ಮುಂಬೈ:ಮಹಾರಾಷ್ಟ್ರದ ನಾಂದೇಡ್​ ಮೂಲದ ಸರ್ಕಾರಿ ಉದ್ಯೋಗಿಯೊಬ್ಬರು ಕಚೇರಿಗೆ ಕುದುರೆ ಏರಿ ಬರಲು ಅನುಮತಿ ಕೋರಿದ್ದಾರೆ. ಅಂದಹಾಗೆ ಇದಕ್ಕೆ ಕಾರಣ ಪೆಟ್ರೋಲ್​ ದರ ಜಾಸ್ತಿ ಆಗಿರುವುದಲ್ಲ. ಉದ್ಯೋಗಿಯ ನೋವು ಬೇರೇನೆ ಇದೆ. ಅದು ಏನೆಂದು ತಿಳಿಯಲು ಮುಂದೆ ಓದಿ.
ಸತೀಶ್​ ದೇಶ್​ಮುಖ್​​ ಎಂಬುವರು ತಮ್ಮ ಬಾಸ್​ ಅನುಮತಿಯನ್ನು ಕೋರಿದ್ದಾರೆ. ದೇಶ್​ಮುಖ್​ ಅವರು ನಾಂದೇಡ್ ಜಿಲ್ಲಾಧಿಕಾರಿ ಕಚೇರಿಯ ಉದ್ಯೋಗ ಖಾತರಿ ಯೋಜನಾ ವಿಭಾಗದಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಕಚೇರಿಗೆ ಕುದುರೆ ಏರಿ ಬರಲು ಅನುಮತಿ ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರಬರೆದಿದ್ದಾರೆ.
ಇದನ್ನೂ ಓದಿರಿ:ಪತಿ, ಪ್ರೇಮಿ ಹಾಗೂ ಪಾಲಕರ ಚಾಯ್ಸ್​… ಆಯ್ಕೆ ಮಾಡಲಾಗದೇ ಕುಗ್ಗಿಹೋಗಿದ್ದೇನೆ… ಏನು ಮಾಡಲಿ?
ದೇಶ್​ಮುಖ್​ ಕೊಟ್ಟಿರುವ ಕಾರಣ ಹೀಗಿದೆ… ನಾನು ಬೆನ್ನು ನೋವಿನಿಂದ ಬಳಲುತ್ತಿದ್ದೇನೆ. ಪ್ರತಿದಿನ ಕೆಲಸಕ್ಕೆ ತೆರಳಲು ಅನುಕೂಲಕರ ಮಾರ್ಗವನ್ನು ನೋಡುತ್ತಿದ್ದೇನೆ. ಸದ್ಯ ನನ್ನ ವೈದ್ಯಕೀಯ ಸ್ಥಿತಿಯಿಂದಾಗಿ ಬೈಕ್​ ಚಲಾಯಿಸಲು ತುಂಬಾ ಕಷ್ಟವಾಗುತ್ತಿದೆ. ಕಾರು ತೆಗೆದುಕೊಂಡು ಬರಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಾನೊಂದು ಕುದುರೆಯನ್ನು ಖರೀದಿಸಲು ನಿರ್ಧರಿಸಿದ್ದೇನೆ. ಹೀಗಾಗಿ ನನಗೆ ಅನುಮತಿ ನೀಡಿ ಎಂದು ದೇಶ್​ಮುಖ್​ ಮನವಿ ಮಾಡಿಕೊಂಡಿದ್ದಾರೆ.
ಸದ್ಯ ದೇಶ್​ಮುಖ್​ ಅವರ ಪತ್ರ ಜಿಲ್ಲಾಧಿಕಾರಿ ಅಂಗಳದಲ್ಲಿದ್ದು, ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆಂಬ ಕುತೂಹಲವಿದೆ. ಆದರೆ, ಅವರ ಪತ್ರ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ದೇಶ್​ಮುಖ್​ ಬೆಂಬಲಕ್ಕೆ ನಿಂತಿರುವ ಅನೇಕರು ಅನುಮತಿ ಕೊಟ್ಟುಬಿಡಿ ಎಂದಿದ್ದಾರೆ.(ಏಜೆನ್ಸೀಸ್​)
18ರ ಯುವತಿಯ ಮರ್ಯಾದಾ ಹತ್ಯೆ : ಕೋರ್ಟ್ ಆದೇಶವಿದ್ದರೂ ರಕ್ಷಿಸಲು ವಿಫಲರಾದ ಪೊಲೀಸರು

ನಿಧಿ ಸುಬ್ಬಯ್ಯ ಮನೆಗೆ ಪಟಾಕಿ ಎಸೆದ ಸ್ಟಾರ್ ನಟನ ಹೆಸರು ಕೇಳಿ ಬೆರಗಾದ ಸ್ಪರ್ಧಿಗಳು..!

ನ್ಯೂಜಿಲೆಂಡ್​ನಲ್ಲಿ ಸುನಾಮಿ ಅಪ್ಪಳಿಸುವ ಭೀತಿ: ಸಾವಿರಾರು ಜನರ ಸ್ಥಳಾಂತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 2 =
Remember me
