ಪಟನಾ:ಬಿಹಾರದ ಉಪಮುಖ್ಯಮಂತ್ರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ 64 ವರ್ಷದ ತಾರಕಿಶೋರ್ ಪ್ರಸಾದ್​ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ಹಿನ್ನೆಲೆಯವರು. ವೈಶ್ಯ ಸಮುದಾಯದ ಕಲ್ವಾರ್ ಎಂಬ ಜಾತಿಗೆ ಸೇರಿದವರು. ಸುಶೀಲ್ ಕುಮಾರ್ ಮೋದಿ ಅವರ ಉತ್ತರಾಧಿಕಾರಿಯಾಗಿ ನಿನ್ನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಆಗಿರುವ ತಾರಕಿಶೋರ್, ಕಟಿಹಾರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಅವರು ಆರ್​ಜೆಡಿ ನಾಯಕ ರಾಮ್ ಪ್ರಕಾಶ್ ಮೆಹ್ತೋ ಅವರನ್ನು 10,500 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. 2005, 2010, 2015 ಮತ್ತು 2020 ಹೀಗೆ ಸತತ ನಾಲ್ಕು ಅವಧಿಗೆ ಅವರು ಈ ಕ್ಷೇತ್ರದಲ್ಲಿ ಗೆಲವು ಕಂಡಿದ್ದಾರೆ. 2015ರಲ್ಲಿ ಅವರು ಲಾಲು ಮತ್ತು ನಿತೀಶ್ ಅವರ ಪ್ರಚಂಡ ಪ್ರಚಾರದ ಹೊರತಾಗಿಯೂ ಈ ಕ್ಷೇತ್ರದಲ್ಲಿ ಬರೋಬ್ಬರಿ ಶೇಕಡ 9.7 ಅಂತರದ ಗೆಲುವು ದಾಖಲಿಸಿ ಅಚ್ಚರಿ ಮೂಡಿಸಿದ್ದರು.
ಇದನ್ನೂ ಓದಿ:ಬಿಹಾರಕ್ಕೆ ಹೊಸ ಸರ್ಕಾರ: ನಿತೀಶ್ ಸಿಎಂ, ತಾರಕಿಶೋರ್, ರೇಣುದೇವಿ ಡಿಸಿಎಂ
ಬಿಜೆಪಿ ಮೂಲಕ ರಾಜಕೀಯ ರಂಗ ಪ್ರವೇಶಿಸುವ ಮುನ್ನ ತಾರಕಿಶೋರ್ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ಸದಸ್ಯರಾಗಿದ್ದರಲ್ಲದೆ, ಹಲವು ಹೊಣೆಗಾರಿಕೆಗಳನ್ನು ನಿಭಾಯಿಸಿದ್ದರು. 1974ರಲ್ಲಿ ಕಟಿಹಾರ್​ನ ಡಿಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ವೈಯಕ್ತಿಕ ಬದುಕಿನ ಕಡೆಗೆ ಗಮನಿಸಿದರೆ ಬಿಹಾರದ ಸಹರ್ಸಾ ಅವರ ಹುಟ್ಟೂರು. ತಂದೆ ಗಂಗಾ ಪ್ರಸಾದ್.
ಯಾರು ಈ ರೇಣು ದೇವಿ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
