ನವದೆಹಲಿ:ನಕಲಿ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಉದ್ಯಮಿಯೊಬ್ಬರಿಂದ 80 ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿರುವ ಆರೋಪದಲ್ಲಿ ಗುರುಗ್ರಾಮ ಪೊಲೀಸರಿಂದ ಬಂಧನವಾಗಿರುವ ದೆಹಲಿ ಮೂಲದ ಮಹಿಳಾ ಯೂಟ್ಯೂಬರ್​, ಇದೀಗ ಉದ್ಯಮಿ ವಿರುದ್ಧವೇ ಬಾಣ ತಿರುಗಿಸಿದ್ದಾಳೆ. ನನ್ನನ್ನು ಒಲಿಸಿಕೊಳ್ಳಲು ಉದ್ಯಮಿ ಪ್ರಯತ್ನಿಸುತ್ತಿದ್ದರು ಎಂದು ಹೇಳಿದ್ದಾಳೆ.
ನಮ್ರಾ ಖಾದಿರ್​ (22) ಬಂಧಿತ ಆರೋಪಿ. 21 ಉದ್ಯಮಿ ದಿನೇಶ್​ ಯಾದವ್​​ ಎಂಬುವರನ್ನು ಹನಿಟ್ರ್ಯಾಪ್​ ಮಾಡಿ, ನಕಲಿ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ 80 ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿರುವ ಆರೋಪ ಆಕೆಯ ಮೇಲಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಈ ನಮ್ರಾ ಸಾಮಾನ್ಯ ಮಹಿಳೆಯೇನಲ್ಲ. ಸೋಶಿಯಲ್​ ಮೀಡಿಯಾ ಸೆಲೆಬ್ರಿಟಿಯು ಹೌದು. ಯೂಟ್ಯೂಬ್​ನಲ್ಲಿ 6 ಲಕ್ಷ ಸಬ್​ಸ್ಕ್ರೈಬರ್ಸ್​ ಹೊಂದಿರುವ ಈಕೆ ಇನ್​ಸ್ಟಾಗ್ರಾಂನಲ್ಲಿ 2 ಲಕ್ಷ ಅನುಯಾಯಿಗಳು ಹೊಂದಿದ್ದಾಳೆ. ತನ್ನ ಮಾದಕ ವಿಡಿಯೋಗಳಿಂದಲೇ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್​ ಆಗಿದ್ದಾಳೆ. ಆಕೆಯ ಇನ್​ಸ್ಟಾಗ್ರಾಂ ಖಾತೆಯನ್ನು ನೋಡಿದರೆ ಸಾಕಷ್ಟು ಬೋಲ್ಡ್​ ವಿಡಿಯೋಗಳೇ ಕಾಣುತ್ತವೆ.
ವಿರಾಟ್​ ಬೆನಿವಾಲ್​ ಎಂಬಾತನೊಂದಿಗೆ ಮದುವೆ ಆಗಿದ್ದ ನಮ್ರಾ, ಗುರುಂಗಾವ್​ನಲ್ಲಿ ವಾಸವಿದ್ದಳು. ದಂಪತಿ ಆಗಾಗ ಫನ್ನಿ ರೀಲ್ಸ್​ಗಳನ್ನು ಮಾಡಿ ಜಾಲತಾಣ ವೇದಿಕೆಯಲ್ಲಿ ಹರಿಬಿಡುತ್ತಿದ್ದರು. ನಮ್ರಾಳ ಸೌಂದರ್ಯವನ್ನು ನೋಡಿ ಸಂತ್ರಸ್ತ ಉದ್ಯಮಿ ದಿನೇಶ್​ ಯಾದವ್​ ಕೂಡ ಮರುಳಾಗಿದ್ದ.
ಬಾದ್ಶಪುರ್​ ನಿವಾಸಿಯಾಗಿರುವ ಸಂತ್ರಸ್ತ ಉದ್ಯಮಿ ಯಾದವ್​ ಕಳೆದ ಆಗಸ್ಟ್​ ತಿಂಗಳಲ್ಲೇ ದೂರು ನೀಡಿದ್ದರು. ಆದರೆ, ಆರೋಪಿ ಮಧ್ಯಂತರ ಜಾಮೀನಿಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಜಾಮೀನು ಅರ್ಜಿ ರದ್ದುಗೊಂಡ ಬಳಿಕ ನವೆಂಬರ್​ 26ರಂದು ಸೆಕ್ಟರ್​ 50 ಠಾಣಾ ಪೊಲೀಸರು ಎಫ್​ಐಆರ್​ ದಾಖಲಿಸಿದ್ದರು.
ಖಾಸಗಿ ಜಾಹಿರಾತು ಸಂಸ್ಥೆ ನಡೆಸುವ ಯಾದವ್​ ಅವರು ನೀಡಿರುವ ದೂರಿನ ಪ್ರಕಾರ ಕೆಲವು ತಿಂಗಳುಗಳ ಹಿಂದೆ ಖಾದಿರ್​ ಮತ್ತು ಆಕೆಯ ಪತಿ ಮನೀಶ್​ ಪರಿಚಯವಾಯಿತಂತೆ. ಕಂಪನಿಯ ಜಾಹಿರಾತಿಗಾಗಿ ಖಾದಿರ್​ಗೆ ಯಾದವ್​ 2 ಲಕ್ಷ ರೂ. ಹಣ ನೀಡಿದ್ದರಂತೆ. ಇದಾದ ಬಳಿಕ ತನ್ನನ್ನು ಇಷ್ಟಪಡುತ್ತಿರುವುದಾಗಿ ಮತ್ತು ಮದುವೆ ಆಗಲು ಬಯಸಿರುವುದಾಗಿ ಖಾದಿರ್​, ಯಾದವ್​ ಬಳಿ ಹೇಳಿಕೊಂಡಳಂತೆ.
ಆಗಸ್ಟ್​ನಲ್ಲಿ ಖಾದಿರ್​ ಮತ್ತು ಮನೀಶ್​ ಜೊತೆ ಕ್ಲಬ್​ ಒಂದಕ್ಕೆ ತೆರಳಿದೆ. ಅಲ್ಲದೆ, ಒಂದು ರಾತ್ರಿಗೆ ರೂಮ್​ ಬುಕ್​ ಮಾಡಿದೆವು. ಆದರೆ, ಮಾರನೇ ದಿನ ನಕಲಿ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿದಳು. ಬಳಿಕ ನನ್ನಿಂದ 80 ಲಕ್ಷ ರೂ. ಹಣ ಮತ್ತು ಇತರೆ ಉಡುಗೊರೆಗಳನ್ನು ಪಡೆದಿದ್ದಾಳಂತೆ.
ಸಂತ್ರಸ್ತನ ತಂದೆಯ ಬ್ಯಾಂಕ್​ ಖಾತೆಯಿಂದಲೂ 5 ಲಕ್ಷ ರೂ. ಹಣ ವಿತ್​ಡ್ರಾ ಆದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಹಣ ಡ್ರಾ ಆದ ಬಗ್ಗೆ ತಂದೆ ಮಗನನ್ನು ಪ್ರಶ್ನೆ ಮಾಡಿದಾಗ, ಆತ ನಡೆದಿದ್ದೆಲ್ಲವನ್ನು ತಂದೆಯ ಮುಂದೆ ವಿವರಿಸಿದ್ದಾನೆ. ಬಳಿಕ ತಂದೆಯೇ ಮಗನನ್ನು ಕರೆದುಕೊಂಡು ಹೋಗಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದಾಗ ಇಡೀ ಪ್ರಕರಣ ಬಯಲಿಗೆ ಬಂದಿದೆ.
ಸೋಮವಾರ ದೆಹಲಿಯಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮ್ಯಾಜಿಸ್ಟ್ರೇಟ್​ ಕೋರ್ಟ್​ ಮುಂದೆ ಹಾಜರುಪಡಿಸಿ, ನಾಲ್ಕು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಖಾದಿರ್​, ಪತಿ ಮನೀಶ್​ ಅಲಿಯಾಸ್​ ವಿರಾಟ್​ ಬೆನಿವಾಲ್​ ಕೂಡ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಪೊಲೀಸರ ಮುಂದೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಹಣ ಸೇರಿದಂತೆ ಇತರೆ ವಸ್ತುಗಳನ್ನು ಆಕೆಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ಆಕೆಯ ಪತಿಯನ್ನು ಬಂಧಿಸುವುದಾಗಿ ಸೆಕ್ಟರ್​ 50 ಪೊಲೀಸ್​ ಠಾಣೆಯ ಎಸ್​ಎಚ್​ಒ ರಾಜೇಶ್​ ಕುಮಾರ್​ ತಿಳಿಸಿದ್ದಾರೆ.
ಉದ್ಯಮಿ ವಿರುದ್ಧವೇ ಗಂಭೀರ ಆರೋಪತನ್ನ ಮೇಲಿನ ಆರೋಪವನ್ನು ಅಲ್ಲಗೆಳೆದಿರುವ ನಮ್ರಾ, ಮೊದಲನೆಯದು ದಿನೇಶ್ ನನಗೆ 80 ಲಕ್ಷ ರೂಪಾಯಿ ಕೊಟ್ಟಿಲ್ಲ ಮತ್ತು ಅವನು ಕೊಟ್ಟ ಹಣವನ್ನು ಅವನು ತನ್ನ ಕೆಲಸಕ್ಕಾಗಿ ಕೊಟ್ಟಿದ್ದಾರೆ. ಹೋಟೆಲ್‌ಗೆ ಸಂಬಂಧಪಟ್ಟಂತೆ, 2021ರ ಡಿಸೆಂಬರ್ 2 ರಂದು ಶಾಲಿಮಾರ್ ಬಾಗ್‌ನಲ್ಲಿರುವ ನನ್ನ ಮನೆಯಿಂದ ನನ್ನನ್ನು ಕರೆದುಕೊಂಡು ಹೋಗಲು ದಿನೇಶ್ ಬಂದರು. ಗುರುಗ್ರಾಮ್‌ನಲ್ಲಿ ಪಾರ್ಟಿಗೆ ಹೋದೆವು. ಈ ಪಾರ್ಟಿ ನನ್ನ ಯೂಟ್ಯೂಬರ್ ಸ್ನೇಹಿತರೊಬ್ಬರ ಫ್ಲಾಟ್‌ನಲ್ಲಿ ನಡೆಯಿತು. ದಿನೇಶ್​ ಬಗ್ಗೆ ಅಷ್ಟೇನು ಪರಿಚಯ ಇರಲಿಲ್ಲ, ಆದರೆ, ಗೆಳೆಯರ ಸಲಹೆ ಮೇರೆಗೆ ದಿನೇಶ್ ಮತ್ತು ನನ್ನ ಪತಿ ವಿರಾಟ್ ಜೊತೆ ಅಂದು ಪಾರ್ಟಿಗೆ ಹೋಗಿದ್ದೆ. ಆದರೆ, ದಿನೇಶ್ ನನ್ನನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದ. ದುಬಾರಿ ಬೆಲೆಯ ಚಾಕೋಲೇಟ್​ಗಳನ್ನು ಕೊಡುತ್ತಿದ್ದರು ಎಂದು ಆರೋಪ ಮಾಡಿದ್ದಾಳೆ.(ಏಜೆನ್ಸೀಸ್​)
ಹಿಮಾಚಲದಲ್ಲಿ ಅಧಿಕಾರ ಹಸ್ತಾಂತರ; ರಾಜ್ಯದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಸಿದ್ಧತೆ

ಮೋದಿ ಮೋಡಿಗೆ ಪ್ರಚಂಡ ಬಹುಮತ; 27 ವರ್ಷಗಳ ನಂತರವೂ ಗುಜರಾತಿನಲ್ಲಿ ಬಿಜೆಪಿಯದ್ದೇ ರಣಕಹಳೆ | ನೆಲಕಚ್ಚಿದ ಕಾಂಗ್ರೆಸ್, ಎಎಪಿಗೆ ನಿರಾಸೆ

ಸವ್ಯಸಾಚಿ ಅಂಕಣ; ವಿಜಯಾನಂದ ಚಿತ್ರವನ್ನು ಯಾಕೆ ನೋಡಲೇಬೇಕೆಂದರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 17 =
Remember me
