ನವದೆಹಲಿ:ಮೊದಲ ಬಾರಿಗೆ 2023-24 ರ ಹಣಕಾಸು ವರ್ಷದಲ್ಲಿ ಬ್ಯಾಂಕಿಂಗ್ ವಲಯವು 3 ಲಕ್ಷ ಕೋಟಿ ರೂಪಾಯಿಗಳ ಲಾಭವನ್ನು ಸಾಧಿಸಿದೆ. ಈ ಗಮನಾರ್ಹ ಸಾಧನೆಗಾಗಿ ಬ್ಯಾಂಕ್‌ಗಳನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಳೆದ ದಶಕದಲ್ಲಿ ಬ್ಯಾಂಕ್‌ಗಳ ಸ್ಥಿತಿ ಗಣನೀಯವಾಗಿ ಸುಧಾರಿಸಿದೆ ಎಂದಿದ್ದಾರೆ.
ಈ ಪ್ರಗತಿಯು ಬಡವರು, ರೈತರು ಮತ್ತು ಎಂಎಸ್‌ಎಂಇಗಳಿಗೆ (ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ) ಸಾಲದ ಲಭ್ಯತೆಯನ್ನು ಸುಲಭಗೊಳಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಕಳೆದ 10 ವರ್ಷಗಳಲ್ಲಿ ಭಾರತದ ಬ್ಯಾಂಕಿಂಗ್ ವಲಯದ ನಿವ್ವಳ ಲಾಭವು ಮೊದಲ ಬಾರಿಗೆ 3 ಲಕ್ಷ ಕೋಟಿ ರೂಪಾಯಿ ದಾಟಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಕಾಂಗ್ರೆಸ್​ ನೇತೃತ್ವದ ಯುಪಿಎ ಸರ್ಕಾರದ ಫೋನ್ ಬ್ಯಾಂಕಿಂಗ್ ನೀತಿಯು ಬ್ಯಾಂಕ್​ಗಳ ಗಮನಾರ್ಹ ನಷ್ಟಕ್ಕೆ ಕಾರಣವಾಯಿತು. ಅಲ್ಲದೆ, ಬ್ಯಾಂಕ್‌ಗಳ ಎನ್‌ಪಿಎ (ನಾನ್​ಪರ್ಫಾಮಿಂಗ್​ ಅಸೆಟ್​- ಅನುತ್ಪಾದಕ ಆಸ್ತಿ) ಹೆಚ್ಚಳಕ್ಕೆ ಕಾರಣವಾಯಿತು ಎಂದು ಪ್ರಧಾನಿ ಆಪಾದಿಸಿದರು.
“ನಾವು ಅಧಿಕಾರಕ್ಕೆ ಬಂದಾಗ, ಹಿಂದಿನ ಯುಪಿಎ ಸರ್ಕಾರದ ಫೋನ್ ಬ್ಯಾಂಕಿಂಗ್ ನೀತಿಯಿಂದಾಗಿ ನಮ್ಮ ಬ್ಯಾಂಕ್‌ಗಳು ನಷ್ಟ ಮತ್ತು ಹೆಚ್ಚಿನ ಎನ್‌ಪಿಎಗಳಿಂದ ತತ್ತರಿಸಿದ್ದವು. ಬಡವರಿಗೆ ಬ್ಯಾಂಕ್‌ಗಳ ಬಾಗಿಲು ಮುಚ್ಚಿತ್ತು. ಬ್ಯಾಂಕ್‌ಗಳ ಆರೋಗ್ಯದಲ್ಲಿನ ಈ ಸುಧಾರಣೆಯು ನಮ್ಮ ಬಡವರು, ರೈತರು ಮತ್ತು ಎಂಎಸ್‌ಎಂಇಗಳಿಗೆ ಸಾಲ ಲಭ್ಯತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ” ಎಂದು ಪ್ರಧಾನಮಂತ್ರಿ ಹೇಳಿದರು.
ಮೊದಲ ಬಾರಿಗೆ, ಬ್ಯಾಂಕ್‌ಗಳ ಲಾಭವು 2023-24 ರ ಹಣಕಾಸು ವರ್ಷದಲ್ಲಿ 3 ಲಕ್ಷ ಕೋಟಿ ರೂಪಾಯಿ ಮೀರಿದೆ. ಇದು ವರ್ಷದಿಂದ ವರ್ಷಕ್ಕೆ 39% ಬೆಳವಣಿಗೆಯನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಲಾಭವು 1.4 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದು ವರ್ಷದಿಂದ ವರ್ಷಕ್ಕೆ 32% ಹೆಚ್ಚಳವಾಗಿದೆ. ಆದರೆ, ಖಾಸಗಿ ಬ್ಯಾಂಕ್‌ಗಳು ರೂ 1.7 ಲಕ್ಷ ಕೋಟಿ ಲಾಭವನ್ನು ವರದಿ ಮಾಡಿವೆ. ಇದು ಕಳೆದ ಹಣಕಾಸು ವರ್ಷಕ್ಕಿಂತ 42% ಹೆಚ್ಚಳವಾಗಿದೆ.

ಇರಾನ್ ಅಧ್ಯಕ್ಷರ ನಿಧನದ ಪರಿಣಾಮ: ಚಿನ್ನ, ತೈಲ ಹೆಚ್ಚಳ; ಷೇರು ಪೇಟೆಗೂ ತೊಂದರೆಯಾದೀತೆ?

ಟ್ಯಾಕ್ಸಿ ಸೇವೆ ಒದಗಿಸುವ ಉಬರ್​ ಇನ್ನು ಮುಂದೆ ಬಸ್​ ಓಡಿಸಲಿದೆ… ರಾಜಧಾನಿಯಲ್ಲಿ ಹೇಗಿರಲಿದೆ ಈ ಪ್ರೀಮಿಯಂ ಸರ್ವೀಸ್​?

ಜೂನ್​ 4ರ ಫಲಿತಾಂಶದ ನಂತರ ಷೇರುಪೇಟೆ ಉತ್ತುಂಗಕ್ಕೆ: ದಲಾಲ್​ ಸ್ಟ್ರೀಟ್​ ಆತಂಕ ನಿವಾರಿಸಲು ಮುಂದಾದ ಪ್ರಧಾನಿ ಮೋದಿ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 6 =
Remember me
