ಮುಂಬೈ:ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಗೆ ಹಳೆಯ ವಿದ್ಯಾರ್ಥಿಯೊಬ್ಬರು ಗ್ರೀನ್ ಎನರ್ಜಿ ಮತ್ತು ಸಸ್ಟೈನಬಿಲಿಟಿ ರಿಸರ್ಚ್ ಹಬ್ ಸ್ಥಾಪನೆಗೆ 160 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಐಐಟಿ ಬಾಂಬೆ ನೀಡಿದ ಹೇಳಿಕೆಯಲ್ಲಿ, 18.6 ಮಿಲಿಯನ್ ಯುಎಸ್ ಡಾಲರ್ ನೀಡಿರುವ ದಾನಿಯು ಸಂಸ್ಥೆಯ ಹಳೆಯ ವಿದ್ಯಾರ್ಥಿ ಎಂದು ತಿಳಿಸಿದೆ.ಉಪನಗರ ಪೊಳ್ಳಿನಲ್ಲಿರುವ ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿರುವ ಅತ್ಯಾಧುನಿಕ ಶೈಕ್ಷಣಿಕ ಕಟ್ಟಡದಲ್ಲಿ ಗ್ರೀನ್ ಎನರ್ಜಿ ಮತ್ತು ಸಸ್ಪೆನಬಿಲಿಟಿ ರಿಸರ್ಚ್ ಹಬ್ ಅನ್ನು ಸ್ಥಾಪಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಅದರ ಗಮನವು ಪ್ರಮುಖ ಕ್ಷೇತ್ರಗಳ ಮೇಲೆ ಇರುತ್ತದೆ.
ಈ ಸಂಶೋಧನಾ ಕೇಂದ್ರದ ಕೆಲಸವು ಹವಾಮಾನ ಬಿಕ್ಕಟ್ಟನ್ನು ಮೌಲ್ಯಮಾಪನ ಮಾಡುವುದರ ಜೊತೆಗೆ ಪರಿಣಾಮಕಾರಿ ಕಾರ್ಯತಂತ್ರಗಳನ್ನು ಸಿದ್ಧಪಡಿಸುವುದು ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಸಿದ್ಧಪಡಿಸುವುದು ಎಂದು ಐಐಟಿ ತಿಳಿಸಿದೆ.
ಐಐಟಿ ಬಾಂಬೆ ನಿರ್ದೇಶಕ, ಪ್ರೊಫೆಸರ್ ಸುಭಾಸಿಸ್ ಚೌಧರಿ ಮಾತನಾಡಿ, ಹಬ್ ಸ್ಥಾಪನೆಯು ಅತ್ಯಾಧುನಿಕ ಸಂಶೋಧನೆಗೆ ಉತ್ತೇಜನ ನೀಡುತ್ತದೆ. ಜೊತೆಗೆ ವಾಣಿಜ್ಯೋದ್ಯಮ ಪ್ರಯತ್ನಗಳನ್ನು ಉತ್ತೇಜಿಸುತ್ತದೆ, ಈ ಮೂಲಕ ಹವಾಮಾನ ಬಿಕ್ಕಟ್ಟಿನ ಸವಾಲುಗಳನ್ನು ನಿಭಾಯಿಸಲು ಇದು ಸಹಾಯ ಮಾಡುತ್ತದೆ. ಅಮೆರಿಕದಲ್ಲಿ ಶಿಕ್ಷಣ ಸಂಸ್ಥೆಗಳು ಇಂತಹ ದೇಣಿಗ ಪಡೆಯುವುದು ಸಾಮಾನ್ಯ, ಆದರೆ ಇಲ್ಲಿ ಅಂತಹ ದೇಣಿಗೆ ಸಿಗುತ್ತಿರಲಿಲ್ಲ ಎಂದು ಹೇಳಿದ್ದಾರೆ.ಈ ಕೇಂದ್ರದಿಂದ ಬ್ಯಾಟರಿ ತಂತ್ರಜ್ಞಾನಗಳು, ಸೌರ ದ್ಯುತಿವಿದ್ಯುಜ್ಜನಕಗಳು, ಜೈವಿಕ ಇಂಧನಗಳು, ಶುದ್ಧ ಗಾಳಿ ವಿಜ್ಞಾನ, ಪ್ರವಾಹ ಮುನ್ಸೂಚನೆ ಮತ್ತು ಕಾರ್ಬನ್ ಕ್ಯಾಪ್ಟರ್ ಸೇರಿದಂತೆ ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಸಂಶೋಧನೆಗೆ ಅನುಕೂಲವಾಗಲಿದೆ ಎಂದು ಐಐಟಿ ತಿಳಿಸಿದೆ.
ಅಷ್ಟೇ ಅಲ್ಲ, ಸಂಶೋಧನಾ ಕೇಂದ್ರವು ಉದ್ಯಮ- ನಿರ್ದಿಷ್ಟ ಶೈಕ್ಷಣಿಕ ತರಬೇತಿಯನ್ನು ನೀಡುತ್ತದೆ ಮತ್ತು ಜಾಗತಿಕ ವಿಶ್ವವಿದ್ಯಾಲಯಗಳು ಮತ್ತು ನಿಗಮಗಳೊಂದಿಗೆ ಕಾರ್ಯತಂತ್ರದ ಸಹಯೋಗವನ್ನು ಅಭಿವೃದ್ಧಿಪಡಿಸುತ್ತದೆ.
ಇಂತಹ ಸಂಸ್ಥೆಗೆ ಹಣ ನೀಡಿದಾಗ ಅದು ಸರಿಯಾದ ಜಾಗದಲ್ಲಿ ಬಳಕೆಯಾಗುತ್ತದೆ ಎಂಬುದು ದಾನಿಗಳಿಗೆ ತಿಳಿದಿದೆ ಎಂದು ಐಐಟಿ ನಿರ್ದೇಶಕರು ತಿಳಿಸಿದ್ದಾರೆ. ಅಂದಹಾಗೆ ಈ ಸಂಸ್ಥೆಯ ಹಳೆಯ ವಿದ್ಯಾರ್ಥಿ ತನ್ನ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರಂತೆ.
ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಒತ್ತಾಯಿಸಿದ ಶಿಕ್ಷಕಿಯ ವಿಡಿಯೋ ವೈರಲ್; ‘ಮಕ್ಕಳೇ ಭಾರತದ ಭವಿಷ್ಯ, ದ್ವೇಷಿಸಬೇಡಿ’ ಎಂದ ರಾಹುಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + seventeen =
Remember me
