ಮುಂಬೈ:ಆಘಾತಕಾರಿ ಘಟನೆಯೊಂದಲ್ಲಿ ವ್ಯಕ್ತಿಯೋರ್ವ ತನ್ನ ಮಾಜಿ ಪ್ರಿಯತಮೆಯನ್ನು ನಡುರೆಸ್ತೆಯಲ್ಲಿ ಸ್ಪ್ಯಾನರ್​ನೊಂದಿಗೆ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಘಟನೆಯು ಮಹಾರಾಷ್ಟ್ರದ ರಾಜಧಾನಿ ಮುಂಬೈನ ವಸೈಯ ಪೂರ್ವ ಚಿಂಚ್ಪಾಡಾದಲ್ಲಿ ನಡೆದಿದ್ದು, ಕೊಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಮೃತರನ್ನು ಆರತಿ ಯಾದವ್​ ಎಂದು ಗುರುತಿಸಲಾಗಿದ್ದು, ಆರೋಪಿ ರೋಹಿತ್​ ಯಾದವ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗ್ಗೆ 8:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಜನರು ಸುಮ್ಮನೆ ನಿಂತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
#watchthefullvideoof Vasai girlfriend murder by her lover.You will be mentally disturbed after watching the video of this horrific incident.#MUMBAI#MumbaiNews#News#Crime#CrimeCase#Vasai#girlfriendmurder#cctvfootagehttps://t.co/R8Gc7bEyJ1pic.twitter.com/6i1hrl7Y3B
ಇದನ್ನೂ ಓದಿ:ಸ್ವಲ್ಪ ಎಚ್ಚರ ತಪ್ಪಿದ್ರು ಪ್ರಕರಣ ದಾರಿ ತಪ್ಪುತ್ತಿತ್ತು; ಅಧಿಕಾರಿಗಳ ಸಮಯಪ್ರಜ್ಞೆ ಕೊಂಡಾಡಿದ ಪೊಲೀಸ್​ ಆಯುಕ್ತ ದಯಾನಂದ್
ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಆರೋಪಿ ರೋಹಿತ್ ದೂರದಿಂದ ಸ್ಪ್ಯಾನರ್​ ಹಿಡಿದು ಓಡಿ ಬರುವುದನ್ನು ನೋಡಬಹುದಾಗಿದೆ. ಫುಟ್​ಪಾತ್​ ಮೇಲೆ ನಡೆದುಕೊಂಡು ಹೋಗುತ್ತಿರುವ ಸಂತ್ರಸ್ತೆ ಅರ್ಪಿತಾ ಮೇಲೆ ಏಕಾಏಕಿ ದಾಳಿ ಮಾಡುತ್ತಾನೆ. ಈ ವೇಳೆ ರಸ್ತೆಯಲ್ಲಿದ್ದ ಜನರು ಸಂತ್ರಸ್ತೆಯ ನೆರವಿಗೆ ಧಾವಿಸದೆ ಸುಮ್ಮನೆ ನಿಂತಿರುವುದನ್ನ ನೋಡಬಹುದಾಗಿದೆ. ಬಳಿಕ ಒಬ್ಬ ವ್ಯಕ್ತಿಯು ಬಿಡಿಸಲು ಮುಂದಾದಾಗ ಆತನಿಗೆ ಆರೋಪಿ ಬೆದರಿಕೆ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಬಳಿಕ ಹೀಗೇಕೆ ಮಾಡಿದೆ ಎಂದು ಆಕೆಯ ಶವದ ಬಳಿ ಕೂಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಆರೋಪಿ ರೋಹಿತ್​ ಹಾಗೂ ಕೊಲೆಯಾದ ಅರ್ಪಿತಾ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಕೆಲವು ಹಿಂದೆ ಇಬ್ಬರು ಕಾರಣಾಂತರಗಳಿಂದ ಬೇರ್ಪಟ್ಟಿದ್ದರು. ಇತ್ತೀಚಿಗೆ ಅರ್ಪಿತಾ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ತಿಳಿದು ಕೋಪಗೊಂಡ ರೋಹಿತ್​ ಸಿಟ್ಟಿನಿಂದ ಆಕೆಯ ಮೇಲೆ ಸ್ಪ್ಯಾನರ್​ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಹತ್ಯೆಗೆ ಬಳಸಲಾಗಿದ್ದ ಆಯುಧವನ್ನು ವಶಪಡಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 5 =
Remember me
