ನವದೆಹಲಿ:ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಓಲಿ ಅವರಿಗೆ ತಾವು ರಾಜೀನಾಮೆ ನೀಡುವುದು ಅನಿವಾರ್ಯ ಎಂಬುದು ಅರಿವಾಗುತ್ತಿದ್ದಂತೆ ತಮ್ಮ ಧ್ವನಿಯನ್ನೇ ಬದಲಿಸಿಕೊಂಡಿದ್ದಾರೆ. ನಾನು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಕೆಳಗಿಳಿದ ಬಳಿಕ ಯಾರು ಈ ಹುದ್ದೆಗೆ ಏರುತ್ತಾರೆ ಎಂಬುದನ್ನು ತಿಳಿಸಿ… ಒಂದಂತೂ ನಿಜ… ಮುಂದಿನ ಪ್ರಧಾನಿ ಸಿಪಿಎನ್​ (ಯೂನಿಫೈಡ್​ ಮಾರ್ಕ್ಸ್​ಸಿಸ್ಟ್​-ಲೆನಿನಿಸ್ಟ್​) ಆಗಿರಬೇಕು ಎಂಬ ಷರತ್ತನ್ನೂ ಹಾಕಿದ್ದಾರೆ.
ಓಲಿ ಅವರ ಈ ರಾಜಕೀಯ ದಾಳ ನೇಪಾಳ ಕಮ್ಯುನಿಸ್ಟ್​ ಪಾರ್ಟಿಯನ್ನು ಕಂಗೆಡೆಸಿದೆ. ವಿವಿಧ ಕಮ್ಯುನಿಸ್ಟ್​ ಬಣಗಳು ಒಂದಾಗಿ ನೇಪಾಳ ಕಮ್ಯುನಿಸ್ಟ್​ ಪಾರ್ಟಿಯನ್ನು ರಚಿಸಲಾಗಿದೆ. ಓಲಿ ಅವರು ಮುಂದಿನ ಪ್ರಧಾನಿ ಸಿಪಿಎನ್​ನಿಂದಲೇ ಆಗಬೇಕು ಎಂಬ ಷರತ್ತು ಹಾಕಿರುವುದನ್ನು ಗಮನಿಸಿದಾಗ ಒಂದಾಗಿರುವ ವಿವಿಧ ಕಮ್ಯುನಿಸ್ಟ್​ ಬಣಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸುವ ಯತ್ನ ಇದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಹೆಚ್ಚು ಪೋರ್ನ್ ವಿಡಿಯೋಗಳನ್ನು ನೋಡುವ ಪುರುಷರಲ್ಲಿ ಈ ಸಮಸ್ಯೆಯೂ ಹೆಚ್ಚಾಗಲಿದೆಯಂತೆ!​
ಓಲಿ ಮತ್ತು ಪುಷ್ಪ ಕಮಲ್​ ಧಹಾಲ್​ ಪ್ರಚಂಡಾ ನಡುವೆ ಅಧಿಕಾರ ಹಂಚಿಕೆ ವಿಷಯದಲ್ಲಿ 50ಫಿಫ್ಟಿ ಒಪ್ಪಂದ ಏರ್ಪಟ್ಟಿತ್ತು. ಆದರೆ, 2019ರಲ್ಲಿ ಧಹಾಲ್​ ಅವರ ಮನವೊಲಿಸಿದ ಓಲಿ ತಾವು ಪ್ರಧಾನಿಯಾಗಿ ದೇಶದ ಆಡಳಿತದಲ್ಲಿ ಮುಂದುವರಿಯುವುದು ಹಾಗೂ ಪ್ರಚಂಡಾ ಪಕ್ಷದ ಆಗುಹೋಗುಗಳ ಮೇಲ್ವಿಚಾರಣೆ ವಹಿಸಿಕೊಳ್ಳುವುದು ಎಂದು ಅಧಿಕಾರ ಹಂಚಿಕೊಂಡಿದ್ದರು. ಆದರೆ ಇತ್ತೀಚೆಗೆ ಪಕ್ಷದಲ್ಲಿ ಮೂರು ಶಕ್ತಿಕೇಂದ್ರಗಳಾಗಿರುವ ಧಹಾಲ್​, ಜಹಾಲ್​ ನಾಥ್​ ಖನಾಲ್​ ಮತ್ತು ಮಾಧವ್​ ನೇಪಾಳ್​ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಂತೆ ಓಲಿ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ.
ಇದೀಗ ಈ ಮೂರು ಶಕ್ತಿಕೇಂದ್ರಗಳ ನಡುವೆ ಅಪನಂಬಿಕೆ ಸೃಷ್ಟಿಸಿ, ಅವರನ್ನು ಒಡೆದು ಆಳುವ ನಿಟ್ಟಿನಲ್ಲಿ ಓಲಿ ತಮ್ಮ ರಾಜಕೀಯ ದಾಳ ಉರುಳಿಸಿದ್ದಾರೆ. ಧಹಾಲ್​ ಪ್ರಧಾನಿ ಹುದ್ದೆ ಆಕಾಂಕ್ಷಿಯಾಗಿದ್ದಾರೆ. ಆದ್ದರಿಂದ, ಮುಂದಿನ ಪ್ರಧಾನಿ ಸಿಪಿಎನ್​ನಿಂದಲೇ ಆಗಬೇಕು ಎಂಬ ಷರತ್ತು ವಿಧಿಸುವ ಮೂಲಕ ಧಹಾಲ್​ ಮತ್ತು ಮಾಧವ್​ ನೇಪಾಳ ಪರಸ್ಪರ ಹೊಡೆದಾಡಿಕೊಳ್ಳುವಂತೆ ಮಾಡುವುದು ಓಲಿ ಅವರ ಉದ್ದೇಶ. ಆದರೆ ಅವರ ಈ ರಾಜಕೀಯ ದಾಳ ಫಲಕಾರಿಯಾಗುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ನೇಪಾಳ ಕಾಂಗ್ರೆಸ್​ ಪಾರ್ಟಿಯ ಮುಖಂಡರೊಬ್ಬರು ಸ್ಪಷ್ಟಪಡಿಸಿದ್ದಾರೆ.
ಕರೊನಾ ಹೆಸರಲ್ಲಿ ದೆಹಲಿಯಲ್ಲಿ ಪ್ಲಾಸ್ಮಾ ಮಾಫಿಯಾ: ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − five =
Remember me
