ಮುಂಬೈ:ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಿಂದಾಗಿ ಮತ್ತೊಮ್ಮೆ ಅಂಬಾನಿ ಕುಟುಂಬದ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ರಿಲಯನ್ಸ್ ಹಾಗೂ ಜಿಯೋ ಕಂಪನಿಗಳ ಮಾಲಿಕ ಹಾಗೂ ದೇಶದ ಕುಬೇರ ಮುಕೇಶ್​ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರ ಕುರಿತು ಸ್ವಾರಸ್ಯಕರ ಸಂಗತಿಯೊಂದು ಎಲ್ಲೆಡೆ ಈಗ ಹರಿದಾಡುತ್ತಿದೆ. ನೀತಾ ಅಂಬಾನಿ ಅವರು ತಮ್ಮ ವೃತ್ತಿಜೀವನವನ್ನು ವೃತ್ತಿಪರ ಶಿಕ್ಷಕಿಯಾಗಿ ಪ್ರಾರಂಭಿಸಿದರು. ಅಲ್ಲದೆ, ಮದುವೆಯ ನಂತರವೂ ಅವರು ಈ ಕೆಲಸವನ್ನು ಮುಂದುವರಿಸಿದರು. ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ 1985 ರಲ್ಲಿ ವಿವಾಹವಾದರು.
ಸಿಮಿ ಗ್ರೆವಾಲ್‌ ಅವರಿಗೆ ನೀಡಿದ ಸಂದರ್ಶನದಲ್ಲಿ ಅವರು, ಸೂರ್ಯಕಾಂತಿ ಎಂಬ ಹೆಸರಿನ ನರ್ಸರಿಯಲ್ಲಿ ತಾವು ನರ್ಸರಿ ಶಿಕ್ಷಕರಾಗಿ ಕೆಲಸ ಮಾಡಿದ್ದಾಗಿ ತಿಳಿಸಿದರು.
ನೀತಾ ಅಂಬಾನಿ ಅವರು ಬೋಧನೆಗಾಗಿ ತಿಂಗಳಿಗೆ 800 ರೂಪಾಯಿಗಳನ್ನು ಪಡೆಯುತ್ತಿದ್ದುದಾಗಿಯೂ ತಿಳಿಸಿದ್ದಾರೆ.
ಈ ಕೆಲಸ ಮಾಡುತ್ತಿದ್ದುದರ ಬಗೆಗೆ ಜನರು ಗೇಲಿ ಮಾಡುತ್ತಿದ್ದರು. ಆದರೆ, ಈ ಕೆಲಸ ತಮಗೆ ತೃಪ್ತಿ ನೀಡಿದೆ ಎಂದು ನೀತಾ ಅಂಬಾನಿ ಹೇಳಿದ್ದಾರೆ. “ಆ ಸಮಯದಲ್ಲಿ ಜನರು ನನ್ನನ್ನು ನೋಡಿ ನಗುತ್ತಿದ್ದರು. ಆದರೆ, ಆ ಕೆಲಸ ನನಗೆ ತುಂಬ ತೃಪ್ತಿ ಕೊಟ್ಟಿತು ಎಂದು ಅವರು ಹೇಳಿದ್ದಾರೆ.
ಈ ಸಂದರ್ಶನದ ವಿಡಿಯೋ ಸಾಕಷ್ಟು ಹಳೆಯದ್ದಾಗಿದೆ. ಆದರೆ ಜನ ಈಗ ತುಂಬಾ ಇಷ್ಟ ಪಡುತ್ತಿದ್ದಾರೆ. ಈ ವಿಡಿಯೋವನ್ನು Instagram ನಲ್ಲಿ 33 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.
ಇತ್ತೀಚೆಗೆ, ಅಂಬಾನಿ ಕುಟುಂಬವು ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕ್ ಮರ್ಚೆಂಟ್ ಅವರ ಪೂರ್ವ ವಿವಾಹವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಪ್ರಪಂಚದಾದ್ಯಂತ ವಿಐಪಿಗಳಿಗೆ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಬಿಲ್ ಗೇಟ್ಸ್, ಮಾರ್ಕ್ ಜುಕರ್ ಬರ್ಗ್, ರಿಹಾನ್ನಾ, ಇವಾಂಕಾ ಟ್ರಂಪ್ ಮೊದಲಾದವರು ಭಾಗವಹಿಸಿದ್ದರು.

1 ಲಕ್ಷವಾಯ್ತು 1.02 ಕೋಟಿ ರೂಪಾಯಿ: 4 ವರ್ಷಗಳಲ್ಲಿ 10000% ಲಾಭ ನೀಡಿದ ಸ್ಟಾಕ್​ ಯಾವುದು ಗೊತ್ತೆ?

ರೂ 2486 ರಿಂದ 196ಕ್ಕೆ ಕುಸಿದ ಷೇರು: ಈಗ ಅನಿಲ್ ಅಂಬಾನಿಗೆ ದೊರೆಯಲಿದೆ 4000 ಕೋಟಿ ರೂಪಾಯಿ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − 5 =
Remember me
