ನವದೆಹಲಿ:ಭಾರತದ ಶ್ರೀಮಂತ ಕ್ರಿಕೆಟಿಗ ಯಾರೆಂಬುದು ನಿಮಗೆ ಗೊತ್ತಾ? ಅವರ ಒಟ್ಟು ಆಸ್ತಿಯ ಮೌಲ್ಯ 20 ಸಾವಿರ ಕೋಟಿ ರೂಪಾಯಿ ಎಂಬುದು ಗೊತ್ತಿದೆಯೇ? ಈ ರೀತಿಯ ಪ್ರಶ್ನೆಗಳನ್ನು ಕೇಳಿದಾಗ ಮೊದಲ ನಮ್ಮ ತಲೆಗೆ ಬರುವುದು ಕ್ರಿಕೆಟ್​ ದಂತಕತೆ ಸಚಿನ್​, ಧೋನಿ ಮತ್ತು ಕೊಹ್ಲಿ. ಆದರೆ, ನೀವು ಯೋಚಿಸಿದಂತೆ ಯಾವೊಬ್ಬ ಸ್ಟಾರ್​ ಆಟಗಾರನೂ ಅಲ್ಲ. ಆ ಕ್ರಿಕೆಟಿಗನ ಹೆಸರು ಸಮರ್ಜೀತ್​ ಸಿಂಗ್​ ರಂಜಿತ್​ ಸಿಂಗ್​ ಗಾಯಕ್ವಾಡ್​. ಇವರು ಬರೋಡಾದ ರಾಯಲ್​ ಕುಟುಂಬಕ್ಕೆ ಸೇರಿದವರು.
ವಿರಾಟ್​ ಕೊಹ್ಲಿ ಮತ್ತು ಎಂ.ಎಸ್​. ಧೋನಿ ಅವರು ನಿವ್ವಳ ಆಸ್ತಿಯ ಮೌಲ್ಯ ಸುಮಾರು 1000 ಕೋಟಿ ರೂಪಾಯಿ. ಆದರೆ, ಸಮರ್ಜೀತ್​ ಅವರ ಆಸ್ತಿಯ ಮೌಲ್ಯ 20 ಸಾವಿರ ಕೋಟಿ. ಇಬ್ಬರಿಗೂ ಹೋಲಿಕೆ ಮಾಡಿದರೆ, 20 ಪಟ್ಟು ಅಧಿಕವಾಗಿದೆ.
ಇದನ್ನೂ ಓದಿ:ಆನ್​ಲೈನ್ ಹೂಡಿಕೆ ನೆಪದಲ್ಲಿ ಕೋಟ್ಯಂತರ ಧೋಖಾ: ಟೆಲಿಗ್ರಾಮ್ ವಾಟ್ಸ್ ಆಪ್​ನಲ್ಲಿ ಸಕ್ರಿಯ; ಶೇ.30 ಕಮಿಷನ್ ಆಮಿಷವೊಡ್ಡಿ ಲಕ್ಷಾಂತರ ರೂ. ವಂಚನೆ
ಸಮರ್ಜೀತ್​ ಅವರು ಪ್ರಥಮ ದರ್ಜೆಯ ಕ್ರಿಕೆಟ್​ ಆಗಿದ್ದಾರೆ. ಬರೋಡ ಕ್ರಿಕೆಟ್​ ಅಸೋಸಿಯೇಷನ್​ನಲ್ಲೂ ಕೆಲಸ ಮಾಡಿದ್ದಾರೆ. 1987 ರಿಂದ 88ರವರೆಗೆ 6 ರಣಜಿ ಪಂದ್ಯಗಳಲ್ಲಿ ಬರೋಡ ತಂಡವನ್ನು ಸಮರ್ಜೀತ್​ ಪ್ರತಿನಿಧಿಸಿದ್ದಾರೆ.
ಸಮರ್ಜೀತ್​ ಅವರು ರಂಜಿತ್​ ಸಿಂಗ್​ ಪ್ರತಾಪ್​ ಸಿಂಗ್​ ಗಾಯಕ್ವಾಡ್​ ಅವರ ಪುತ್ರ. ಇವರು 1967ರಲ್ಲಿ ಜನಿಸಿದರು. ಡೆಹ್ರಾಡೂನ್​ನ ಡೂನ್​ ಶಾಲೆಯಲ್ಲಿ ಓದಿದರು. ಫುಟ್​ಬಾಲ್​ ಮತ್ತು ಟೆನ್ನಿಸ್​ ಸಹ ಆಡುತ್ತಾರೆ. 2012ರಲ್ಲಿ ತಂದೆ ಮೃತಪಟ್ಟ ಬಳಿಕ ಸಮರ್ಜೀತ್​ ಮಹರಾಜರಾದರು. ನಂತರದ ವರ್ಷದಲ್ಲಿ ಅವರು 20 ಸಾವಿರ ಕೋಟಿ ರೂಪಾಯಿ ಸಂಪತ್ತನ್ನು ಸಂಪಾದಿಸಿದ್ದಾರೆ.(ಏಜೆನ್ಸೀಸ್​)
ಥ್ರೆಡ್ಸ್​ ಆ್ಯಪ್​ ನಾಗಾಲೋಟಕ್ಕೆ ಬೆಚ್ಚಿಬಿದ್ರಾ ಎಲನ್​ ಮಸ್ಕ್​? ಮೆಟಾ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ

ಕ್ಯಾನ್ಸರ್ ಔಷಧಕ್ಕೆ ತೆರಿಗೆ ವಿನಾಯಿತಿ?; ಜಿಎಸ್​ಟಿ ಮಂಡಳಿಯ ಮುಂದಿನ ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
