ಹೈದರಾಬಾದ್​:ಮಹಾರಾಷ್ಟ್ರದ ಗಡಿ ಭಾಗದ ಅಸಿಫಾಬಅದ್​ -ಕುಮರಮ್ ಭೀಮ್ ಜಿಲ್ಲೆಯ ದಟ್ಟಾರಣ್ಯದೊಳಗೆ ಅವಿತುಕೊಂಡಿರುವ ನಕ್ಸಲರ ಭೇಟೆಗೆ ತೆಲಂಗಾಣ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ದಟ್ಟಾರಣ್ಯದೊಳಗೆ ಅವರಿಗೆ ನೆರವಾಗುತ್ತಿರುವವರು ಯಾರು? ಹೀಗೊಂದು ಸಹಜ ಕುತೂಹಲಕ್ಕೆ ಇಲ್ಲಿದೆ ಸಮಾಧಾನ.
ಮೈಲಾರಪು ಭಾಸ್ಕರ ಅಲಿಯಾಸ್ ಅದೆಲ್ಲು ನೇತೃತ್ವದ ನಕ್ಸಲರ 15 ಸದಸ್ಯರ ತಂಡ ಕಾಡಿನೊಳಗಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಮೈಲಾರಪು ಭಾಸ್ಕರ ತೆಲಂಗಾಣ ಸ್ಟೇಟ್ ಕಮಿಟಿಯ ಕುಮರಮ್​ ಭೀಮ್ ಮನ್​ಚೇರಿಯಲ್ ಸ್ಕ್ವಾಡ್​ನ ಮೆಂಬರ್ ಇನ್​ಚಾರ್ಜ್​ ಆಗಿದ್ದು, ಕಾಡಿನ ಮೂಲೆ ಮೂಲೆಗಳ ಮಾಹಿತಿ ಆತನಿಗೆ ಇದೆ. ಹೀಗಾಗಿ, ತೆಲಂಗಾಣದ ಆ್ಯಂಟಿ ಮಾವೋಯಿಸ್ಟ್ ವಿಂಗ್​ನ 400 ಬಲಿಷ್ಠ ಸದಸ್ಯರ ತಂಡ ಪ್ರಾಣಹಿತ ನದಿಯ ಉದ್ದಕ್ಕೂ ಕಾಡುಗಳ ನಡುವೆ ಶೋಧ ಕಾರ್ಯ ಶುರುಮಾಡಿದೆ. ಕಳೆದ ನಾಲ್ಕು ದಿನಗಳಿಂದ ಈ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ:ರೇಖಾ ಚಿತ್ರ ಸಿದ್ದಪಡಿಸಿ ಬಾಂಬ್ ತಂದಿಟ್ಟವನೇ ಉಗ್ರ ಶೋಯೆಬ್
ನಕ್ಸಲರ ಚಲನವಲನ ಪ್ರಾಣಹಿತ ನದಿಯಿಂದ ಗೋದಾವರಿ ನದಿಯ ತನಕ ಕೌಟಾಲ, ಬೆಜ್ಜೂರ್, ದಾಹೇಗಾಂವ್​, ನೀಲ್​ವಾಯಿ ಮತ್ತು ಚೆನ್ನೂರು ಪ್ರದೇಶಗಳಲ್ಲಿ ಕಂಡುಬಂದಿದೆ. ಅವರ ಚಲನವಲನದ ಮೇಲೆ ನಿಗಾವಹಿಸಲು ಎಎನ್​ಎಸ್​ ಹೈರೇಂಜ್​ ಕ್ಯಾಮರಾ ಇರುವ ಡ್ರೋನ್​ಗಳನ್ನು ನಿಯೋಜಿಸಿದೆ. ಇದು ಅವರಿಗೆ ತುಂಬಾ ನೆರವಾಗುತ್ತಿದ್ದು, ದೂರದಿಂದಲೇ ಅವರ ಮೇಲೆ ನಿಗಾವಹಿಸುವುದು ಸಾಧ್ಯವಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ರಶ್ಮಿಕಾ ಶಾಂಪೂ ವ್ಯಾಮೋಹ!
ಭಾಸ್ಕರ ಮತ್ತು ಆತನ ತಂಡ ನದಿಯ ಕಿನಾರೆಯ ಉದ್ದಕ್ಕೂ ಗಡಿಭಾಗದ ಗ್ರಾಮಗಳಲ್ಲಿ ಸಿಪಿಐ(ಮಾವೋವಾದಿ) ಪಾರ್ಟಿಗೆ ಯುವಜನರ ನೇಮಕಾತಿಯನ್ನು ಖಾತರಿಗೊಳಿಸುವ ಹೊಣೆ ಹೊತ್ತುಕೊಂಡಿದ್ದಾನೆ. ತೆಲಂಗಾಣದಲ್ಲಿ ತಮ್ಮ ಅಸ್ತಿತ್ವವನ್ನು ಪುನಸ್ಥಾಪಿಸುವುದಕ್ಕೆ ಇರುವ ಪ್ರಯತ್ನ ಇದಾಗಿದ್ದು, ಈ ಭಾಗದಲ್ಲಿ ಈ ಸಂಘಟನೆ ಸ್ಥಾಪನೆಯಾಗಿ 16ನೇ ವರ್ಷಾಚರಣೆಯನ್ನು ಈ ಒಂದು ವಾರ ಆಚರಿಸಲು ನಕ್ಸಲರು ತೀರ್ಮಾನಿಸಿದ್ದಾರೆ. ಆ ಆಚರಣೆ ಚಾಲ್ತಿಯಲ್ಲಿದೆ. (ಏಜೆನ್ಸೀಸ್)
ಸ್ವಯಂ ನಿವೃತ್ತಿ ತೆಗೆದುಕೊಂಡ್ರು ಬಿಹಾರ ಡಿಜಿಪಿ; ಚುನಾವಣೆಗೆ ನಿಲ್ತಾರೆ ಅನ್ನೋ ವದಂತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 6 =
Remember me
