ನವದೆಹಲಿ:ಆತ್ಮನಿರ್ಭರ ಭಾರತ್ ರೋಜ್​ಗಾರ್ ಯೋಜನೆ ಪ್ರಕಾರ, ಹೊಸ ಉದ್ಯೋಗಿಗಳ ಇಪಿಎಫ್​ ಪಾಲನ್ನು ಎರಡು ವರ್ಷ ಕಾಲ ಕೇಂದ್ರ ಸರ್ಕಾರವೇ ಪಾವತಿಸಲಿದೆ. 2020ರ ಅಕ್ಟೋಬರ್ 1ರಂದು ಅಥವಾ ನಂತರದಿಂದ 2021ರ ಜೂನ್​ 30 ಒಳಗೆ ಹೊಸ ಉದ್ಯೋಗಿಗಳ ಇಪಿಎಫ್​ ಖಾತೆಗೆ ಇದು ನೇರವಾಗಿ ಜಮೆಯಾಗಲಿದೆ. ಹೊಸಬರಿಗೆ ಉದ್ಯೋಗ ನೀಡಿದ ಗರಿಷ್ಠ 1,000 ಉದ್ಯೋಗಿಗಳಿರುವ ಕಂಪನಿಗಳ ಹೊರೆ ಕಡಿಮೆ ಮಾಡಲು ಸರ್ಕಾರ ಈ ಹೊಸ ಯೋಜನೆ ಘೋಷಿಸಿದೆ.
ಸರ್ಕಾರ ನೀಡುವ ಸಹಾಯಧನ ಲೆಕ್ಕಾಚಾರ ಹೀಗಿರಲಿದೆ. ಉದ್ಯೋಗಿಯೊಬ್ಬ ತಿಂಗಳಿಗೆ 15,000 ರೂಪಾಯಿಗಿಂತ ಕಡಿಮೆ ವೇತನ ಪಡೆಯುತ್ತಿದ್ದು ಎಂಪ್ಲಾಯ್​ಮೆಂಟ್ ಪ್ರಾವಿಡೆಂಟ್ ಫಂಡ್​ ಆರ್ಗನೈಸೇಷನ್ (ಇಪಿಎಫ್​ಒ) ನಲ್ಲಿ ನೊಂದಾಯಿತ ಕಂಪನಿಯಲ್ಲಿ ಕೆಲಸ ಮಾಡಿಲ್ಲದೆ ಹೋದರೆ ಅಥವಾ 2020ರ ಅಕ್ಟೋಬರ್ 1ರ ಮೊದಲು ಇಪಿಎಫ್ ಖಾತೆ ಹೊಂದಿರದೇ ಇದ್ದರೆ ಅಂಥವರು ಹೊಸದಾಗಿ 2020ರ ಅಕ್ಟೋಬರ್ 1 ಅಥವಾ ನಂತರ ಉದ್ಯೋಗ ಗಿಟ್ಟಿಸಿಕೊಂಡಿದ್ದರೆ ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
ಇದನ್ನೂ ಓದಿ:ಗೋಹತ್ಯೆ ನಿಷೇಧ ವಿಧೇಯಕದಲ್ಲಿವೆ ಈ 25 ಕಠಿಣಾತಿಕಠಿಣ ನಿಯಮಗಳು!
ಅದೇ ರೀತಿ, ತಿಂಗಳಿಗೆ 15,000 ರೂಪಾಯಿಗಿಂತ ಕಡಿಮೆ ವೇತನ ಪಡೆಯುತ್ತಿದ್ದು ಇಪಿಎಫ್​ನ ಯೂನಿವರ್ಸಲ್​ ಅಕೌಂಟ್ ನಂಬರ್ ಹೊಂದಿರುವ ಉದ್ಯೋಗಿ 2020ರ ಮಾರ್ಚ್​ 1ರಿಂದ ಸೆಪ್ಟೆಂಬರ್ 30ರ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡಿದ್ದು, ಆ ಅವಧಿಯಲ್ಲಿ ಹೊಸ ಉದ್ಯೋಗಕ್ಕೆ ಸೇರ್ಪಡೆಗೊಳ್ಳದೇ ಹೋಗಿದ್ದರೆ ಅಂಥವರು ಈ ಯೋಜನೆಯ ಫಲಾನುಭವಿಗಳಾಗುತ್ತಾರೆ.
ಇದನ್ನೂ ಓದಿ:80 ಸಾವಿರ ಚೇಳು ಸಾಕಿದ ಭೂಪ! ಒಂದು ಗ್ರಾಂ ಚೇಳಿನ ವಿಷಕ್ಕೆ 7.4 ಲಕ್ಷ ರೂಪಾಯಿ!
ಸರ್ಕಾರದ ಸಹಾಯಧನವನ್ನು ಇಪಿಎಫ್​ಒ ಆಧಾರ್ ಜೋಡಣೆಯಾಗಿರುವ ಫಲಾನುಭವಿಗಳ ಖಾತೆಗೆ ನೇರವಾಗಿ ಅಂದರೆ ಇಲೆಕ್ಟ್ರಾನಿಕ್ ಪಾವತಿ ಮೂಲಕ ಜಮೆ ಮಾಡಲಿದೆ. ಇದಕ್ಕಾಗಿ ಇಪಿಎಫ್​ಒ ತಂತ್ರಾಂಶ ಸಿದ್ಧಪಡಿಸಲಿದ್ದು, ಪಾರದರ್ಶಕ ಮತ್ತು ಬದ್ಧತೆಯೊಂದಿಗೆ ಇದನ್ನು ನೆರವೇರಿಸಲು ಈಗಾಗಲೇ ಕೆಲಸ ಆರಂಭಿಸಿದೆ ಎಂದು ಸರ್ಕಾರ ತಿಳಿಸಿದೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಹೊಸ ನೇಮಕಾತಿಗೆ ಆತ್ಮನಿರ್ಭರ ಭಾರತ್ ರೋಜ್​ಗಾರ್ ಯೋಜನೆ ನೆರವು: 23,000 ಕೋಟಿ ರೂಪಾಯಿ ಮೀಸಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 20 =
Remember me
