ನವದೆಹಲಿ:ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಯು ಆಘಾತಕಾರಿ ವರದಿಯೊಂದನ್ನು ಬಹಿರಂಗಪಡಿಸಿದ್ದು, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹೆಚ್ಚಾಗುತ್ತಿರುವ ಸಾಂಕ್ರಾಮಿಕ ರೋಗವು ಅನೇಕ ತೊಂದರೆಗಳಿಗೆ ಕಾರಣವಾಗಲಿದ್ದು, ಹೆರಿಗೆ ಸಮಯದಲ್ಲಿ ಮಹಿಳೆಯರು ಸಾಯುವ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಡಬ್ಲ್ಯುಎಚ್​ಒ ಸಾಮಾನ್ಯ ಕಾರ್ಯದರ್ಶಿ ಟೆಡ್ರೋಸ್​ ಅಧಾನಮ್​ ಘೆಬ್ರೆಯೆಸಸ್ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಗ್ಯ ಸೇವೆಗಳನ್ನು ಪಡೆಯುವಲ್ಲಿ ಹೆಣಗಾಡುತ್ತಿರುವವರ ಮೇಲೆ ಜಾಗತಿಕವಾಗಿ ಕಾಡುತ್ತಿರುವ ಸಾಂಕ್ರಾಮಿಕ ಪ್ರಭಾವ ಬೀರಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:VIDEO| ರಾತ್ರಿ ತನ್ನಷ್ಟಕ್ಕೆ ತಾನೇ ವರ್ಕೌಟ್​ ಮಾಡುತ್ತಿರೋ ಜಿಮ್​ ಯಂತ್ರ: ನಿಗೂಢ ಭೇದಿಸಿದ ಪೊಲೀಸರು!
ಮಹಿಳೆಯರು, ಮಕ್ಕಳು ಹಾಗೂ ಹದಿಹರೆಯದವರ ಮೇಲೆ ಪರಿಣಾಮ ಹೆಚ್ಚಿಗೆ ಇರಲಿದೆ. ಮಹಾಮಾರಿ ಕರೊನಾ ಅನೇಕ ದೇಶಗಳ ಆರೋಗ್ಯ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಇದರಿಂದ ಹೆರಿಗೆ ಸಮಯದಲ್ಲಿ ಸಾವಿನ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಡಬ್ಲ್ಯುಎಚ್​ಒ ಎಚ್ಚರಿಸಿದೆ.
ತಾಯಂದಿರು ತಮ್ಮ ನವಜಾತ ಶಿಶುಗಳಿಗೆ ಕರೊನಾ ವೈರಸ್ ಹರಡುವ ಅಪಾಯವನ್ನು ಡಬ್ಲ್ಯುಎಚ್​ಒ ಇತ್ತೀಚೆಗಷ್ಟೇ ತನಿಖೆ ಮಾಡಿದೆ. ಸ್ತನ್ಯಪಾನದ ಮೂಲಕ ವೈರಸ್ ಹರಡುವ ಅಪಾಯಗಳನ್ನು ಅರಿತಿರುವುದಾಗಿ ಟೆಡ್ರೊಸ್ ಹೇಳಿದ್ದಾರೆ. ಅಲ್ಲದೆ, ಖಿನ್ನತೆ, ಒತ್ತಡ ಸೇರಿದಂತೆ ಮುಂತಾದ ಮಾನಸಿಕ ರೋಗಕ್ಕೆ ಒಳಗಾಗಿರುವ ಯುವ ಜನಾಂಗದ ಬಗ್ಗೆಯೂ ಡಬ್ಲ್ಯುಎಚ್​ಒ ಕಳವಳ ವ್ಯಕ್ತಪಡಿಸಿದ್ದು, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಮನವಿ ಮಾಡಿದೆ.(ಏಜೆನ್ಸೀಸ್​)ಇದನ್ನೂ ಓದಿ:ಅನ್ಯ ಧರ್ಮದ ಯುವಕನ ಜತೆ ನಾಪತ್ತೆಯಾಗಿದ್ದ ಹಿಂದು ಯುವತಿ ಪತ್ತೆ: ಸುಳ್ಳು ಹೇಳಿ ಸಿಕ್ಕಿಬಿದ್ದ ಆರೋಪಿ
VIDEO: ವಿಶ್ವಸಂಸ್ಥೆಯಲ್ಲಿ ಭಾರತದ ಹೆಜ್ಜೆ ಗುರುತು ಹೇಗಿತ್ತೆಂಬುದನ್ನು ವಿವರಿಸಿದ್ದಾರೆ ಯುಎನ್​ ರಾಯಭಾರಿ ಟಿ.ಎಸ್.ತಿರುಮೂರ್ತಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 2 =
Remember me
