ಸೌದಿ ಅರೇಬಿಯಾದಲ್ಲಿ ಉತ್ಪಾದನೆಯಾಗಲಿದೆ ರಷ್ಯನ್​ ಕರೊನಾ ಲಸಿಕೆ; ಫಿಲಿಫೈನ್ಸ್​, ಬ್ರೆಜಿಲ್​ನಲ್ಲೂ ಕ್ಲಿನಿಕಲ್​ ಟ್ರಯಲ್​
| ರಾಘವ ಶರ್ಮ ನಿಡ್ಲೆ, ನವದೆಹಲಿ
ದೇಶದ ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ ಏರಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ದೆಹಲಿಯ ಕೆಂಪುಕೋಟೆಯ ಸ್ವಾತಂತ್ರ್ಯೋವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಈ ವಿಷಯ ಪುನರುಚ್ಚರಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಮಂಡಿಸಿದ ಹಣಕಾಸು ಬಜೆಟ್​ನಲ್ಲಿ ಈ ಮಾಹಿತಿ ನೀಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮುಂದಿನ 6 ತಿಂಗಳ ಒಳಗೆ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ, ಜೂನ್ 6ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ‘ಮಾತೃತ್ವದ ವಯಸ್ಸು, ತಾಯಿಯ ಮರಣ ಪ್ರಮಾಣ ತಗ್ಗಿಸುವ ಅಗತ್ಯತೆ, ಪೌಷ್ಠಿಕಾಂಶ ಪ್ರಮಾಣ ಸುಧಾರಣೆ ಹಾಗೂ ಇತರೆ ಸಮಸ್ಯೆ’ಗಳನ್ನು ಮರುಪರಿಶೀಲಿಸಲೆಂದೇ ಜಯಾ ಜೇಟ್ಲಿ (ಸಮತಾ ಪಾರ್ಟಿ ಮಾಜಿ ಅಧ್ಯಕ್ಷೆ) ನೇತೃತ್ವದ ಸಮಿತಿ ರಚನೆ ಮಾಡಿರುವುದಾಗಿ ಹೇಳಿಕೆ ಬಿಡುಗಡೆ ಮಾಡಿತ್ತು. ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ. ವಿನೋದ್ ಪಾಲ್ ಕೂಡ ಸಮಿತಿ ಸದಸ್ಯರಾಗಿದ್ದಾರೆ. ಈ ಸಮಿತಿ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸಲಿದೆ. ಅವುಗಳನ್ನು ಆಧರಿಸಿ ಕೇಂದ್ರ ಸರ್ಕಾರ ಹೆಣ್ಮಕ್ಕಳ ಮದುವೆ ವಯಸ್ಸನ್ನು 21ಕ್ಕೆ ಏರಿಸುವ ಸಾಧ್ಯತೆಯಿದೆ.
1929ರ ಬಾಲ್ಯವಿವಾಹ ನಿಷೇಧ ಕಾಯ್ದೆ:ದೇಶದಲ್ಲಿ ಬಾಲ್ಯವಿವಾಹ ತಡೆಯುವ ಗಂಭೀರ ಯತ್ನದ ಫಲವಾಗಿ 1929ರಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂತು. ಈ ಕಾಯ್ದೆ ಹಿಂದಿನ ರೂವಾರಿ ಕಾನೂನು ತಜ್ಞ, ಆರ್ಯ ಸಮಾಜದ ಸದಸ್ಯ, ಹರಿಬಿಲಾಸ್ ಶಾರದಾ. ಹೀಗಾಗಿ, ಇದನ್ನು ‘ಶಾರದಾ ಕಾಯ್ದೆ’ ಎಂದೂ ಕರೆಯಲಾಯ್ತು. ಇದರ ಪ್ರಕಾರ, ಗಂಡು ಮಕ್ಕಳ ವಿವಾಹ ವಯಸ್ಸು 18 ಮತ್ತು ಹೆಣ್ಣುಮಕ್ಕಳದ್ದು 15 ಎಂದು ನಿಗದಿ ಮಾಡಲಾಯ್ತು. 1978ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದು, ಗಂಡಿನ ವಯಸ್ಸನ್ನು 21ಕ್ಕೆ, ಹೆಣ್ಣಿನ ವಯಸ್ಸನ್ನು 18ಕ್ಕೆ ಏರಿಸಲಾಯಿತು. ವಾಸ್ತವದಲ್ಲಿ 1929ರ ಕಾಯ್ದೆ ಕಾಗದದಲ್ಲಿತ್ತೇ ಹೊರತು ಜನರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದನ್ನು ತೆಗೆದುಹಾಕಿ ಎಂದು ಸಾಂಪ್ರದಾಯಿಕ ಮನಸ್ಥಿತಿಯ ಸಮುದಾಯಗಳು ಸರ್ಕಾರದ ಮೇಲೆ ಇನ್ನಿಲ್ಲದ ಒತ್ತಡ ಹಾಕಿದ್ದವು. ಸ್ವಾತಂತ್ರ್ಯ ನಂತರವೂ ಈ ಒತ್ತಡ ಮುಂದುವರಿದಿತ್ತು.
ಈಗಿರುವ ಕಾನೂನು:ಮದುವೆ ವಯಸ್ಸಿನ ಕನಿಷ್ಠ ಮಿತಿಯನ್ನು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 5ರಲ್ಲಿ ಸೂಚಿಸಲಾಗಿದೆ. ‘ಇಂಡಿಯನ್ ಮೆಜಾರಿಟಿ ಆಕ್ಟ್ 1875’ರ ಪ್ರಕಾರ ಹೆಣ್ಣು ಗಂಡು ಇಬ್ಬರೂ ಪ್ರಾಪ್ತ ವಯಸ್ಸಿಗೆ ಬರುವುದು 18 ತುಂಬಿದ ಮೇಲೆ. ಬ್ರಿಟಿಷರ ಕಾಲದ ಈ ಕಾನೂನು ಭಾರತ ಪ್ರಜೆಗಳ ವಿವಾಹಯೋಗ್ಯ ವಯಸ್ಸಿಗೆ ಅನ್ವಯವಾಗುವುದಿಲ್ಲ. ಈಗಿರುವ ಹಿಂದೂ ಕಾಯ್ದೆ ಹಿಂದೂಗಳಿಗೆ ಮಾತ್ರ ಅನ್ವಯ. 1978ರಲ್ಲಿ ಈ ಕಾಯ್ದೆಯನ್ನು ಪರಿಷ್ಕರಿಸಿ, ಹೆಣ್ಣಿಗೆ 18, ಗಂಡಿಗೆ 21 ವಯಸ್ಸನ್ನು ನಿಗದಿ ಮಾಡಲಾಯ್ತು. ವಯಸ್ಸಿಗೆ ಸಂಬಂಧಿಸಿದ ನಿಯಮ ಉಲ್ಲಂಘಿಸಿ ವಿವಾಹ ಮಾಡಿದ್ದರೆ, ಆ ವಿವಾಹ ತನ್ನಿಂತಾನೇ ರದ್ದಾಗುವುದಿಲ್ಲ. ಏಕೆಂದರೆ ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧವೇ ವಿನಃ ವಿವಾಹದಿಂದ ಕೂಡಿಬಂದ ಸಂಬಂಧದಿಂದ ಹೆಣ್ಣುಮಕ್ಕಳಿಗೆ ಅನ್ಯಾಯ ಆಗಕೂಡದು. ವಿವಾಹ ಅಪ್ರಾಪ್ತ ವಯಸ್ಸಿನಲ್ಲಾಗಿದ್ದರೂ ಹೆಣ್ಣುಮಕ್ಕಳಿಗೆ ಜೀವನಾಂಶ ಕೇಳುವ ಹಕ್ಕಿದೆ ಎಂದು ನ್ಯಾಯಾಲಯಗಳೇ ಹೇಳಿವೆ.ಇದನ್ನೂ ಓದಿ:ಸಚಿವ ಶ್ರೀರಾಮುಲು ಗುಣಮುಖ: ಆಸ್ಪತ್ರೆಯಿಂದ ಡಿಸ್‌ಚಾರ್ಜ್‌
ಭಾರತದಲ್ಲಿ 15-19 ವಯಸ್ಸಿನ ಹೆಣ್ಣುಮಕ್ಕಳು ಪ್ರಮುಖವಾಗಿ ಗರ್ಭಧಾರಣೆ ಸಂಬಂಧಿ ತೊಂದರೆ ಗಳಿಂದಲೇ ಸಾವಿಗೀಡಾಗುತ್ತಾರೆ ಎಂಬುದು ಅಧ್ಯಯನಗಳಿಂದಲೇ ದೃಢಪಟ್ಟಿದೆ. 2017ರಲ್ಲಿ ಗರ್ಭಧಾರಣೆ ಮತ್ತು ಹೆರಿಗೆ ಸಮಸ್ಯೆಗಳಿಂದಾಗಿ ಸಾವನ್ನಪ್ಪಿದ ಹೆಣ್ಣುಮಕ್ಕಳ ಸಂಖ್ಯೆ 35,000ರಷ್ಟಿತ್ತು. 2000ದಲ್ಲಿ ಈ ಪ್ರಮಾಣ 103,000ದಷ್ಟಿತ್ತು. 17 ವರ್ಷಗಳ ಮೊದಲಿನ ಸ್ಥಿತಿಗೆ ಹೋಲಿಸಿದರೆ ಈ ಪ್ರಮಾಣ ತಗ್ಗಿರುವುದು ಭರವಸೆದಾಯಕ. ಸಣ್ಣ ವಯಸ್ಸಲ್ಲಿ ಮದುವೆಯಾಗಿ ಗರ್ಭವತಿಯಾದವರು ಸೂಕ್ತ ಶಿಕ್ಷಣ, ಆರೋಗ್ಯ ರಕ್ಷಣೆ, ಪ್ರಸವಪೂರ್ವ ಆರೈಕೆ, ನುರಿತರಿಂದ ಹೆರಿಗೆ ಮತ್ತು ಶಿಶುಗಳಿಗೆ ಔಷಧ-ಚಿಕಿತ್ಸೆಗಳ ಕೊರತೆ ಎದುರಿಸುತ್ತಾರೆ. ಮದುವೆ ವಿಚಾರದಲ್ಲೂ ಲಿಂಗ ತಾರತಮ್ಯ ತೊಡೆದುಹಾಕಬೇಕೆನ್ನುವುದು ಕೇಂದ್ರದ ಉದ್ದೇಶ. ಹೆಣ್ಮಕ್ಕಳ ಉನ್ನತ ಶಿಕ್ಷಣ, ಶಿಶು ಮರಣ ಪ್ರಮಾಣ, ತಾಯಿಯ ಮಾನಸಿಕ ಆರೋಗ್ಯ, ತಾಯಿ-ಮಗುವಿನ ಪೌಷ್ಠಿಕಾಂಶದ ಸ್ಥಿತಿ, ಮಗುವಿನ ಲಿಂಗ ಅನುಪಾತ ಸೇರಿ ವಿವಿಧ ವಿಷಯಗಳ ಮೇಲೆ ವೈವಾಹಿಕ ವಯಸ್ಸಿನ ಪ್ರಭಾವವೇನು ಎಂಬುದನ್ನು ಅನ್ವೇಷಿಸಲು ಕಾರ್ಯಪಡೆಗೆ ಸೂಚಿಸಲಾಗಿದೆ. ನೀತಿ ಆಯೋಗವೂ ಈ ಕಾರ್ಯಪಡೆಗೆ ಪೂರಕ ಸಹಕಾರ ಒದಗಿಸಲಿದೆ.
ಮದುವೆಗೆ ಗಂಡು-ಹೆಣ್ಣಿನ ವಯಸ್ಸಲ್ಲಿ ವ್ಯತ್ಯಾಸವಿರುವುದೇಕೆ ಎಂಬ ಪ್ರಶ್ನೆಗೆ ಈವರೆಗೆ ಸ್ಪಷ್ಟ ಉತ್ತರಗಳಿಲ್ಲ. ಗಂಡು ಮನೆಯ ಯಜಮಾನ ನಿದ್ದಂತೆ, ಇಡೀ ಕುಟುಂಬ ನಿರ್ವಹಿಸುವ ಜವಾಬ್ದಾರಿ ಇರುತ್ತದೆ ಎಂಬ ಹಿಂದಿನವರ ಸಂಪ್ರದಾಯಸ್ಥ ಮನಸ್ಥಿತಿ, ಧಾರ್ವಿುಕ ನಂಬಿಕೆ, ಆಚರಣೆಗಳೇ ಈ ವ್ಯತ್ಯಾಸಕ್ಕೆ ಕಾರಣ ಎಂಬುದು ಕೆಲವರ ವಾದ. ಇದಕ್ಕೆ ದೈಹಿಕ ಕಾರಣಗಳೂ ಇವೆ ಎಂದು ಮತ್ತೆ ಕೆಲವರು ವಾದಿಸುತ್ತಾರೆ.ಇದನ್ನೂ ಓದಿ:
ಮದುವೆ ವಿಚಾರದಲ್ಲಿ ವಯಸ್ಸಿನ ತಾರತಮ್ಯ ಪ್ರಶ್ನಿಸಿ ದಿಲ್ಲಿ ಬಿಜೆಪಿ ವಕ್ತಾರ ಅಶ್ವಿನಿ ಕುಮಾರ್ ಉಪಾಧ್ಯಾಯ ದಿಲ್ಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಬ್ಬರಿಗೂ ಏಕಪ್ರಕಾರದ ವಯಸ್ಸನ್ನು ನಿಗದಿಪಡಿಸಬೇಕು. ಸಮಾನತೆ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ಖಾತರಿಪಡಿಸಲು ಸಂವಿಧಾನದ 14 ಮತ್ತು 21ನೇ ವಿಧಿಗಳಿದ್ದರೂ, ಪುರುಷ-ಮಹಿಳೆಗೆ ಮದುವೆಯಾಗಲು ವಿಭಿನ್ನ ವಯಸ್ಸಿನ ಕಾನೂನು ನಿಗದಿಪಡಿಸಿರುವುದು ಸಂವಿಧಾನದ ಉಲ್ಲಂಘನೆ ಎಂದವರು ವಾದಿಸಿದ್ದರು. ಈ ವಾದಕ್ಕೆ ಪೂರಕವಾಗಿ, ಸುಪ್ರೀಂಕೋರ್ಟ್​ನ 2 ತೀರ್ಪನ್ನು ಪರಿಶೀಲಿಸಬಹುದು. 2014ರ ನ್ಯಾಷನಲ್ ಲೀಗಲ್ ಸರ್ವಿಸಸ್ ಅಥಾರಿಟಿ ಆಫ್ ಇಂಡಿಯಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಲಿಂಗಪರಿವರ್ತಿತರನ್ನು ಮೂರನೇ ಲಿಂಗ ಎಂದು ಪರಿಗಣಿಸಿದ್ದ ಸುಪ್ರೀಂಕೋರ್ಟ್, ‘ಮನುಷ್ಯರೆಲ್ಲರಿಗೂ ಸಮಾನ ಮೌಲ್ಯಗಳಿದ್ದು, ಎಲ್ಲರನ್ನೂ ಸಮಾನತೆ ಮತ್ತು ಸಮಾನ ಕಾನೂನಿನಿಂದ ಕಾಣಬೇಕು?’ ಎಂದು ತೀರ್ಪು ನೀಡಿತ್ತು.
ಮುಸ್ಲಿಂ ಕಾನೂನಿನ ಪ್ರಕಾರ 15ನೇ ವರ್ಷ ವಿವಾಹಾರ್ಹ ವಯಸ್ಸು. ಮುಸ್ಲಿಂ ಮಹಿಳೆಯರಿಗೆ ವಿವಾಹ ವಿಚ್ಛೇದನದ ವಿಷಯದಲ್ಲಿ ಆಗುತ್ತಿದ್ದ ಅನ್ಯಾಯ ತಡೆಗಟ್ಟಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾತನಾಡುತ್ತಿದ್ದಾಗ ಪ್ರಧಾನಿ ಮೋದಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಹೀಗಾಗಿ, ಎಲ್ಲ ಮತದವರಿಗೂ ಅನ್ವಯವಾಗುವ ರೀತಿಯಲ್ಲಿ ಕಾನೂನು ಮಾಡಿದಲ್ಲಿ ಸ್ತ್ರೀ ಸಬಲೀಕರಣ ದಿಕ್ಕಿನಲ್ಲಿ ಇದು ಮಹತ್ವದ ಕಾರ್ಯಸಾಧನೆಯಲ್ಲದೆ, ಸಮಾನ ನಾಗರಿಕ ಸಂಹಿತೆಯ ದಿಕ್ಕಿನಲ್ಲೂ ಅಭೂತಪೂರ್ವ ನಡೆಯಾಗಲಿದೆ.
| ರಾಘವೇಂದ್ರ ಶ್ರೀವತ್ಸಸುಪ್ರೀಂಕೋರ್ಟ್ ವಕೀಲರು
ಹೆಣ್ಮಕ್ಕಳ ವಿವಾಹ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಕ್ರಮ ಸ್ವಾಗತಿಸುತ್ತೇನೆ. ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಇದು ಸಹಕಾರಿ. ಹಾಗೆಯೇ, ಸಂಸತ್ತು ಮತ್ತು ವಿಧಾನಮಂಡಲದಲ್ಲೂ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಲು ಶೇಕಡ 33 ಮೀಸಲಾತಿ ಯನ್ನು ಜಾರಿಗೊಳಿಸಲು ಅವರು ಕ್ರಮ ಕೈಗೊಳ್ಳಬೇಕು.
| ಕನಿಮೋಳಿ ಕರುಣಾನಿಧಿಡಿಎಂಕೆ ಸಂಸದೆ
ಗಂಡುಮಕ್ಕಳ ವಿವಾಹ ವಯಸ್ಸು 21ಕ್ಕೆ ಹೋಲಿಸಿದರೆ, ಹೆಣ್ಣುಮಕ್ಕಳ ವಯಸ್ಸನ್ನು 18ಕ್ಕೆ ನಿಗದಿಪಡಿಸಿದ್ದು ಸಮರ್ಥನೀಯ. ಸಾಮಾನ್ಯವಾಗಿ, ಗ್ರಾಮೀಣ ಭಾಗದ ಜನರಲ್ಲಿ ಹೆಣ್ಣುಮಕ್ಕಳನ್ನು 18ರ ವಯಸ್ಸಿಗೆ ಮದುವೆ ಮಾಡಬೇಡಿ, ಮತ್ತಷ್ಟು ಕಾಲಾವಕಾಶ ಕೊಡಿ ಎಂದು ಮನವೊಲಿಸುವುದು ಕಷ್ಟ. ಅದಕ್ಕೆ ವಿವಿಧ ಕಾರಣಗಳೂ ಇರುತ್ತವೆ. ಆದರೆ, ನಗರ ಭಾಗದಲ್ಲಿ ಹಾಗಿಲ್ಲ. 21 ಅಥವಾ ಅದಕ್ಕಿಂತಲೂ ಹೆಚ್ಚು ವಯಸ್ಸಿನ ತನಕ ಕಾಯಲು ಹೆಣ್ಣುಮಕ್ಕಳು ಮತ್ತವರ ಹೆತ್ತವರು ಮಾನಸಿಕವಾಗಿ ಸಿದ್ಧರಿರುತ್ತಾರೆ.
| ಮೋಹನ್ ಕಾತರಕಿಸುಪ್ರೀಂಕೋರ್ಟ್ ವಕೀಲರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
