ನವದೆಹಲಿ:ಬೆದರಿಕೆ ಹಾಕಿ ತನ್ನ ಫಾಲೋವರ್ಸ್​ ಬಳಿ ಹಣ ಸುಲಿಗೆ ಮಾಡುತ್ತಿದ್ದ ಮೊಹಾಲಿ ಮೂಲದ ಇನ್​ಸ್ಟಾಗ್ರಾಂ ಇನ್ಫ್ಲ್ಯುಯೆನ್ಸರ್​ನನ್ನು ಮಂಗಳವಾರ ಲೂಧಿಯಾನ ಪೊಲೀಸರು ಬಂಧಿಸಿದ್ದಾರೆ.
ಬಂಧಿತಳನ್ನು ಜಸ್ನೀತ್​ ಕೌರ್​ ಎಂದು ಗುರುತಿಸಲಾಗಿದೆ. ಈಕೆ ರಾಜ್ಬೀರ್​ ಕೌರ್​ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿದ್ದಾಳೆ. 2022ರ ನವೆಂಬರ್​ ತಿಂಗಳಲ್ಲಿ ಅಪರಿಚಿತ ನಂಬರ್​ನಿಂದ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಸಂಬಂಧ 33 ವರ್ಷದ ವ್ಯಕ್ತಿಯೊಬ್ಬ ನೀಡಿದ ದೂರಿನ ಆಧಾರದ ಮೇಲೆ ಲೂಧಿಯಾನ ಪೊಲೀಸರು ಜಸ್ನೀತ್​ ಕೌರ್​ಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:25 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಸವಕಲ್ಯಾಣ ಲೇಡಿ ಪಿಎಸ್​ಐ, ಪೇದೆ!
ಯಾರು ಈ ಜಸ್ನೀತ್​ ಕೌರ್​?ಈ ಕೌರ್ Instagram, Telegram ಮತ್ತು Snapchat ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಹು ಖಾತೆಗಳನ್ನು ಹೊಂದಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ 2 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಆಕೆಯ ಬಯೋದಲ್ಲಿ ನಟಿ ಮತ್ತು ಮಾಡೆಲ್​ ಎಂದು ಬರೆದುಕೊಂಡಿದ್ದಾಳೆ. ಶ್ರೀಮಂತರನ್ನು ಆಕರ್ಷಿಸಲು ತನ್ನ ಅರೆ-ನಗ್ನ ಫೋಟೋಗಳನ್ನೇ ಇನ್​ಸ್ಟಾಗ್ರಾಂನಲ್ಲಿ ಕೌರ್​ ಪೋಸ್ಟ್​ ಮಾಡುತ್ತಿದ್ದಳು. ಆಕೆಯ ಸೌಂದರ್ಯಕ್ಕೆ ಮಾರು ಹೋಗಿ ಆಕೆಯನ್ನು ಸಂಪರ್ಕಿಸಿದವರ ಜೊತೆ Instagramನಲ್ಲಿ ಚಾಟ್ ಮಾಡುತ್ತಿದ್ದಳು. ಬಳಿಕ ಬೆತ್ತಲೆ ಫೋಟೋಗಳನ್ನು ಕಳುಹಿಸಿ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದಳು. ಕೊಡದಿದ್ದವರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಳು.
A post shared by JASNEET KAUR 🌹 (@jasneet1703_official)

ಗ್ಯಾಂಗ್​ಸ್ಟರ್​ಗಳ ಸಹಾಯದಿಂದ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದಳು ಎಂದು ವರದಿಯಾಗಿದೆ. ಈ ಹಿಂದೆ 2008ರಲ್ಲಿ ಮೊಹಾಲಿಯಲ್ಲಿ ಇದೇ ಆರೋಪದ ಮೇಲೆ ಜಸ್ನೀತ್ ಕೌರ್​ಳನ್ನು ಬಂಧಿಸಲಾಗಿತ್ತು. 2022ರ ಸೆಪ್ಟೆಂಬರ್​ ತಿಂಗಳಲ್ಲಿ ಜಸ್ನೀತ್ ಕೌರ್ ತಮ್ಮ ಚಾಟ್‌ಗಳನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಗುರ್ಬೀರ್​ ಎಂಬುವರ ಬಳಿ 2 ಕೋಟಿ ರೂಪಾಯಿ ಸುಲಿಗೆಗೆ ಮಾಡಿದ್ದಳು.
ಇದನ್ನೂ ಓದಿ:ನಟ ಸುದೀಪ್​ಗೆ ಬೆದರಿಕೆ ಪತ್ರ ಪ್ರಕರಣ: ಆ ಒಬ್ಬನಿಗಾಗಿ ಸಿಸಿಬಿ ಪೊಲೀಸರಿಂದ ತೀವ್ರ ಹುಡುಕಾಟ
ಏಪ್ರಿಲ್ 1 ರಂದು ಲುಧಿಯಾನದ ಮಾಡೆಲ್ ಟೌನ್ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ ಬಳಿಕ ಮಂಗಳವಾರ ಬಂಧಿಸಲಾಗಿದೆ. ಲೂಧಿಯಾನ ಪೊಲೀಸರು ಬಿಎಂಡಬ್ಲ್ಯು ಮತ್ತು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 384 (ಸುಲಿಗೆ), 506 (ಕ್ರಿಮಿನಲ್ ಬೆದರಿಕೆ), ಮತ್ತು 120-ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್​)
A post shared by JASNEET KAUR 🌹 (@jasneet1703_official)

ಆಧಾರ್-ಪ್ಯಾನ್ ನಂಬರ್​ ಲಿಂಕ್‌ ಮಾಡಲು ದಂಡ: ವಿತ್ತ ಸಚಿವರ ಸಮರ್ಥನೆ ಹೀಗಿದೆ…

ಎರಡನೇ ಪಟ್ಟಿಯಲ್ಲಿ ಈ ಸಮುದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿತು ಕಾಂಗ್ರೆಸ್!

ಮಗಳಿಗಾಗಿ 77 ಕೆಜಿ ಕಳೆದುಕೊಂಡ ತಂದೆ; ಆಕೆಯ ದುಃಖ ಭರಿತ ಮುಖ ಜೀವನವನ್ನೇ ಬದಲಿಸಿತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 10 =
Remember me
