ನವದೆಹಲಿ:ಉದ್ಯಮಿ ಸೈರಸ್ ಮಿಸ್ತ್ರಿ ದುರ್ಮರಣಕ್ಕೆ ಈಡಾಗಿರುವುದರಿಂದ 157 ವರ್ಷದಷ್ಟು ಹಳೆಯ ಶಾಪುರ್ಜಿ ಪಲ್ಲೊಂಜಿ ಸಮೂಹದ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಸೈರಸ್ ಮಿಸ್ತ್ರಿ ಟಾಟಾ ಸಮೂಹದ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಅವರ ಹಿರಿಯ ಸೋದರ ಶಾಪುರ್ ಮಿಸ್ತ್ರಿ ಅವರಿಗೆ ಕುಟುಂಬದ ವ್ಯವಹಾರಗಳ ಹೊಣೆಗಾರಿಕೆ ವಹಿಸಲಾಗಿತ್ತು. ಪ್ರಖ್ಯಾತ ಶಾಪುರ್ಜಿ ಗ್ರೂಪ್​ನ ಹಿರಿ ತಲೆ ಪಲ್ಲೊಂಜಿ ಮಿಸ್ತ್ರಿ ಕಳೆದ ಜೂನ್​ನಲ್ಲಷ್ಟೇ ಮೃತಪಟ್ಟಿದ್ದು ಈಗ ಅವರ ಕಿರಿಯ ಮಗನ ಹಠಾತ್ ಮರಣವು ಕುಟುಂಬಕ್ಕೆ ಸಹಿಸಲಾಗದ ಆಘಾತವಾಗಿದೆ. ಸೈರಸ್ ಮಿಸ್ತ್ರಿಗೆ ಪತ್ನಿ ರೋಹಿಕಾ ಹಾಗೂ ಪುತ್ರರಾದ ಫಿರೋಜ್ ಮತ್ತು ಝುಹಾನ್ ಇದ್ದಾರೆ.
30 ಬಿಲಿಯನ್ ಡಾಲರ್ ಮೊತ್ತದ ವೈವಿಧ್ಯಮಯ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಪಲ್ಲೊಂಜಿ ಗ್ರೂಪ್​ನ ಸಂಸ್ಥಾಪಕರು ಸೈರಸ್ ಮಿಸ್ತ್ರಿಯ ಮುತ್ತಜ್ಜ ಹಿರಿಯ ಪಲ್ಲೊಂಜಿ ಮಿಸ್ತ್ರಿ. ಅವರು 1865ರಲ್ಲಿ ಲಿಟ್ಲ್​ವುಡ್ ಪಲ್ಲೊಂಜಿ ಆಂಡ್ ಕಂಪನಿಯಾಗಿ ಅದನ್ನು ಸ್ಥಾಪಿಸಿದ್ದರು. ಸೈರಸ್​ರ ತಂದೆ ಪಲ್ಲೊಂಜಿ ಮಿಸ್ತ್ರಿ 2022 ಜೂನ್ 28ರಂದು 93ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಅವರು ‘ಬಾಂಬೆ ಹೌಸ್​ನ ಫ್ಯಾಂಟಮ್ ಎಂದೇ ಖ್ಯಾತರಾಗಿದ್ದರು.
300 ಕೋಟಿ ಡಾಲರ್:ಬ್ಲೂಮ್​ಗ್ ಬಿಲಿಯಾಧಿಪತಿಗಳ ಪಟ್ಟಿ ಪ್ರಕಾರ ಶಾಪುರ್ಜಿ ಪಲ್ಲೊಂಜಿ ಸಮೂಹ (ಎಸ್​ಪಿ ಗ್ರೂಪ್) 2022ರಲ್ಲಿ 300 ಕೋಟಿ ಡಾಲರ್ ಬೆಲೆಬಾಳುವ ಉದ್ಯಮ ಸಮೂಹವಾಗಿದೆ. 2016ರ ಅಕ್ಟೋಬರ್​ನಲ್ಲಿ ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಗ್ರೂಪ್​ನ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿದ ನಂತರ ಮಿಸ್ತ್ರಿ ತೋರಿದ ಹೋರಾಟವು ಭಾರತದ ಕೈಗಾರಿಕೋದ್ಯಮದ ಇತಿಹಾಸದಲ್ಲೇ ಕಂಡುಕೇಳರಿಯದ ಕಾರ್ಪೆರೇಟ್ ಜಟಾಪಟಿಯಾಗಿ ದಾಖಲಾಗಿದೆ. ಸೈರಸ್ ನೇತೃತ್ವದಲ್ಲಿ ಟಾಟಾ ಗ್ರೂಪ್ (ಟಾಪ್ 20 ಲಿಸ್ಟೆಡ್ ಗ್ರೂಪ್ ಕಂಪನಿ) ಶೇಕಡ 12.5 ಸಿಎಜಿಆರ್​ನಷ್ಟು ಬೆಳವಣಿಗೆಯಾಗಿತ್ತು ಹಾಗೂ ಸಾಲದ ಪ್ರಮಾಣ ನಿಧಾನಗೊಂಡಿತ್ತು. ಸಾಲ 1.89 ಲಕ್ಷ ಕೋಟಿ ರೂ.ಯಿಂದ 2.29 ಲಕ್ಷ ಕೋಟಿ ರೂಪಾಯಿಗೆ, ಶೇಕಡ 9.98ರಷ್ಟು ಏರಿಕೆಯಾಗಿತ್ತು. ಆದರೆ ಈ ಅವಧಿಯಲ್ಲಿ ನಿವ್ವಳ ಲಾಭ ಶೇಕಡ 42.3 ಸಿಎಜಿಆರ್​ನೊಂದಿಗೆ ಏರಿತ್ತು. ಅವರ ಅವಧಿಯಲ್ಲಿ ಕಂಪನಿಗಳು ದಕ್ಷವಾಗಿ ಕಾರ್ಯ ನಿರ್ವಹಿಸಿದ್ದಕ್ಕೆ ಅದು ಸಾಕ್ಷಿಯಾಗಿತ್ತು. ಸೈರಸ್ ಉಸ್ತುವಾರಿಯಲ್ಲಿ ಕಂಪನಿ ವಹಿವಾಟು ದುಪ್ಪಟ್ಟುಗೊಂಡಿದ್ದು ಅವರು ಕಂಪನಿ ಬಿಡುವಾಗ ಅದರ ವ್ಯವಹಾರ 100 ಕೋಟಿ ಡಾಲರ್​ಗೂ ಹೆಚ್ಚಾಗಿತ್ತು.
ಅಂಗಗಳಿಗೆ ತೀವ್ರ ಹಾನಿ:ಭಾನುವಾರ ಸಂಭವಿಸಿದ ಕಾರು ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಅವರ ಆಂತರಿಕ ಅಂಗಗಳು ತೀವ್ರವಾಗಿ ಹಾನಿಗೊಂಡಿವೆ ಎಂದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ಮಿಸ್ತ್ರಿ ಮತ್ತು ಅವರ ಜೊತೆ ಕಾರಿನಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಜಹಾಂಗಿರ್ ಪಾಂಡೋಲೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಶವಗಳನ್ನು ಮುಂಬೈಯ ಸರ್ಕಾರಿ ಜೆಜೆ ಆಸ್ಪತ್ರೆಗೆ ತರಲಾಗಿದ್ದು ಸೋಮವಾರ ಮುಂಜಾನೆ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸೈರಸ್ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಹಿಂಬದಿಯ ಸೀಟಿನಲ್ಲಿ ಏರ್ ಬ್ಯಾಗ್ ಇರಲಿಲ್ಲ. ಇದು ಅವರ ಸಾವಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ವೈವಿಧ್ಯ ವ್ಯವಹಾರ:ಎಂಜಿನಿಯರಿಂಗ್​ನಿಂದ ನಿರ್ಮಾಣ ಕ್ಷೇತ್ರದವರೆಗೆ ಗ್ರಾಹಕ ವಸ್ತುಗಳಿಂದ ಸೌರ ವಿದ್ಯುತ್ ವರೆಗೆ ನಾನಾ ವಲಯಗಳಲ್ಲಿ ಎಸ್​ಪಿ ಗ್ರೂಪ್ ವ್ಯವಹಾರ ನಿರತವಾಗಿದೆ. ಆದರೆ, ಅತಿಯಾದ ವ್ಯವಹಾರ ಬೇಡವೆಂದು ಗ್ರಾಹಕ ವಸ್ತು ಹಾಗೂ ಸೌರ ಶಕ್ತಿ ಕ್ಷೇತ್ರದಿಂದ ಹಿಂದೆ ಸರಿದಿತ್ತು.
ಮಂಡಳಿಯಲ್ಲಿ ಮಕ್ಕಳು:2019ರಿಂದೀಚೆಗೆ ಎಸ್​ಪಿ ಸಮೂಹದ ಆಡಳಿತದಲ್ಲಿ ಹಲವು ಬದಲಾವಣೆಗಳಾಗಿವೆ. ಶಾಪುರ್​ರ 26 ವರ್ಷದ ಮಗ ಪಲ್ಲೊನ್ ಕಂಪನಿಯ ಆಡಳಿತ ಮಂಡಳಿಗೆ ಸೇರ್ಪಡೆ ಮಾಡಲಾಗಿತ್ತು. ಪುತ್ರಿ ತಾನ್ಯಾ ಗ್ರೂಪ್​ನ ಕಾರ್ಪೆರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್​ಆರ್) ಚಟುವಟಿಕೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 4 =
Remember me
