ಜಿನಿವಾ:ಕರೊನಾದಿಂದ ಕ್ವಾರಂಟೈನ್​ಗೆ ಒಳಗಾದವರು, ಐಸೋಲೇಷನ್​ ವಾರ್ಡ್​ಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರು ಸಾಕಪ್ಪ ಕರೊನಾ ಸಹವಾಸ ಎಂದುಕೊಂಡೇ ಮನೆಗೆ ಬಂದಿರುತ್ತಾರೆ. ಆದರೆ, ಅವರಿಗೆ ಕರೊನಾ ಮತ್ತೆ ವಕ್ಕರಿಸುವುದಿಲ್ಲ ಎನ್ನುವುದಕ್ಕೆ ಯಾವುದೇ ಖಾತ್ರಿಯಿಲ್ಲ ಎನ್ನುತ್ತ ವಿಶ್ವ ಆರೋಗ್ಯ ಸಂಸ್ಥೆ.
ಕೋವಿಡ್- 19ಗೆ ತುತ್ತಾಗಿ ಗುಣಮುಖರಾದವರಿಗೆ ‘ರೋಗ ನಿರೋಧಕ ಶಕ್ತಿಯುಳ್ಳವರು’ ಎಂದು ಪಾಸ್​ಪೋರ್ಟ್​ ನೀಡಬೇಕೆಂಬ ಪ್ರಸ್ತಾಪ ಕೆಲ ದೇಶಗಳಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಒಮ್ಮೆ ಕೋವಿಡ್​-19ಕ್ಕೆ ತುತ್ತಾದರೆ, ಭವಿಷ್ಯದಲ್ಲಿ ಮತ್ತೆಂದೂ ರೋಗ ಕಾಣಿಸಿಕೊಳ್ಳದಂತೆ ರಕ್ಷಣೆ ಪಡೆದಂತಲ್ಲ ಎಂದು ಸ್ಪಷ್ಟನೆ ನೀಡಿದೆ.
ಪ್ರಸ್ತುತ ರೋಗ ಕಾಣಿಸಿಕೊಂಡವರಲ್ಲಿ ಉಂಟಾಗಿರುವ ರೋಗ ಪ್ರತಿರೋಧ ಶಕ್ತಿಗಳು ಅವರನ್ನು ಮತ್ತೆ ಕಾಯಿಲೆಗೆ ಅಥವಾ ಕೋವಿಡ್​-19ಗೆ ತುತ್ತಾಗದಂತೆ ತಡೆಯುತ್ತವೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಇದಲ್ಲದೇ, ಗುಣಮುಖರಾದ ಹಲವರಲ್ಲಿ ಮತ್ತೆ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿರುವ ವಿದ್ಯಮಾನ ಚೀನಾ, ಇಟಲಿ, ಸ್ಪೇನ್​ನಲ್ಲಿ ಕಂಡುಬಂದಿದೆ.
ಕೋವಿಡ್​-19 ಚಿಕಿತ್ಸೆ ಪಡೆದು ಗುಣಮುಖರಾದವರು ಕೆಲಸ ನಿರ್ವಹಿಸಲು ಪ್ರಯಾಣ ಮಾಡಲು ಇಮ್ಯೂನಿಟಿ ಪಾಸ್​ಪೋರ್ಟ್​ ಅಥವಾ ರಿಸ್ಕ್​ ಫ್ರೀ ಪ್ರಮಾಣ ಪತ್ರಗಳನ್ನು ನೀಡಬೇಕೆಂಬ ಸಲಹೆ ಕೇಳಿ ಬಂದಿತ್ತು. ಇಂಥ ಪ್ರಮಾಣ ಪತ್ರ ನೀಡಿದ್ದಾದಲ್ಲಿ, ಸಾಮಾನ್ಯ ಜನರ ಆರೋಗ್ಯದ ಜತೆಗೆ ಚೆಲ್ಲಾಟವಾಡಿದಂತಾಗುತ್ತದೆ. ಅಲ್ಲದೇ ಸೋಂಕು ವ್ಯಾಪಿಸುವ ಸಂಭಾವ್ಯತೆ ಹೆಚ್ಚಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ದೇಹದ ಪ್ರತಿರೋಧ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ಕೆಲ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಆದರೆ, ಈ ಸಂಶೋಧನೆಗಳು ರೋಗಕ್ಕೆ ಮತ್ತೆ ತುತ್ತಾಗದಂತೆ ತಡೆಯುವ ಉದ್ದೇಶ ಹೊಂದಿಲ್ಲ ಎಂದು ಆರೋಗ್ಯ ಸಂಸ್ಥೆ ಹೇಳಿದೆ.
ಕಾಲೇಜುಗಳನ್ನು ಸೆಪ್ಟಂಬರ್​ನಿಂದ ಆರಂಭಿಸಿ, ಸರ್ಕಾರ ನೇಮಿಸಿದ ಸಮಿತಿಯಿಂದಲೇ ಯುಜಿಸಿಗೆ ಶಿಫಾರಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
