ನವದೆಹಲಿ:ಪ್ಯಾರಿಸ್​ನಲ್ಲಿ ನಡೆಯುತ್ತಿರುವ 33ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ 2 ದಿನಗಳ ಹಿಂದಷ್ಟೇ ಅದ್ಧೂರಿ ಚಾಲನೆ ಸಿಕ್ಕಿತ್ತು. ಆದರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಲಿಯೊನಾರ್ಡೊ ಡಾ ವಿನ್ಸಿಯವರ “ದಿ ಲಾಸ್ಟ್ ಸಪ್ಪರ್” ಪೇಂಟಿಂಗ್‌ನ ಸ್ಪಷ್ಟ ವಿಡಂಬನೆಯನ್ನು ಪ್ರದರ್ಶಿಸುವ ಡ್ರ್ಯಾಗ್ ಕ್ವೀನ್‌ಗಳ ಸನ್ನಿವೇಶದ ಬಗ್ಗೆ ಬಿಜೆಪಿ ಸಂಸದೆ ಕಂಗನಾ ರಣಾವತ್ ತೀವ್ರವಾಗಿ ಕಿಡಿಕಾರಿದ್ದಾರೆ.
ಮೂವರು ಪ್ರಸಿದ್ಧ ಡ್ರ್ಯಾಗ್ ರೇಸ್ ಕ್ವೀನ್ಸ್ ಸೇರಿದಂತೆ 18 ಮಂದಿಯನ್ನು ಒಳಗೊಂಡ ಡ್ರ್ಯಾಗ್ ಆಕ್ಟ್‌ ಒಂದನ್ನು ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶಿಸಲಾಗಿತ್ತು. ಈ ಕುರಿತು ಕಂಗನಾ ರಣಾವತ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ “ದಿ ಲಾಸ್ಟ್ ಸಪ್ಪರ್‌ನ ಹೈಪರ್-ಸೆಕ್ಷುವಲೈಸ್ಡ್, ಧರ್ಮನಿಂದೆಯ ಚಿತ್ರಣ” ಎಂದು ತೀವ್ರವಾಗಿ ಟೀಕಿಸಿದ್ದಾರೆ.

ನೀಲಿ ಬಣ್ಣವನ್ನು ಹಚ್ಚಿದ ಬೆತ್ತಲೆ ಮನುಷ್ಯನನ್ನು ಯೇಸುವಿನಂತೆ ತೋರಿಸಿ ಕ್ರಿಶ್ಚಿಯನ್ ಧರ್ಮವನ್ನು ಅಪಹಾಸ್ಯ ಮಾಡಿದ್ದಾರೆ. ಎಡಪಂಥೀಯರು ಒಲಂಪಿಕ್ಸ್ ಕ್ರೀಡೆಯನ್ನು ಸಂಪೂರ್ಣವಾಗಿ ಹಾಳುಮಾಡುತ್ತಿದ್ದಾರೆ ಮಾಡಿದ್ದಾರೆ. ಇದು ನಾಚಿಕೆಗೇಡು” ಎಂದು ಇನ್‌ಸ್ಟಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
“ನಾನು ಸಲಿಂಗಕಾಮಕ್ಕೆ ವಿರೋಧಿಯಲ್ಲ. ಆದರೆ ಒಲಿಂಪಿಕ್ಸ್ ಹಾಗೂ ಲೈಂಗಿಕತೆಗೆ ಏನು ಸಂಬಂಧ ಇದೆ ಎಂಬುದು ನನಗೆ ತಿಳಿದಿಲ್ಲ? ಲೈಂಗಿಕತೆಯ ಮೂಲಕ ಮಾನವ ಶ್ರೇಷ್ಠತೆಯನ್ನು ಹೇಳಿಕೊಳ್ಳಲು ಎಲ್ಲಾ ರಾಷ್ಟ್ರಗಳ ಆಟಗಳು, ಕ್ರೀಡೆಗಳ ಭಾಗವಹಿಸುವಿಕೆ ಏಕೆ ಬೇಕು ? ನಮ್ಮ ಮಲಗುವ ಕೋಣೆಗಳಲ್ಲಿ ಲೈಂಗಿಕತೆಯು ಏಕೆ ಉಳಿಯಬಾರದು? ಇದು ರಾಷ್ಟ್ರೀಯ ಗುರುತಾಗಿ ಏಕೆ ಇರಬೇಕು?.. ಇದು ವಿಚಿತ್ರವಾದ ನಡೆಯಾಗಿದೆ !” ಎಂದು ಕಂಗನಾ ಬರೆದುಕೊಂಡಿದ್ದಾರೆ.
‘ಎಕ್ಸ್’ ಮಾಲೀಕ ಎಲಾನ್ ಮುಸ್ಕ್ ಕೂಡ ‘ಇದು ಕ್ರೈಸ್ತ ಧರ್ಮಕ್ಕೆ ಸಲ್ಲಿಸಿದ ಅಗೌರವ’ ಎಂದು ಪೋಸ್ಟ್ ಮಾಡಿ ಒಲಂಪಿಕ್ಸ್ ಆಯೋಜಕರ ನಡೆಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ದೀಪಿಕಾ ಪಡುಕೋಣೆ ಫ್ಯಾನ್ಸ್​ಗೆ ಬ್ಯಾಡ್ ನ್ಯೂಸ್! ಹುಟ್ಟುವ ಮಗುವಿಗಾಗಿ ಈ…ನಿರ್ಧಾರ ತೆಗೆದುಕೊಂಡ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + nine =
Remember me
