ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಸಾಕಷ್ಟು ಜನರನ್ನು ಆಕರ್ಷಿಸುವುದಂತೂ ಸುಳ್ಳಲ್ಲ. ಪ್ರತಿ ದಿನ ಕಾರ್ಯಕ್ರಮಗಳು, ವೆಬಿನಾರ್​ಗಳಲ್ಲಿ ಭಾಗವಹಿಸುವ ಪ್ರಧಾನಿಯವರ ಭಾಷಣದ ಅಭಿಮಾನಿಗಳು ಸಾಕಷ್ಟು ಜನರಿದ್ದಾರೆ. ಅಷ್ಟಕ್ಕೂ ಈ ಭಾಷಣಗಳನ್ನು ಬರೆಯುವವರು ಯಾರು, ಅವರಿಗೆ ಎಷ್ಟು ಸಂಬಳ ಕೊಡಲಾಗುತ್ತಿದೆ?
ಪ್ರಧಾನಿ ಮೋದಿಯವರ ಭಾಷಣದ ಬಗ್ಗೆ ಕೆಲವು ವಿಶೇಷ ಮಾಹಿತಿ ಕೋರಿ ಖಾಸಗಿ ವಾಹಿನಿಯೊಂದು ಆರ್​ಟಿಐ ಮಾಹಿತಿ ಕೇಳಿತ್ತು. ಪ್ರಧಾನಿ ಕಚೇರಿಯಿಂದ ಮಾಹಿತಿ ಕೇಳಲಾಗಿತ್ತು. ಯಾರು ಈ ಭಾಷಣ ಬರೆಯುತ್ತಾರೆ, ಅದಕ್ಕೆಂದು ಎಷ್ಟು ಜನರ ತಂಡವಿದೆ? ಅವರಿಗೆ ಎಷ್ಟು ಖರ್ಚನ್ನು ಮಾಡಲಾಗುತ್ತಿದೆ? ಎನ್ನುವ ಮಾಹಿತಿಯನ್ನು ಕೋರಲಾಗಿತ್ತು. ಇದಕ್ಕೆ ಪ್ರಧಾನಿ ಕಚೇರಿ ಉತ್ತರ ನೀಡಿದೆ.
ಕಾರ್ಯಕ್ರಮದ ಆಧಾರದ ಮೇಲೆ, ವಿವಿಧ ಇಲಾಖೆಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳು ಸೇರಿ ಅನೇಕ ಮೂಲಗಳಿಂದ ಪ್ರಧಾನಿಯವರಿಗೆ ಮಾಹಿತಿ ನೀಡಲಾಗುತ್ತದೆ. ಅದನ್ನೆಲ್ಲ ಒಟ್ಟುಗೂಡಿಸಿ ಪ್ರಧಾನಿಯವರೇ ಭಾಷಣವನ್ನು ರೂಪುಗೊಳಿಸುತ್ತಾರೆ ಎಂದು ಮಾಹಿತಿ ನೀಡಲಾಗಿದೆ. ಆದರೆ ಅದಕ್ಕೆಂದು ಎಷ್ಟು ಹಣ ಖರ್ಚು ಮಾಡಲಾಗುತ್ತಿದೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಎಎಪಿ ಜಯಭೇರಿ! ಐದರಲ್ಲಿ ನಾಲ್ಕು ಸ್ಥಾನ ಎಎಪಿ ಪಾಲು; ಕಾಂಗ್ರೆಸ್​ಗೆ ಒಂದು ಸ್ಥಾನದಲ್ಲಿ ಗೆಲುವು

ಬಾಯ್​ಫ್ರೆಂಡ್​ ಜತೆ ಸೇರಿ ಮಗನನ್ನೇ ನದಿಗೆಸೆದ ತಾಯಿ! ಪೊಲೀಸರ ಎದುರಿಗೆ ಬೇರೆಯದ್ದೇ ನಾಟಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 18 =
Remember me
