ನವದೆಹಲಿ:ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ ಕಿರಿಯ ಮಗ ಅನಂತ್ ಅಂಬಾನಿ ಹಿಂದೆ 2016ರಲ್ಲಿ 108 ಕೆಜಿ ತೂಕವನ್ನು ಕಳೆದುಕೊಂಡು ಅನೇಕರಿಗೆ ಸ್ಫೂರ್ತಿಯಾಗಿದ್ದರು. ಅನಂತ್ ಅಂಬಾನಿ, ನಂತರದ ಕೆಲ ವರ್ಷಗಳಲ್ಲಿ ಕಳೆದುಕೊಂಡಿದ್ದ ತೂಕವನ್ನು ಮತ್ತೆ ಪಡೆದುಕೊಂಡಿದ್ದಾರೆ. ಅವರು ಹಿಂದೆ ತೂಕ ಕಳೆದುಕೊಂಡೆದ್ದು ಹೇಗೆ ಮತ್ತು ಈಗ ಮೊದಲಿನಂತೆಯೇ ದಪ್ಪ ಆಗಿದ್ದು ಹೇಗೆ?ಇದರ ಹಿಂದಿನ ಗುಟ್ಟು ಏನು? ಇದರ ಕುರಿತಾಗಿ ವಿಸ್ತೃತ ಮಾಹಿತಿ ಇಲ್ಲಿದೆ…
2016ರಲ್ಲಿ, ಅನಂತ್ ಅಂಬಾನಿ ಹೆಚ್ಚಿನ ತೂಕವನ್ನು ಕಳೆದುಜಕೊಂಡು ಫಿಟ್​ ಆಗಿ ರೂಪಾಂತರಗೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿತ್ತು. ಅನಂತ್ ಅಂಬಾನಿ ಕೇವಲ 18 ತಿಂಗಳಲ್ಲಿ ನೈಸರ್ಗಿಕವಾಗಿ 108 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತವೆ. ಅವರು ಪ್ರತಿದಿನ 5-6 ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದರು. ಇದರಲ್ಲಿ 21 ಕಿಮೀ ನಡಿಗೆ, ಯೋಗ, ತೂಕ ತರಬೇತಿ, ಕ್ರಿಯಾತ್ಮಕ ತರಬೇತಿ ಮತ್ತು ಕಾರ್ಡಿಯೋ ಸೇರಿದೆ.
ಅನಂತ್ ಅಂಬಾನಿ ತೂಕ ಕಳೆದುಕೊಳ್ಳಲು ಸಕ್ಕರೆ ರಹಿತ ಆಹಾರ, ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕೊಬ್ಬು ಇರುವ ಆಹಾರದ ಸೇವನೆ, ಕಡಿಮೆ ಕಾರ್ಬ್ ಆಹಾರವನ್ನು ಸೇವಿಸುತ್ತಿದ್ದರು. ಅವರು ಪ್ರತಿದಿನ 1200-1400 ಕ್ಯಾಲೊರಿಗಳನ್ನು ಸೇವಿಸುತ್ತಿದ್ದರು.
ಅವರ ಆಹಾರದಲ್ಲಿ ತಾಜಾ ಹಸಿರು ತರಕಾರಿಗಳು, ಬೇಳೆಕಾಳುಗಳು, ಮೊಳಕೆ ಕಾಳು ಮತ್ತು ಚೀಸ್ ಮತ್ತು ಹಾಲಿನಂತಹ ಡೈರಿ ಉತ್ಪನ್ನಗಳು ಸೇರಿವೆ. ಇದರೊಂದಿಗೆ, ಅವರು ಈ ಅವಧಿಯಲ್ಲಿ ಜಂಕ್ ಫುಡ್ ಅನ್ನು ಸಂಪೂರ್ಣವಾಗಿ ತ್ಯಜಿಸಿದ್ದರು ಎನ್ನಲಾಗಿದೆ.
2017ರಲ್ಲಿ, ನೀತಾ ಅಂಬಾನಿ ಸಂದರ್ಶನವೊಂದರಲ್ಲಿ ಅನಂತ್ ಅಂಬಾನಿ ಅವರು ಹೆಚ್ಚು ಅಸ್ತಮಾದಿಂದ ಬಳಲುತ್ತಿದ್ದು ಔಷಧಕ್ಕಾಗಿ ಮತ್ತು ಸ್ಟೀರಾಯ್ಡ್​ಗಳನ್ನು ತೆಗೆದುಕೊಳ್ಳುತ್ತಾರೆ. ಇದು ಅವರ ತೂಕ ಹೆಚ್ಚಾಗಲು ಕಾರಣವಾಯಿತು ಎಂದು ಬಹಿರಂಗಪಡಿಸಿದರು. ಅನಂತ್ ಅಂಬಾನಿ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ನೀತಾ ಅಂಬಾನಿ ಬಹಿರಂಗಪಡಿಸಿದ್ದರು. ಇದೇ ಕಾರಣದಿಂದ ಅನಂತ್ ಅಂಬಾನಿ ಮತ್ತೊಮ್ಮೆ ತೂಕ ಗಳಿಸಿಕೊಂಡಿರುವ ಸಾಧ್ಯತೆ ಹೆಚ್ಚಿದೆ.
ಅದಲ್ಲದೇ ಅಸ್ತಮಾ ರೋಗಿಗಳಿಗೆ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಂತಾದ ಚಟುವಟಿಕೆಗಳನ್ನು ಮಾಡುವುದು ಕಠಿಣವಾಗುತ್ತದೆ. ಉಸಿರಾಟದ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸ್ಟೆರಾಯ್ಡ್​ ತೆಗೆದುಕೊಂಡಾಗ ತೂಕ ಹೆಚ್ಚುತ್ತದೆ. ಬೊಜ್ಜನ್ನು ಕರಗಿಸಲು ಕಠಿಣ ದೈಹಿಕ ವ್ಯಾಯಾಮ ಮಾಡಲು ಸಾಧ್ಯವಾಗದೇ ಇನ್ನಷ್ಟು ತೂಕ ಗಳಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಅನಂತ್ ಅಂಬಾನಿ ಅವರ ನಿಶ್ಚಿತಾರ್ಥ ಸಮಾರಂಭದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರು ತೂಕವನ್ನು ಹೇಗೆ ಗಳಿಸಿದರು ಎಂಬ ಅಧಿಕೃತ ಮಾಹಿತಿ ತಿಳಿಯಲು ನೆಟಿಜನ್‌ಗಳು ಕುತೂಹಲದಿಂದ ಕಾಯುತ್ತಿದ್ದಾರೆ ಎಂದೇ ಹೇಳಬಹುದು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 12 =
Remember me
