ನವದೆಹಲಿ:ಉಕ್ಕು ಸೇರಿದಂತೆ ಮೂಲಸೌಕರ್ಯ ವಲಯದಲ್ಲಿ ಭಾರಿ ಹೂಡಿಕೆಯ ಹಿನ್ನೆಲೆಯಲ್ಲಿ ಮುಂದಿನ 5 ರಿಂದ 10 ವರ್ಷಗಳಲ್ಲಿ ಭಾರತದಲ್ಲಿ ಸತುವಿನ ಬೇಡಿಕೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ಅಂತಾರಾಷ್ಟ್ರೀಯ ಜಿಂಕ್ ಅಸೋಸಿಯೇಷನ್ ಭಾನುವಾರ ತಿಳಿಸಿದೆ.
ಭಾರತದಲ್ಲಿ ಸತು (ಜಿಂಕ್) ಬೇಡಿಕೆಯು ಉಕ್ಕಿನ ಮಾರುಕಟ್ಟೆಯ ಬೆಳವಣಿಗೆಯ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಏಕೆಂದರೆ, ಸವೆತದಿಂದ ರಕ್ಷಿಸಲು ಉಕ್ಕನ್ನು ಕಲಾಯಿ ಮಾಡಲು ಸತುವನ್ನು ಬಳಸಲಾಗುತ್ತದೆ.
“ಮುಂದಿನ 5ರಿಂದ 10 ವರ್ಷಗಳಲ್ಲಿ ಸತು ಬೇಡಿಕೆ ದ್ವಿಗುಣಗೊಳ್ಳಬಹುದು. ಭಾರತದಲ್ಲಿ ಪ್ರಾಥಮಿಕ ಮತ್ತು ಸಂಸ್ಕರಿಸಿದ ಸತುವಿನ ಮಾರುಕಟ್ಟೆ ಪ್ರಸ್ತುತ 800 ರಿಂದ 1,000 ಟನ್‌ಗಳ ಸಮೀಪದಲ್ಲಿದೆ (ವರ್ಷಕ್ಕೆ). ಉಕ್ಕಿನ ಉತ್ಪಾದನೆ ಹೆಚ್ಚಿಸುವಲ್ಲಿ ಭಾರಿ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಹಾಗಾಗಿ ಭಾರತದಲ್ಲಿ ಸತುವು ಬಲವಾದ ಪಾತ್ರ ವಹಿಸುವುದನ್ನು ನಾನು ನಿರೀಕ್ಷಿಸುತ್ತೇನೆ” ಎಂದು ಇಂಟರ್ನ್ಯಾಷನಲ್ ಝಿಂಕ್ ಅಸೋಸಿಯೇಷನ್​ನ ಜಾಗತಿಕ ನಿರ್ದೇಶಕ ಮಾರ್ಟಿನ್ ವ್ಯಾನ್ ಲೀವೆನ್ ಅವರು ಮಾಧ್ಯಮವೊಂದರ ಜತೆಗಿನ ಸಂವಾದದಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಪ್ರಸ್ತುತ ಸತು ಬೇಡಿಕೆ ವರ್ಷಕ್ಕೆ 800 ರಿಂದ 1,000 ಟನ್‌ಗಳಷ್ಟಿದೆ. ಭಾರತದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸತು ಬಳಕೆಯಾಗುತ್ತಿದೆ, ತಲಾವಾರು ಲೆಕ್ಕದಲ್ಲಿ ಭಾರತದಲ್ಲಿ ಸತು ಬಳಕೆ ಅರ್ಧ ಕೆಜಿಯಷ್ಟಿದೆ. ಇದು ವಿಶ್ವದ ಸರಾಸರಿಗಿಂತ ಬಹಳ ಹಿಂದೆ ಇದೆ ಎಂದು ಅವರು ಹೇಳಿದ್ದಾರೆ.
“ನೀವು ಭಾರತದಲ್ಲಿ ಸತು ಬಳಕೆಯನ್ನು ನೋಡಿದರೆ, ಇದು ಪ್ರತಿಯೊಬ್ಬರಿಗೆ ಅರ್ಧ ಕೆಜಿಯಷ್ಟಿದೆ. ಜಾಗತಿಕ ಸರಾಸರಿ ತಲಾ ನಾಲ್ಕು ಕೆ.ಜಿ. ಇದೆ. ಅಭಿವೃದ್ಧಿ ಹೊಂದಿದ ದೇಶಗಳಾದ ಕೊರಿಯಾ, ಯುರೋಪ್, ಅಮೆರಿಕದಲ್ಲಿ ಇದು ಇನ್ನೂ ಹೆಚ್ಚಿದೆ. ಇಲ್ಲಿ ತಲಾ ಆರು ಅಥವಾ ಏಳು ಕೆಜಿ ಬಳಕೆ ಇದೆ’’ ಎಂದು ಅವರು ಹೇಳಿದರು.
https://youtu.be/8pTfTyyDJ0U
ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ 6.7%: ಇಂಡಿಯಾ ರೇಟಿಂಗ್ಸ್ ಅಂದಾಜು

ಭಾರತೀಯ ಷೇರು ಮಾರುಕಟ್ಟೆಯಿಂದ ರೂ. 28,242 ಕೋಟಿ ಹೂಡಿಕೆ ಹಿಂಪಡೆದ ವಿದೇಶಿ ಹೂಡಿಕೆದಾರರು

ಸಿಐಐ ಅಧ್ಯಕ್ಷರಾಗಿ ಐಟಿಸಿಯ ಸಂಜೀವ್ ಪುರಿ ಅಧಿಕಾರ ಸ್ವೀಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
