ಅಹಮದಾಬಾದ್​:ವರನ ತಂದೆ, ವಧುವಿನ ತಾಯಿಯೊಡನೆ ಓಡಿ ಹೋಗಿರುವ ಕಾರಣದಿಂದ ಮುಂದಿನ ತಿಂಗಳು ನಡೆಯಬೇಕಿದ್ದ ಮದುವೆಯೊಂದು ಮುರಿಬಿದ್ದಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ.
ವರನ ತಂದೆ ಮತ್ತು ವಧುವಿನ ತಾಯಿ 10 ದಿನಗಳಿಂದ ಕಾಣೆಯಾಗಿರುವುದು ಕುಟುಂಬದವರ ಗಮನಕ್ಕೆ ಬಂದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಮಕ್ಕಳ ಮದುವೆಗೆ ಕೇವಲ ಒಂದು ತಿಂಗಳಿಗಿಂತ ಕಡಿಮೆ ಅವಧಿ ಇತ್ತು. ಇದೀಗ ಇಬ್ಬರೂ ಕಾಣೆಯಾಗಿರುವುದರಿಂದ ಮದುವೆ ಮುಂದೂಡಲಾಗಿದೆ.
ವರನ ತಂದೆ ಕತರ್​ಗಾಮ್​ನಲ್ಲಿ ಜವಳಿ ಉದ್ಯಮಿಯಾಗಿದ್ದಾರೆ. ವಧುವಿನ ತಾಯಿ ನವಸಾರಿ ಮೂಲದವರಾಗಿದ್ದು, ಗೃಹಣಿಯಾಗಿದ್ದರು. ಇಬ್ಬರ ಮಕ್ಕಳ ಮದುವೆ ಫೆಬ್ರವರಿ ಎರಡನೇ ವಾರದಲ್ಲಿ ನಿಗದಿಯಾಗಿತ್ತು. ಇದೀಗ ದಿಢೀರ್​ ಬೆಳವಣಿಗೆ ಎರಡು ಕುಟುಂಬಕ್ಕೂ ಶಾಕ್​ ನೀಡಿದೆ.
ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದು, ಪ್ರಕರಣ ಬಗ್ಗೆ ಸ್ಪಷ್ಟತೆ ಸಿಗುವವರೆಗೂ ಮದುವೆಯನ್ನು ಮುಂದೂಡಲಾಗಿದೆ. ಜನವರಿ 10ರಿಂದ ಅವರಿಬ್ಬರು ಕಾಣೆಯಾಗಿದ್ದರೆ ಎಂದು ಎರಡು ಕುಟುಂಬದವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಚಿಕ್ಕಂದಿನಿಂದಲೇ ಪರಿಚಯವಿತ್ತುವರನ ತಂದೆ ಹಾಗೂ ವಧುವಿನ ತಾಯಿ ಮೊದಲೇ ಪರಿಚಿತರಾಗಿದ್ದರು. ಅವರಿಬ್ಬರು ಬಾಲ್ಯ ಸ್ನೇಹಿತರಾಗಿದ್ದರು ಎಂದು ಪೊಲೀಸ್​ ತನಿಖೆ ವೇಳೆ ತಿಳಿದುಬಂದಿದೆ. ಬಹಳ ಹಿಂದೆ ಇಬ್ಬರು ಸೂರತ್​ ನಗರದ ಕತರಾಮ್​ ಏರಿಯಾದಲ್ಲಿ ಅಕ್ಕಪಕ್ಕದ ಮನೆಯವರಾಗಿದ್ದರು. ಅನೇಕ ಬಾರಿ ಓಡಿಹೋಗಲು ಯತ್ನಿಸಿದ್ದರು. ಮೊದಲ ಬಾರಿ ಮದುವೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬಳಿಕ ಆಕೆಯನ್ನು ಡೈಮಂಡ್​ ದಲ್ಲಾಳಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು ಎಂದು ತಿಳಿದುಬಂದಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 12 =
Remember me
