ಹೈದರಾಬಾದ್​:ದೇಶದ ಅತಿ ಕಿರಿಯ ರಾಜ್ಯ ಎಂದೇ ಹೆಸರುವಾಸಿಯಾಗಿರುವ ತೆಲಂಗಾಣ 2014ರಲ್ಲಿ ರಚನೆಯಾದಾಗಿನಿಂದ ಭಾರತ್​ ರಾಷ್ಟ್ರ ಸಮಿತಿ (ಈ ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ) ಆಡಳಿತದಲ್ಲಿತ್ತು. ನಿನ್ನೆ (ಡಿ.03) ಪ್ರಕಟವಾದ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಎರಡು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ತೆಲಂಗಾಣದಲ್ಲಿ ಬಿಆರ್​ಎಸ್ ಪಕ್ಷವನ್ನು​ ಮಣಿಸಿ ಕಾಂಗ್ರೆಸ್​ ಅಧಿಕಾರದ ಗದ್ದುದೆ ಏರಿದೆ.
ತೆಲಂಗಾಣ ರಾಜ್ಯವು ಒಟ್ಟು 119 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್​ 65 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದ್ದು, ಆಡಳಿತಾರೂಢ ಬಿಆರ್​ಎಸ್​ 39 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು. ನಿನ್ನೆ ರಾತ್ರಿಯೇ ತೆಲಂಗಾಣ ಕಾಂಗ್ರೆಸ್ ಶಾಸಕತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಆದರೆ, ಇದುವರೆಗೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಶೀಘ್ರದಲ್ಲೆ ಕಾಂಗ್ರೆಸ್​ ಹೈಕಮಾಂಡ್​ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ.​
ಇದರ ನಡುವೆ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ಚರ್ಚೆ ಜೋರಾಗಿದ್ದು, ಈ ಮೂವರು ಹೆಸರುಗಳು ಮುಂಚೂಣಿಯಲ್ಲಿದೆ. ಅದರಲ್ಲೂ ರೇವಂತ್​ ರೆಡ್ಡಿ ಹೆಸರು ಮುಂಚೂಣಿಯಲ್ಲಿದೆ. ಮೂಲಗಳ ಪ್ರಕಾರ ರೇವಂತ್​ ರೆಡ್ಡಿ ತೆಲಂಗಾಣದ ಮುಂದಿನ ಸಿಎಂ ಎಂದು ಹೇಳಲಾಗಿದೆ. ಇಂದು ರಾತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಸಿದ್ಧತೆ ನಡೆದಿತ್ತು. ಆದರೆ, ಸಿಎಂ ಅಭ್ಯರ್ಥಿ ಅಧಿಕೃತ ಘೋಷಣೆಯಾಗದ ಕಾರಣ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಮುಂದೂಡಲಾಗಿದೆ. ಹೆಸರು ಫೈನಲ್​ ಆದ ಬಳಿಕವಷ್ಟೇ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಆದರೆ, ಪಕ್ಷದ ಒಳಗೆ ರೇವಂತ್​ ರೆಡ್ಡಿ ಸಿಎಂ ಸ್ಥಾನಕ್ಕೆ ವಿರೋಧವಿದೆ ಎಂದು ಹೇಳಲಾಗುತ್ತಿದೆ. ರೇವಂತ್​ ಹೆಸರೂ ಮುಂಚೂಣಿಯಲ್ಲಿದ್ದರೂ ಕೊನೆಯ ಗಳಿಗೆಯಲ್ಲಿ ರೇವಂತ್​ಗೆ ಆಘಾತವಾದರೂ ಅಚ್ಚರಿಪಡಬೇಕಿಲ್ಲ.
ರೇವಂತ್​ ರೆಡ್ಡಿತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥರಾಗಿ ರೇವಂತ್ ರೆಡ್ಡಿ ಅವರ ಕೆಲಸವೂ ಪಕ್ಷದ ಒಳಗಡೆಯೇ ಹಲವಾರು ವಿರೋಧಿಗಳನ್ನು ಹುಟ್ಟುಹಾಕವಂತೆ ಮಾಡಿದೆ. ಆದರೆ, ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತ 54 ವರ್ಷದ ರೇವಂತ್​ ರೆಡ್ಡಿ, ದಕ್ಷಿಣ ರಾಜ್ಯದಲ್ಲಿ BRS ಅನ್ನು ಹೋಗಲಾಡಿಸಿ, ಕಾಂಗ್ರೆಸ್​ ಕಹಳೆ ಮೊಳಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪಕ್ಷವು ಅವರನ್ನು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ವಿರುದ್ಧವೇ ಕಣಕ್ಕಿಳಿಸಿತು, ಇದು ರಾಜ್ಯದಲ್ಲಿ ರೇವಂತ್​ ಅವರ ಖ್ಯಾತಿಗೆ ತಾಜಾ ಸಾಕ್ಷಿಯಾಗಿದೆ. 2021ರ ಜುಲೈ ತಿಂಗಳಲ್ಲಿ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥರಾಗಿ ನೇಮಕಗೊಂಡ ನಂತರ ರೇವಂತ್​ ರೆಡ್ಡಿ ಅವರು ಬೀದಿಗಿಳಿದು ಹೋರಾಡಿದರು. ಆಡಳಿತಾರೂಢ BRS ಸರ್ಕಾರದ ವಿರುದ್ಧ ಹಲವಾರು ಸಮಸ್ಯೆಗಳ ಕುರಿತು ಬೀದಿಗಳಲ್ಲಿ ಪ್ರತಿಭಟನೆಗಳನ್ನು ನಡೆಸಿ, ಎಲ್ಲರ ಗಮನ ಸೆಳೆದರು.
ಭಟ್ಟಿ ವಿಕ್ರಮಾರ್ಕ ಮಲ್ಲುಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ಸಿಎಂ ಕೆಸಿಆರ್ ಅವರನ್ನು ಪದಚ್ಯುತಗೊಳಿಸಲು ಕಾಂಗ್ರೆಸ್‌ನ ತೀವ್ರ ಪ್ರಚಾರದ ಮತ್ತೊಂದು ಪ್ರಮುಖ ಮುಖವೆಂದು ಗುರುತಿಸಿಕೊಂಡರು. ಚುನಾವಣೆಗೂ ಮುನ್ನ ರಾಜ್ಯಾದ್ಯಂತ 1,400 ಕಿ.ಮೀ ಪಾದಯಾತ್ರೆ ನಡೆಸಿ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಲ್ಲದೆ, ಅವರೊಂದಿಗೆ ಮಾತನಾಡಿ ಭರವಸೆಗಳನ್ನು ನೀಡುವ ಮೂಲಕ ಕಾಂಗ್ರೆಸ್​ ಪರ ಅಲೆ ಎಬ್ಬಿಸಿದರು. 62ರ ಹರೆಯದ ಭಟ್ಟಿ ವಿಕ್ರಮಾರ್ಕ್​ ಅವರ ‘ಜನತಾ ಯಾತ್ರೆ’ ರಾಜ್ಯದಲ್ಲಿ ಕಾಂಗ್ರೆಸ್‌ನ ಪುನರುತ್ಥಾನವನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಉತ್ತಮ್​ ಕುಮಾರ್​ ರೆಡ್ಡಿಉತ್ತಮ್ ಕುಮಾರ್ ರೆಡ್ಡಿ ಅವರು 2021ರ ಜುಲೈ ರವರೆಗೆ ಕಾಂಗ್ರೆಸ್​ನ ತೆಲಂಗಾಣ ಘಟಕದ ಮುಖ್ಯಸ್ಥರಾಗಿದ್ದರು. ನಂತರ ಅವರ ಬದಲಾಗಿ ರೇವಂತ್ ರೆಡ್ಡಿ ಅವರನ್ನು ನೇಮಿಸಲಾಯಿತು. ಆದರೆ ರಾಜ್ಯದ ಪಕ್ಷದ ಕಾರ್ಯಕರ್ತರಲ್ಲಿ ಉತ್ತಮ್​ ಕುಮಾರ್​ ರೆಡ್ಡಿ ಸಾಕಷ್ಟು ಜನಪ್ರಿಯರಾಗಿದ್ದಾರೆ ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಲ್ಪಡುವ ಹೆಸರುಗಳಲ್ಲಿ ಒಬ್ಬರಾಗಿದ್ದಾರೆ.(ಏಜೆನ್ಸೀಸ್​)
2022ರಲ್ಲಿ ಹೃದಯಾಘಾತಗಳ ಸಂಖ್ಯೆ 12 ರಷ್ಟು ಏರಿಕೆ: ಕೋವಿಡ್​​​​ ಪ್ರಭಾವ ಎಂದ ತಜ್ಞರು

ಅರ್ಜುನ ಕೇವಲ ಆನೆಯಲ್ಲ ಕನ್ನಡಿಗರ ಭಾವನೆ! ಇಂದು ನಡೆದಿದ್ದು ಕಾದಾಟವಲ್ಲ ಪ್ರಾಣ ತ್ಯಾಗ

ಮೇಲಧಿಕಾರಿಗಳ ಕಿರುಕುಳ ಖಂಡಿಸಿ ಬಿಬಿಎಂಪಿ ಅಧಿಕಾರಿ,ನೌಕರರ ಸಂಘದಿಂದ ನಾಳೆ ಸಭೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − 1 =
Remember me
