ನವದೆಹಲಿ:ಟಿ20 ವರ್ಲ್ಡ್​ ಕಪ್​ ಮುಗಿಯುವ ವೇಳೆಗೆ ಭಾರತೀಯ ಕ್ರಿಕೆಟ್​ ತಂಡದ ಹೆಡ್​​ ಕೋಚ್ ಸ್ಥಾನದಿಂದ​ ರವಿ ಶಾಸ್ತ್ರಿ ಅವರಿಗೆ ನಿವೃತ್ತಿ ಸಿಗಲಿದೆ. ತದನಂತರ ಆ ಸ್ಥಾನಕ್ಕೆ ಯಾರು ನಿಯುಕ್ತಿಗೊಳ್ಳಲಿದ್ದಾರೆ ಎಂಬ ಪ್ರಶ್ನೆ ಕ್ರಿಕೆಟ್​ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ. ಇದೀಗ ಬಂದಿರುವ ವರದಿಯ ಪ್ರಕಾರ ಅನಿಲ್​ ಕುಂಬ್ಳೆ ಮತ್ತು ವಿವಿಎಸ್​ ಲಕ್ಷ್ಮಣ್​ರನ್ನು ಈ ಜವಾಬ್ದಾರಿ ವಹಿಸಿಕೊಳ್ಳಲು ಬಿಸಿಸಿಐ ಕೇಳಲಿದೆ ಎನ್ನಲಾಗಿದೆ.
ಅನಿಲ್​ ಕುಂಬ್ಳೆ ಈ ಮುಂಚೆಯೇ ಭಾರತ ತಂಡದ ಕೋಚ್​ ಆಗಿ 2016-17 ರಲ್ಲಿ ಒಂದು ವರ್ಷ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಆ ಸಮಯದಲ್ಲಿ ನಾಯಕ ವಿರಾಟ್​ ಕೊಹ್ಲಿ ಜೊತೆಗೆ ಉಂಟಾದ ಭಿನ್ನಾಭಿಪ್ರಾಯದಿಂದ ಅವರು ರಾಜೀನಾಮೆ ನೀಡಿದ್ದರು. ಅದೇ ಈಗ ಟಿ20 ನಾಯಕತ್ವ ತ್ಯಜಿಸುವುದಾಗಿ ಕೊಹ್ಲಿ ಹೇಳಿರುವ ಬೆನ್ನಲ್ಲೇ ಕುಂಬ್ಳೆ ಅವರನ್ನು ಹೆಡ್​ ಕೋಚ್​ ಆಗಿ ನೇಮಿಸುವ ಸಾಧ್ಯತೆ ಹೆಚ್ಚಿದೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಏಕದಿನ ನಾಯಕತ್ವವೂ 2023ರ ವಿಶ್ವಕಪ್‌ವರೆಗೆ ಸುರಕ್ಷಿತವಲ್ಲ!
ಕುಂಬ್ಳೆಯವರಂತೆಯೇ ಐಪಿಎಲ್​ನ ಸನ್​ರೈಸರ್ಸ್ ಹೈದರಾಬಾದ್​ ತಂಡದ ಮಾರ್ಗದರ್ಶಕರಾಗಿ ಕೋಚಿಂಗ್​ಅನುಭವ ಹೊಂದಿರುವ ಲಕ್ಷಣ್​ ಬಗ್ಗೆಯೂ ಸೌರವ್​ ಗಂಗೂಲಿ ನೇತೃತ್ವದ ಬಿಸಿಸಿಐ ಒಲವು ಹೊಂದಿದೆ ಎನ್ನಲಾಗಿದೆ. ಆದಾಗ್ಯೂ 100 ಕ್ಕೂ ಹೆಚ್ಚು ಟೆಸ್ಟ್​ ಮ್ಯಾಚ್​ಗಳನ್ನು ಆಡಿರುವ ಕುಂಬ್ಳೆ ಮತ್ತು ಲಕ್ಷ್ಮಣ್​ ಈರ್ವರೂ ಹೆಡ್​​ ಕೋಚ್​ ಕೆಲಸ ಮಾಡಲು ತಯಾರಿದ್ದಾರಾ ಎಂಬ ಪ್ರಶ್ನೆಯೂ ಇದೆ ಎನ್ನಲಾಗಿದೆ.(ಏಜೆನ್ಸೀಸ್)
ಓಲಾ ಎಲೆಕ್ಟ್ರಿಕ್​ ಸ್ಕೂಟರ್​​ನ ಹೊಸ ದಾಖಲೆ: 2 ದಿನಗಳಲ್ಲಿ 1100 ಕೋಟಿ ರೂ. ಮೊತ್ತದ ಮಾರಾಟ

ಅಸ್ತಮಾ ನಿಯಂತ್ರಣಕ್ಕೆ ‘ಬದ್ಧ ಪದ್ಮಾಸನ’ ಮಾಡಿ! ಗೂನು ಬೆನ್ನಿಗೂ ಇದು ಪರಿಹಾರ!

ಹಸುಗೂಸಿನ ತಾಯನ್ನು ಕಸಿದ ಕರೊನಾ: 5 ತಿಂಗಳ ಬಾಣಂತಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + thirteen =
Remember me
