ಯವಾಗಿದೆ.
ಮುಂಬೈ ಮೂಲದ ಫಿಟ್ನೆಸ್ ತರಬೇತುದಾರ ವಿನೋದ್ ಚನ್ನಾ ಅವರು ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರರಲ್ಲಿ ಒಬ್ಬರು. ವಿನೋದ್ ಚನ್ನಾ ಒಮ್ಮೆ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿಯವರ ವೈಯಕ್ತಿಕ ತರಬೇತುದಾರರಾಗಿದ್ದರು. ಅನಂತ್ ಅಂಬಾನಿ ಕೇವಲ 18 ತಿಂಗಳಲ್ಲಿ 108 ಕೆಜಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡಿದ ನಂತರ ವಿನೋದ್ ಚನ್ನಾ ಪ್ರಸಿದ್ಧರಾದರು. ಚನ್ನ ಅವರು ಅನಂತ್ ಅಂಬಾನಿಗಾಗಿ ವಿನ್ಯಾಸಗೊಳಿಸಿದ ತೀವ್ರವಾದ ಆಹಾರಕ್ರಮದಿಂದ ಅವರ ತೂಕವನ್ನು ಇಳಿಕೆ ಮಾಡುವಲ್ಲಿ ಯಶಸ್ವಿಯಾದರು.
ಫಿಟ್ನೆಸ್ ತರಬೇತುದಾರರಾಗುವ ಮೊದಲು, ವಿನೋದ್ ಚನ್ನಾ ಅವರು ಮನೆಗೆಲಸ ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ನಂತರ ಒಂದು ಉತ್ತಮ ದಿನ ವಿನೋದ್ ಚನ್ನ ಅವರು ಜಿಮ್‌ಗೆ ಸೇರಿ ಕೊಂಡು ಪಿಟ್ನೆಸ್​​ ಕುರಿತಾಗಿ ತಿಳಿದುಕೊಂಡು ಅದನ್ನೇ ವೃತ್ತಿಯನ್ನಾಗಿಸಿಕೊಂಡರು. ವಿನೋದ್ ಚನ್ನಾ ಅವರು ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ಮತ್ತು ಜನಪ್ರಿಯ ಸೆಲೆಬ್ರೆಟಿ ಫಿಟ್ನೆಸ್ ತರಬೇತುದಾರರಲ್ಲಿ ಒಬ್ಬರಾಗಿದ್ದಾರೆ.
ಸಂದರ್ಶನವೊಂದರಲ್ಲಿ ಫಿಟ್ನೆಸ್ ಟ್ರೈನರ್‌ ವಿನೋದ್ ಚನ್ನಾ ಅವರು ಅನಂತ್ ಅಂಬಾನಿ ಬಗ್ಗೆ ಮಾತನಾಡುತ್ತಾ,  ತೂಕ ಇಳಿಕೆಗೆ ಅನಂತ್ ಅಂಬಾನಿ ಅವರಿಗಿದ್ದ ಡೆಡಿಕೇಶನ್‌, ಇಷ್ಟು ಸುಲಭವಾಗಿ ವೈಟ್ ಲಾಸ್ ಮಾಡಿಕೊಳ್ಳಲು ಕಾರಣವಾಯಿತು. ಕೇವಲ 18 ತಿಂಗಳಲ್ಲಿ 108 ಕೆಜಿ ತೂಕವನ್ನು ಕಳೆದುಕೊಂಡರು. ಅನಂತ್ ಅಂಬಾನಿ ಅವರು ಅತಿಯಾಗಿ ತಿನ್ನುವ ಅಭ್ಯಾಸ ಮತ್ತು ಜಂಕ್ ಫುಡ್ ಇಷ್ಟಪಡುವ ಕಾರಣ ಅವರು ಡಯೆಟ್ ಅನುಸರಿಸುವುದು ಅಷ್ಟು ಸುಲಭವಾಗಿರಲ್ಲಿಲ್ಲ. ಪ್ರೋಟೀನ್, ಕಡಿಮೆ ಕಾರ್ಬೋಹೈಡ್ರೇಟ್​​ ಮತ್ತು ಫೈಬರ್‌ಗಳನ್ನು ಒಳಗೊಂಡಿರುವ ಆಹಾರವನ್ನು ಚನ್ನಾ, ಅನಂತ್ ಅಂಬಾನಿಗೆ ಸೂಚಿಸಿದ್ದೆ ಎಂದು ಹೇಳಿದ್ದಾರೆ.
ಅನಂತ್ ಅಂಬಾನಿಯವರಲ್ಲದೆ, ವಿನೋದ್ ಚನ್ನಾ ಅವರು ನೀತಾ ಅಂಬಾನಿ, ಕುಮಾರ್ ಮಂಗಳಂ ಬಿರ್ಲಾ ಮತ್ತು ಅನನ್ಯಾ ಬಿರ್ಲಾ ಸೇರಿದಂತೆ ಇತರ ಎ-ಲಿಸ್ಟ್ ಕ್ಲೈಂಟ್‌ಗಳನ್ನು ಹೊಂದಿದ್ದಾರೆ.
ಜಾನ್ ಅಬ್ರಹಾಂ, ಶಿಲ್ಪಾ ಶೆಟ್ಟಿ ಕುಂದ್ರಾ, ಹರ್ಷವರ್ಧನ್ ರಾಣೆ, ವಿವೇಕ್ ಒಬೆರಾಯ್, ಅರ್ಜುನ್ ರಾಂಪಾಲ್, ಇತ್ಯಾದಿ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳನ್ನು ಅವರು ತಮ್ಮ ಗ್ರಾಹಕರನ್ನಾಗಿ ಹೊಂದಿದ್ದಾರೆ. ವಿನೋದ್ ಚನ್ನಾ ಅವರು 12 ಸೆಷನ್‌ಗಳಿಗೆ 1.5 ಲಕ್ಷ ರೂ. ಪಡೆಯುತ್ತಾರೆ.
ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ; ಬಂಗಾರ, ಬೆಳ್ಳಿ ದರ ಹೀಗಿದೆ ನೋಡಿ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × 1 =
Remember me
