ನವದೆಹಲಿ:ಜೂನ್​ 19ರಂದು 54ನೇ ವಸಂತಕ್ಕೆ ಕಾಲಿಟ್ಟ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸರಳವಾಗಿ ತಮ್ಮ ಜನುಮದಿನವನ್ನು ಆಚರಿಸಿಕೊಂಡಿದ್ದಾರೆ. ಎಐಸಿಸಿ ಕಚೇರಿಯಲ್ಲಿ ತಮ್ಮ ಜನುಮದಿನವನ್ನು ಆಚರಿಸಿಕೊಂಡ ಬಳಿಕ #WhiteTshirtArmy ಎಂಬ ಅಭಿಯಾನವನ್ನು ಶುರು ಮಾಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೆಚ್ಚಾಗಿ ಬಿಳಿ ಬಣ್ಣದ ಟೀ-ಶರ್ಟ್​ಅನ್ನು ಧರಿಸುವುದನ್ನು ನೋಡಬಹುದಾಗಿದೆ. ಈ ಬಗ್ಗೆ ಅನೇಕರು ಪ್ರಶ್ನಿಸಿದ್ದು, ರಾಹುಲ್​ ಗಾಂಧಿ ಈವರೆಗೆ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಇದೀಗ ಈ ಬಗ್ಗೆ ಮಾತನಾಡಿರುವ ರಾಹುಲ್​ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಉತ್ತರಿಸಿದ್ದಾರೆ.
जन्मदिन की शुभकामनाओं के लिए आप सभी का दिल से धन्यवाद।मुझसे अक्सर पूछा जाता है कि मैं हमेशा 'सफेद T-shirt' क्यों पहनता हूं – यह T-shirt मेरे लिए पारदर्शिता, दृढ़ता और सरलता का प्रतीक है।आपके जीवन में ये मूल्य कहां और कितनी उपयोगी हैं ये#WhiteTshirtArmyइस्तेमाल कर मुझे एक…pic.twitter.com/B89cI2zDEu
ಇದನ್ನೂ ಓದಿ: ಆತ ಸಾಂಪ್ರದಾಯಿಕ ಆದರೆ ಹೆಚ್ಚು ಪರಿಣಾಮಕಾರಿ; ಟೀಮ್​ ಇಂಡಿಯಾ ಆಟಗಾರನನ್ನು ಹಾಡಿ ಹೊಗಳಿದ ಮಾಜಿ ಕ್ರಿಕೆಟಿಗ
ಮೊದಲಿಗೆ ನನ್ನ ಜನುಮದಿನದ ಪ್ರಯುಕ್ತ ಶುಭಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಾನು ಯಾವಾಗಲೂ ‘ಬಿಳಿ ಟೀ-ಶರ್ಟ್​’ ಅನ್ನು ಏಕೆ ಧರಿಸುತ್ತೇನೆ ಎಂದು ಜನರು ನನ್ನನ್ನು ಆಗಾಗ್ಗೆ ಕೇಳುತ್ತಿರುತ್ತಾರೆ. ಬಿಳಿ ಬಣ್ಣದ ಟೀ-ಶರ್ಟ್​ ನನಗೆ ಪಾರದರ್ಶಕತೆ, ಘನತೆ ಮತ್ತು ಸರಳತೆಯನ್ನು ಸಂಕೇತಿಸುತ್ತದೆ. ಹೀಗಾಗಿ ನಾನು ಹೆಚ್ಚು ಬಿಳಿ ಬಣ್ಣದ ಟಿ-ಶರ್ಟ್​ಗಳನ್ನು ಧರಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ #WhiteTshirtArmy ಬಳಸಿ ಮತ್ತು ವೀಡಿಯೋ ಮಾಡುವ ಮೂಲಕ ನನಗೆ ತಿಳಿಸಿ. ನಾನು ನಿಮಗೆ ಬಿಳಿ ಟೀ-ಶರ್ಟ್​ ಅನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ರಾಹುಲ್‌ ಗಾಂಧಿ ಟ್ವೀಟ್​ ಮೂಲಕ ತಿಳಿಸಿದ್ದಾರೆ.
1970 ರ ಜೂನ್ 19 ರಂದು ಜನಿಸಿದ ರಾಹುಲ್ ಗಾಂಧಿ ಅವರು 5 ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ. 2004ರಲ್ಲಿ ಚುನಾವಣಾ ರಾಜಕೀಯ ಪ್ರವೇಶಿಸಿದ ರಾಹುಲ್​ ಗಾಂಧಿ ಉತ್ತರ ಪ್ರದೇಶದ ಅಮೇಥಿಯಿಂದ ಮೊದಲ ಬಾರಿಗೆ ಸ್ಪರ್ಧಿಸಿ ಚುನಾವಣೆಯಲ್ಲಿ ಗೆದ್ದರು. 2022 ರ ಸೆಪ್ಟೆಂಬರ್‌ ನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆಯನ್ನು ನಡೆಸಿದ್ದರು. ಲೋಕಸಭೆ ಚುನಾವಣೆಗೂ ಮುನ್ನ ಭಾರತ್​ ಜೋಡೋ ನ್ಯಾಯ್​​ ಯಾತ್ರಾ ನಡೆಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + ten =
Remember me
