ನವದೆಹಲಿ:ಓಲಾ ಎಲೆಕ್ಟ್ರಿಕ್ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ- ಇನಿಷಿಯಲ್​ ಪಬ್ಲಿಕ್​ ಆಫರ್​​), ಅಂದರೆ ಷೇರು ಮಾರುಕಟ್ಟೆಯನ್ನು ಪ್ರವೇಶಿಸುವ ಮುಂಚಿತವಾಗಿ ನಿರ್ವಹಣಾ ವೆಚ್ಚವನ್ನು ನಿಯಂತ್ರಿಸಲು ಮುಂಬರುವ ವಾರಗಳಲ್ಲಿ 400-500 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ.
ವಜಾಗೊಳಿಸಬೇಕಾದ ನೌಕರರ ನಿಖರ ಸಂಖ್ಯೆಯನ್ನು ಇನ್ನೂ ಅಂತಿಮಗೊಳಿಸಲಾಗುತ್ತಿದೆ. ಕಂಪನಿಯ ನಾಯಕತ್ವವು ಪ್ರಸ್ತುತ ಸಂಸ್ಥೆಯಾದ್ಯಂತ ನಿರೀಕ್ಷಿತ ವಜಾಗಳ ಪ್ರಮಾಣವನ್ನು ನಿರ್ಧರಿಸುತ್ತಿದೆ.
ಕೆಲವು ಉದ್ಯೋಗಿಗಳನ್ನು ಕಡಿಮೆ ಸಂಬಳದಲ್ಲಿ ಹೊಸ ನೇಮಕಗಳೊಂದಿಗೆ ಬದಲಾಯಿಸಬಹುದು. ಆದರೂ ಒಟ್ಟಾರೆ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ವರದಿಯಾಗಿದೆ. ಕೆಲವು ತಂಡಗಳು ಈಗಾಗಲೇ ಉದ್ಯೋಗಿ ಕಡಿತಗಳ ಸಂಖ್ಯೆಯನ್ನು ಅಂತಿಮಗೊಳಿಸಿವೆ ಎನ್ನಲಾಗಿದೆ.
ಓಲಾ ಸಂಸ್ಥಾಪಕ ಭವಿಶ್ ಅಗರ್​ವಾಲ್ ಅವರು ಎಲ್ಲ ವಿಭಾಗಗಳಲ್ಲಿ ವೆಚ್ಚವನ್ನು ಕಡಿಮೆ ಮಾಡಲು ಒತ್ತಾಯಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್‌ನಲ್ಲಿ ಓಲಾ ಎಲೆಕ್ಟ್ರಿಕ್ ತನ್ನ ಐಪಿಒ ಕರಡನ್ನು ಸಲ್ಲಿಸಿದಾಗ, ಅಕ್ಟೋಬರ್ 2023 ರ ಹೊತ್ತಿಗೆ 3,733 ಉದ್ಯೋಗಿಗಳನ್ನು ಈ ಸಂಸ್ಥೆ ಹೊಂದಿತ್ತು. ಏಪ್ರಿಲ್‌ನಲ್ಲಿ ಓಲಾ ಕ್ಯಾಬ್ಸ್ ಅಂದಾಜು 200 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದಲ್ಲದೆ, ಓಲಾ ಕ್ಯಾಬ್ಸ್‌ನ ಸಿಇಒ ಹೇಮಂತ್ ಬಕ್ಷಿ ಮತ್ತು ಸಿಎಫ್‌ಒ ಕಾರ್ತಿಕ್ ಗುಪ್ತಾ ಕೂಡ ಕಂಪನಿಯನ್ನು ತೊರೆದಿದ್ದಾರೆ.
2023-24ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಓಲಾ ಎಲೆಕ್ಟ್ರಿಕ್ ರೂ 1,243 ಕೋಟಿಗಳ ನಿರ್ವಹಣಾ ಆದಾಯದ ಮೇಲೆ ರೂ. 267 ಕೋಟಿ ನಿವ್ವಳ ನಷ್ಟವನ್ನು ವರದಿ ಮಾಡಿದೆ. 2022-23ನೇ ಹಣಕಾಸು ವರ್ಷದಲ್ಲಿ, ಓಲಾ ಎಲೆಕ್ಟ್ರಿಕ್ ರೂ. 2,631 ಕೋಟಿಗಳ ನಿರ್ವಹಣಾ ಆದಾಯದ ಮೇಲೆ ರೂ 1,472 ಕೋಟಿ ನಿವ್ವಳ ನಷ್ಟವನ್ನು ದಾಖಲಿಸಿದೆ.
ಆಫರ್​ ಲೆಟರ್​ ಕೊಟ್ಟರೂ ನೇಮಕಾತಿ ಮಾಡಿಕೊಳ್ಳದ ಇನ್ಫೋಸಿಸ್​: ಕ್ಯಾಂಪಸ್ ನೇಮಕ ವಿಳಂಬ ತನಿಖೆಗೆ ಆಗ್ರಹ

ಇಂಡಿಗೋ ಜತೆ ಜಪಾನ್ ಏರ್‌ಲೈನ್ಸ್ ಒಪ್ಪಂದ: ಭಾರತದ ಅನೇಕ ಸ್ಥಳಗಳಿಗೆ ಸಂಚಾರ ವಿಸ್ತರಣೆ

ಷೇರು ಮಾರುಕಟ್ಟೆಯಲ್ಲಿ ಮೋದಿ ರ್ಯಾಲಿ: ಅದಾನಿ ಸಮೂಹದ ಷೇರುಗಳ ಬೆಲೆ ಗಗನಮುಖಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 + 5 =
Remember me
