ನವದೆಹಲಿ:ಯಶಸ್ಸಿಗೆ ವಯಸ್ಸಿಲ್ಲ ಎಂದು ಹೇಳಲಾಗುತ್ತದೆ. ಉತ್ಸಾಹ ಹೊಂದಿದ್ದರೆ, ಕಠಿಣ ಪರಿಶ್ರಮ ಪಟ್ಟರೆ ಯಾವುದೇ ವಯಸ್ಸಿನಲ್ಲಿ ಯಶಸ್ಸನ್ನು ಸಾಧಿಸಬಹುದು. ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಅವರ ವಿಚಾರದಲ್ಲಿ ಈ ಮಾತು ಅಕ್ಷರಃ ನಿಜವಾಗಿದೆ. ಕೇವಲ 18ರ ಹರೆಯದಲ್ಲಿ ಈ ಪ್ರತಿಭಾವಂತ ಬಾಲಕ ಇತಿಹಾಸ ಸೃಷ್ಟಿಸಿದ್ದಾರೆ.
FIDE ವಿಶ್ವಕಪ್ ಚೆಸ್ ಪಂದ್ಯಾವಳಿಯಲ್ಲಿ ಪ್ರಜ್ಞಾನಂದ ಅವರು ಫೈನಲ್‌ಗೆ ತಲುಪಿದ್ದು, ಸೆಮಿ-ಫೈನಲ್‌ನಲ್ಲಿ ಟೈಬ್ರೇಕರ್‌ನಲ್ಲಿ 3.5–2.5 ಅಂತರದಲ್ಲಿ ವಿಶ್ವದ ನಂ. 3 ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸಿದರು. ಪ್ರಜ್ಞಾನಂದ ಈಗ ಚೆಸ್ ವಿಶ್ವಕಪ್‌ನ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎದುರಿಸಲಿದ್ದಾರೆ.
ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೂ ಪ್ರಜ್ಞಾನಂದ ಪಾತ್ರರಾಗಿದ್ದಾರೆ. ಬಹುತೇಕರಿಗೆ ಈ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಯಾರು ಮತ್ತು ಚೆಸ್ ಆಟವನ್ನು ಎಲ್ಲಿಂದ ಕಲಿತರು ಎಂಬ ಕುತೂಹಲವಿದ್ದು, ಅವರ ಬಗ್ಗೆ ಇಲ್ಲಿ ವಿವರವಾಗಿದೆ ಕೊಡಲಾಗಿದೆ ಓದಿ…
FIDE World Cup 2023: ಆರ್ ಪ್ರಜ್ಞಾನಂದ ಯಾರು?ಆರ್ ಪ್ರಜ್ಞಾನಂದ ಭಾರತೀಯ ಚೆಸ್ ಆಟಗಾರನಾಗಿದ್ದು, ಆಗಸ್ಟ್ 5, 2005 ರಂದು ಜನಿಸಿದರು. ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ ತಮ್ಮ ಚಿಕ್ಕ ವಯಸ್ಸಿನಲ್ಲೇ ಪ್ರತಿಭೆಯನ್ನು ಸಾಬೀತುಪಡಿಸಿದರು. 2022 ರಲ್ಲಿ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಗೆದ್ದರು. ಅಷ್ಟೇ ಅಲ್ಲ, 2013 ರಲ್ಲಿ 8 ವರ್ಷದೊಳಗಿನವರ ವರ್ಲ್ಡ್​ ಯೂತ್ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿ, ಏಳನೇ ವಯಸ್ಸಿನಲ್ಲಿ FIDE ಮಾಸ್ಟರ್ ಮತ್ತು 2015 ರಲ್ಲಿ 10 ವರ್ಷದೊಳಗಿನ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ. 2017 ರಲ್ಲಿ, ಮೊದಲ ಬಾರಿಗೆ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಗೆದ್ದರು. ಇದಲ್ಲದೇ ತಮ್ಮ ಚಿಕ್ಕ ವಯಸ್ಸಿನಲ್ಲೇ ಹಲವು ದಾಖಲೆಗಳನ್ನು ಮಾಡಿದ್ದಾರೆ.
ಚೆಸ್ ಆಟವನ್ನು ಯಾರಿಂದ ಕಲಿತರು?ಆರ್ ಪ್ರಜ್ಞಾನಂದ ಚೆಸ್‌ನಲ್ಲಿ ಆಸಕ್ತಿ ತೋರಿಸಲು ಪ್ರಾರಂಭಿಸಿದಾಗ ಅವರಿಗೆ ಕೇವಲ 3.5 ವರ್ಷ. ತಮ್ಮ ಸಹೋದರಿ ವೈಶಾಲಿ ಅವರಿಂದ ಚದುರಂಗದ ಆಟ ಕಲಿತರು. ಸಹೋದರಿ ವೈಶಾಲಿ ಮೊದಲು ಚೆಸ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಈ ಆಟದಲ್ಲಿ ಅವರು ಕ್ರಮೇಣ ಅಂತರರಾಷ್ಟ್ರೀಯ ಚೆಸ್ ಆಟಗಾರರಾದರು. ಹಣಕಾಸಿನ ಅಡೆತಡೆಗಳಿಂದಾಗಿ, ಪ್ರಜ್ಞಾನಂದ ಅವರು ಚೆಸ್ ತರಗತಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ, ಇದಕ್ಕಾಗಿ ಅವರು ತಮ್ಮ ಸಹೋದರಿಯಿಂದ ಚೆಸ್ ಕಲಿಯುತ್ತಿದ್ದರು.
ಚೆಸ್ ಹೊರತುಪಡಿಸಿ ಕ್ರಿಕೆಟ್ ಇಷ್ಟಆರ್ ಪ್ರಜ್ಞಾನಂದ ಅವರು ಚೆಸ್‌ನ ಹೊರತಾಗಿ ಕ್ರಿಕೆಟ್‌ನಲ್ಲಿ ತುಂಬಾ ಒಲವು ಹೊಂದಿದ್ದಾರೆ. ಆಗಾಗ್ಗೆ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಾರೆ. ಆದರೆ ಸಾಮಾಜಿಕ ಮಾಧ್ಯಮದಿಂದ ದೂರವಿರಲು ಇಷ್ಟಪಡುತ್ತಾರೆ.
ಕೇವಲ 40 ವರ್ಷಕ್ಕೆ ಇಹಲೋಕ ತ್ಯಜಿಸಿದ ಖ್ಯಾತ ಗಾಯಕ ರಾಜು ಪಂಜಾಬಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − seven =
Remember me
