ನವದೆಹಲಿ:ಸದ್ಯ ದೇಶದಲ್ಲಿ ಕರೊನಾ 4ನೇ ಅಲೆಯ ಆತಂಕ ಶುರುವಾಗಿದ್ದು, ಈ ನಡುವೆ ಲಸಿಕೆ ಹಾಕಿಸಿಕೊಂಡವರು ಮಾತ್ರ ಸ್ವಲ್ಪ ಮಟ್ಟಿಗೆ ನಿರಾಳ ಪಡೆದುಕೊಳ್ಳಬಹುದು.
ಈ ನಡುವೆ ಬೂಸ್ಟರ್ ಡೋಸ್​ ಪಡೆದುಕೊಂಡ ಶೇ.70 ರಷ್ಟು ಮಂದಿಗೆ ಕರೊನಾ ಸೋಂಕು ತಗುಲುವುದಿಲ್ಲ ಎಂಬ ವಿಷಯ ಅಧ್ಯಯನದಿಂದ ತಿಳಿದುಬಂದಿದೆ.
ದೇಶಾದ್ಯಂತ ಬೂಸ್ಟರ್​ ಲಸಿಕೆ ಪಡೆದುಕೊಂಡ 6 ಸಾವಿರ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಶೇ.45ರಷ್ಟು ಮಂದಿ ಲಸಿಕೆ ಪಡೆದವರಾಗಿದ್ದರು. ಇನ್ನು ಮೂರನೇ ಲಸಿಕೆ ಪಡೆಯದವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿವೆ ಎಂದು ಇಂಡಿಯಾ ಮೆಡಿಕಲ್​ ಅಸೋಸಿಯೇಷನ್​ ನ್ಯಾಷನಲ್​ ಟಾಸ್ಕ್​ ಫೋರ್ಸ್​ ತಿಳಿಸಿದೆ.
5971 ಮಂದಿ ಲಸಿಕೆ ಪಡೆದವರಲ್ಲಿ ಶೇ.24ರಷ್ಟು ಜನತು 40 ವರ್ಷದೊಳಗಿನವರಾಗಿದ್ದರು. ಇನ್ನು ಶೇ.50ರಷ್ಟು ಮಂದಿ 40 ರಿಂದ 59 ವರ್ಷದೊಳಗಿನವರಾಗಿದ್ದರು. ಇದರಲ್ಲಿ ಶೇ.45ರಷ್ಟು ಮಹಿಳೆಯರನ್ನು ಸಮೀಕ್ಷೆಗೊಳಪಡಿಸಲಾಗಿತ್ತು.
ಎರಡು ಲಸಿಕೆ ಬಳಿಕ ತೆಗೆದುಕೊಳ್ಳುವ ಬೂಸ್ಟರ್ ಡೋಸ್​ ಕರೊನಾ ಸೋಂಕಿನಿಂದ ಸಂಪೂರ್ಣವಾಗಿ ರಕ್ಷಿಸುತ್ತದೆ ಎಂದು ಈ ಅಧ್ಯಯನದಿಂದ ತಿಳಿದುಬಂದಿದೆ.
ಇನ್ನು ಮೂರು ಲಸಿಕೆ ಪಡೆದವರನ್ನು ಕರೊನಾ ಮೂರನೇ ಅಲೆ ಸಂದರ್ಭದಲ್ಲಿ ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + twelve =
Remember me
