ಮುಂಬೈ:ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ವಯಸ್ಸು 50 ದಾಟಿದ್ದರೂ ದೇಶದ ಅತ್ಯಂತ ಅರ್ಹ ಬ್ಯಾಚುಲರ್‌ಗಳಲ್ಲಿ ಒಬ್ಬರು ಎಂದೇ ಪರಿಗಣಿತರಾದವರು. ಈ ಹಿಂದೆ ಕತ್ರಿನಾ ಕೈಫ್, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸಂಗೀತಾ ಬಿಜಲಾನಿ ಅವರಂತಹ ವಿವಿಧ ನಟಿಯರ ಜತೆ ಈತನ ಹೆಸರು ಥಳಕು ಹಾಕಿಕೊಂಡಿತ್ತು. ಆದರೆ, ಇದಾವುದೇ ಸಂಬಂಧಗಳು ಮದುವೆಯ ಮಟ್ಟವನ್ನು ತಲುಪಲಿಲ್ಲ.
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಸೊಸೆಯಾಗಿರುವ (niece) ಶರ್ಮಿನ್ ಸೆಗಲ್ ಅವರು ಈ ಬಾಲಿವುಡ್​ ಜನಪ್ರಿಯ ನಟನ ಪ್ರೊಪೊಸಲ್ (ಮದುವೆ ಪ್ರಸ್ತಾಪವನ್ನು)​ ಅನ್ನು ತಿರಸ್ಕರಿಸಿದ್ದರು ಎಂದು ಇತ್ತೀಚೆಗೆ ತಿಳಿದುಬಂದಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಶರ್ಮಿನ್ ಅವರು ಕೇವಲ 2 ಅಥವಾ 3 ವರ್ಷದವಳಿದ್ದಾಗ, ಹಮ್ ದಿಲ್ ದೇ ಚುಕೆ ಸನಮ್ ಚಿತ್ರದ ಸೆಟ್‌ಗಳಲ್ಲಿ ಸಲ್ಮಾನ್ ಅವರನ್ನು ಭೇಟಿಯಾಗಿದ್ದರು. ಆಗ ಸಲ್ಮಾನ್​ ಅವರು, “ನಿನು ನನ್ನನ್ನು ಮದುವೆಯಾಗುತ್ತಿಯಾ?” ಎಂದು ತಮಾಷೆಯಾಗಿ ಕೇಳಿದ್ದರು ಎಂದು ನೆನಪಿಸಿಕೊಂಡರು. ಅದಕ್ಕೆ ಶರ್ಮಿನ್​ ನಗುತ್ತಾ, “ಇಲ್ಲ!” ಎಂದಿದ್ದರು.
ಆದರೂ, ಶರ್ಮಿನ್ ಅವರು ತಮಗಿನ್ನೂ ಸಲ್ಮಾನ್‌ ಮೇಲೆ ಕೋಪ ಇರುವುದಾಗಿ ಹೇಳಿದ್ದರು, ವಿಶೇಷವಾಗಿ ಪ್ಯಾರ್ ಕಿಯಾ ತೊ ಡರನಾದ ಓ ಓ ಜಾನೇ ಜಾನಾ ವೀಕ್ಷಿಸುವಾಗ ಎನ್ನುತ್ತಾರೆ. ಆ ವಯಸ್ಸಿನಲ್ಲಿ ತಮಗೆ ಮದುವೆಯ ಅರ್ಥ ಸ್ಪಷ್ಟವಾಗಿ ಗೊತ್ತಿರಲಿಲ್ಲ. ಹಾಗಾಗಿ ಬೇಡ ಎಂದಿದ್ದೆ ಎನ್ನುತ್ತಾರೆ.
ಶರ್ಮಿನ್ ಸೆಗಲ್ ಮಲಾಲ್‌ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು, ಮೀಜಾನ್ ಜಾಫ್ರಿ ಜತೆ ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿನ ನಟನೆಗಾಗಿ ಅವರು ಅತ್ಯುತ್ತಮ ಮಹಿಳಾ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಇದೀಗ, ಶರ್ಮಿನ್ ಅವರು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೀರಾಮಂಡಿ ಬಿಡುಗಡೆಯ ಕಾರಣ ಸುದ್ದಿಯಲ್ಲಿದ್ದಾರೆ.
ಅಮೆಠಿ ಬದಲು ರಾಯಬರೇಲಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡದ್ದು ಏಕೆ?: ರಾಹುಲ್ ಗಾಂಧಿ ಸೋಲು- ಗೆಲುವಿನ ಲೆಕ್ಕಾಚಾರವೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
