ಮುಂಬೈ:ನಿರ್ಮಾಣ ಕಂಪನಿ KNR ಕನ್ಸ್ಟ್ರಕ್ಷನ್ ಷೇರು ಬೆಲೆಗಳು ಗುರುವಾರ 20% ರಷ್ಟು ಏರಿಕೆಯಾಗಿದ್ದು, ಅಪ್ಪರ್​ ಸರ್ಕ್ಯೂಟ್ ಹಿಟ್​ ಆಗಿದೆ. ಈ ಏರಿಕೆಯ ನಂತರ ಕಂಪನಿಯ ಷೇರುಗಳ ಬೆಲೆ 407.30 ರೂ. ಮುಟ್ಟಿದೆ. ಇದು 52 ವಾರಗಳ ಗರಿಷ್ಠ ಬೆಲೆಯಾಗಿದೆ. ಕಳೆದ 2 ವಹಿವಾಟಿನ ದಿನಗಳಲ್ಲಿ ಈ ಕಂಪನಿಯ ಷೇರು ಬೆಲೆಗಳು ಶೇ. 35ರಷ್ಟು ಏರಿಕೆ ಕಂಡಿವೆ. 3 ವಾರಗಳಲ್ಲಿ 58 ಪ್ರತಿಶತಕ್ಕಿಂತ ಹೆಚ್ಚು ಏರಿಕೆಯಾಗಿದೆ.
ಪ್ರಸ್ತುತ ಕೇಂದ್ರ ಸರ್ಕಾರ ರಸ್ತೆ ನಿರ್ಮಾಣ ಇತ್ಯಾದಿಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಪಿಎಂ ಗತಿ ಶಕ್ತಿ, ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್, ಸ್ಮಾರ್ಟ್ ಸಿಟಿ ಮಿಷನ್​ಗೆ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಕೆಎನ್​ಆರ್​ ಕನ್‌ಸ್ಟ್ರಕ್ಷನ್ ಮೂಲಸೌಕರ್ಯ ಕ್ಷೇತ್ರದಲ್ಲಿ ಪ್ರಮುಖ ಕಂಪನಿಯಾಗಿದೆ. ಕಂಪನಿಯು ನೀರಾವರಿ, ಮೇಲ್ಸೇತುವೆಗಳು, ಹೆದ್ದಾರಿಗಳು ಇತ್ಯಾದಿಗಳ ನಿರ್ಮಾಣಕ್ಕಾಗಿ ತನ್ನ ಸೇವೆಗಳನ್ನು ಒದಗಿಸುತ್ತದೆ. ಕಂಪನಿಯು ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಬಿಹಾರದಲ್ಲಿ ವಿವಿಧ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪ್ರಸ್ತುತ ಸರ್ಕಾರವು ಈ ವರ್ಷ ಮಂಡಿಸಿದ ಬಜೆಟ್‌ನಲ್ಲಿ ರಸ್ತೆ ಬಂಡವಾಳವನ್ನು 11 ಪ್ರತಿಶತದಷ್ಟು ಹೆಚ್ಚಿಸಿದೆ. ಇದು ಕೆಎನ್​ಆರ್​ ಕನ್‌ಸ್ಟ್ರಕ್ಷನ್‌ನಂತಹ ಕಂಪನಿಗಳಿಗೆ ಅನೇಕ ದೊಡ್ಡ ಅವಕಾಶಗಳನ್ನು ತಂದಿದೆ. ಇತ್ತೀಚೆಗೆ ಕಂಪನಿಗೆ 1200 ಕೋಟಿ ರೂ.ಗಳ ಕಾಮಗಾರಿ ದೊರೆತಿತ್ತು. ಪ್ರಸ್ತುತ ಕಂಪನಿ ಬಳಿ 6505 ಕೋಟಿ ರೂಪಾಯಿಯ ಕಾಮಗಾರಿಗಳಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + five =
Remember me
