ನವದೆಹಲಿ:ತಿರುಗಿಬಿದ್ದ ಪ್ರತ್ಯೇಕತಾವಾದಿಗಳನ್ನು ಮಟ್ಟಹಾಕಲು ಐಎಸ್​ಐ ಸಾಕಷ್ಟು ಪ್ರಯತ್ನವನ್ನೂ ಮಾಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ರಾಜಾ ಫಾರೂಕ್ ಹೈದರ್​ ಪರ ಒಲವುಳ್ಳ ಗುಂಪಿನ ಸದಸ್ಯ ಹಿಜ್ಬುಲ್ ಮುಜಾಹಿದ್ದೀನ್​ ಮುಖ್ಯಸ್ಥ ಸೈಯದ್ ಸಲಾಲುದ್ದೀನ್ ಮನೆ ಮೇಲೆ ಹ್ಯಾಂಡ್​ ಗ್ರೆನೇಡ್ ದಾಳಿ ನಡೆಸುವ ಮೂಲಕ ಐಎಸ್​ಐ ಎಚ್ಚರಿಕೆ ಸಂದೇಶ ರವಾನಿಸಿತ್ತು. ಈ ದಾಳಿ ಮೇ ತಿಂಗಳಲ್ಲಿ ನಡೆದಿತ್ತು.
ಸೈಯದ್​ ಸಲಾಲುದ್ದೀನ್ ಜಾಗತಿಕವಾಗಿ ಮೋಸ್ಟ್ ವಾಂಟೆಡ್​ ಉಗ್ರ. ಕಾಶ್ಮೀರ ಭಾಗದಲ್ಲಿನ ಉಗ್ರ ಚಟುವಟಿಕೆಗೆ ಈತನ ಕುಮ್ಮಕ್ಕು ಇದ್ದೇ ಇದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸವಲತ್ತಿನ ಆರ್ಟಿಕಲ್ 370 ಅನ್ನು ಭಾರತ ಸರ್ಕಾರ ಕಳೆದ ವರ್ಷ ರದ್ದುಗೊಳಿಸಿದ ವೇಳೆ, ಸಲಾಲುದ್ದೀನ್ ನಿಷ್ಕ್ರಿಯನಾಗಿದ್ದ ಅಥವಾ ಆತನಿಂದ ಏನೂ ಮಾಡಲು ಸಾಧ್ಯವಾಗದೇ ಹೋಯಿತು. ಪರಿಸ್ಥಿತಿ ಸಂಪೂರ್ಣವಾಗಿ ಭಾರತದ ಹಿಡಿತದಲ್ಲಿತ್ತು. ಇದು ಐಎಸ್​ಐಗೆ ಅಸಾಧ್ಯವಾದ ಕಿರಿಕಿರಿಯನ್ನು ಉಂಟುಮಾಡಿತ್ತು.
ಇದನ್ನೂ ಓದಿ:ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಮಗ್ಗುಲ ಮುಳ್ಳಾಗತೊಡಗಿವೆ ಚೀನಾ, ಪಾಕ್​
ಸಲಾಲುದ್ದೀನ್​ನ ಈ ನಿಷ್ಕ್ರಿಯತೆ ಮತ್ತು ಭಿನ್ನಮತ ಐಎಸ್​ಐಗೆ ಗಂಟಲಲ್ಲಿ ಸಿಕ್ಕ ಬಿಸಿ ತುಪ್ಪದಂತಾಗಿತ್ತು. ಹೀಗಾಗಿಯೇ ಮೇ ತಿಂಗಳಲ್ಲಿ ಆತನನ್ನು ಎಚ್ಚರಿಸುವ ಸಲುವಾಗಿ ಇಸ್ಲಾಮಾಬಾದಿನಲ್ಲಿರುವ ಆತನ ಮನೆ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿ ಸಂಘಟಿಸಿತ್ತು. ಆದಾಗ್ಯೂ, ಪೊಲೀಸರು ಈ ದಾಳಿಯನ್ನು ಅಡುಗೆ ಸಿಲಿಂಡರ್ ಸ್ಫೋಟ ಎಂದು ದಾಖಲಿಸಿಕೊಂಡು ಕೇಸ್ ಕ್ಲೋಸ್ ಮಾಡಿದ್ದಾರೆ. ಐಎಸ್​ಐ ನಂಬಿಕೆ ಕಳೆದುಕೊಂಡಿದೆ ಎಂದು ಸೈಯದ್ ಸಲಾಲುದ್ದೀನ್​ಗೆ ಕೊಟ್ಟ ನೇರ ಎಚ್ಚರಿಕೆ ಇದಾಗಿತ್ತು.
ಈ ಬೆಳವಣಿಗೆ ಮರೆಯಾಗುತ್ತಲೇ ಕಾಶ್ಮೀರದಲ್ಲೊಂದು ಬೆಳವಣಿಗೆ ಗಮನಸೆಳೆಯಿತು. ಹುರಿಯತ್ ಕಾನ್ಫರೆನ್ಸ್​ನ ಹಿರಿಯ ನಾಯಕ ಗೀಲಾನಿ, ರಾಜೀನಾಮೆ ಪ್ರಹಸನ ಅದು. ತಾನು ವೇದಿಕೆಯ ಮುಂಚೂಣಿಯಿಂದ ಹಿಂದೆ ಸರಿಯುತ್ತಿರುವುದಾಗಿ ಆತ ಘೋಷಿಸಿದ್ದರು. ಆತನ ಈ ನಡೆಯ ಹಿನ್ನೆಲೆಯಲ್ಲಿ ಬಹುದೊಡ್ಡ ಸಮರವೇ ನಡೆದಿದೆ ಎಂಬುದು ಒಳಸುಳಿ.
ಐಎಸ್​ಐ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + six =
Remember me
