ಮುಂಬೈ:ಕೆಲ ದಿನಗಳ ಹಿಂದೆಯಷ್ಟೇ ಬಿಗ್ ಬಾಸ್ ಒಟಿಟಿ 2 ನಲ್ಲಿ ಕಾಣಿಸಿಕೊಂಡ 26 ವರ್ಷದ ಯುವಕ ರಾತ್ರೋರಾತ್ರಿ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದ. ಈ ಶೋನಲ್ಲಿ ಜನರು ಎಲ್ವಿಶ್ ಅನ್ನು ತುಂಬಾ ಇಷ್ಟಪಟ್ಟಿದ್ದರು. ಇಂದು ಈ ಹೆಸರನ್ನು ಗುರುತಿಸದ ವ್ಯಕ್ತಿಗಳೇ ಇಲ್ಲ ಬಿಡಿ. ಎಲ್ವಿಶ್ ಹೆಸರು ಕೆಲವು ಕಾರಣಗಳಿಗಾಗಿ ಪ್ರತಿ ದಿನವೂ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿರುತ್ತದೆ.
ಕಳೆದ ಎರಡು-ಮೂರು ದಿನಗಳಿಂದ ಟ್ರೆಂಡಿಂಗ್ ನಲ್ಲಿದ್ದರು ಎಲ್ವಿಶ್. ಆದರೆ ಈ ಬಾರಿ ಅವರ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಅಷ್ಟೇ ಅಲ್ಲ ಅವರನ್ನೀಗ ವಿಚಾರಣೆಗೂ ಕರೆಯಲಾಗಿದೆ. ಏಕೆಂದರೆ ಎಲ್ವಿಶ್ ಯಾದವ್ ಮೇಲೆ ಗ್ಯಾಂಗ್‌ನೊಂದಿಗೆ ರೇವ್ ಪಾರ್ಟಿಗಳಲ್ಲಿ ಹಾವಿನ ವಿಷವನ್ನು ಪೂರೈಸಿದ ಆರೋಪವಿದೆ.
ಈ ಪ್ರಕರಣದಲ್ಲಿ 5 ಆರೋಪಿಗಳನ್ನು ನವೆಂಬರ್ 6 ರಂದು ಪೊಲೀಸರು ಬಂಧಿಸಿದ್ದರು. ಎಲ್ವಿಶ್ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಲಾಗಿದೆ, ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು, ಆದರೆ ಮತ್ತೆ ಬಿಡುಗಡೆ ಮಾಡಲಾಯಿತು. ನವೆಂಬರ್ 6 ರಂದು ಪೊಲೀಸರು ಬಂಧಿಸಿದ ಐವರು ಆರೋಪಿಗಳ ವಶದಿಂದ 20 ಮಿಲಿ ವಿಷ ಮತ್ತು ನಾಗರಹಾವು, ಹೆಬ್ಬಾವು ಮತ್ತು ಎರಡು ಮುಖದ ಹಾವುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆದರೆ, ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಕುಡಿದಿರುವ ಸುದ್ದಿ ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಕಳೆದ ಕೆಲವು ವರ್ಷಗಳಲ್ಲಿ, ದೆಹಲಿಯ ರೇವ್ ಪಾರ್ಟಿಗಳಲ್ಲಿ ಹಾವಿನ ವಿಷಕ್ಕೆ ಬೇಡಿಕೆ ಹೆಚ್ಚುತ್ತಿದೆ ಎಂದು ಹೇಳಲಾದ ಹಲವಾರು ವರದಿಗಳು ಹೊರಬಂದಿವೆ. ದೆಹಲಿಯ ರೇವ್ ಪಾರ್ಟಿಗಳಲ್ಲಿ ಹಾವಿನ ವಿಷದಿಂದ ತಯಾರಿಸಿದ ಮಾತ್ರೆಗಳನ್ನು ಸೇವಿಸುವ ಅಥವಾ ಹಾವು ಕಚ್ಚಿ ನಶೆ ಏರಿಸುವ ಪ್ರವೃತ್ತಿ ತೀವ್ರಗತಿಯಲ್ಲಿ ಹೆಚ್ಚುತ್ತಿದೆ ಎಂದು ಕೆಲ ದಿನಗಳ ಹಿಂದೆಯಷ್ಟೇ ಕೆಲವೆಡೆ ವರದಿ ಮಾಡಲಾಗಿತ್ತು.
ಹೀಗಿರುವಾಗ ಜನರ ಸಾವಿಗೆ ಕಾರಣವಾಗುವ ಹಾವಿನ ವಿಷದ ಅಮಲು ಹೇಗೆರುತ್ತದೆ ಎಂಬ ಪ್ರಶ್ನೆ ಎಲ್ಲರಿಗೂ ಉದ್ಭವಿಸುತ್ತದೆ. ಹಾಗಾದರೆ ಹಾವಿನ ವಿಷ ನಿಜವಾಗಿಯೂ ಅಮಲೇರಿಸುತ್ತದೆಯೇ?ಈ ಪ್ರಶ್ನೆಗೆ ಉತ್ತರವಾಗಿ ತಜ್ಱರು  ವಿಷವನ್ನು ಹೊಂದಿರದ ಇಂತಹ ಹಾವುಗಳು ಹಲವು ಇವೆ. ಆದರೆ ಅವುಗಳ ಕಡಿತದಿಂದ ವ್ಯಕ್ತಿಯು ಸ್ವಲ್ಪ ಸಮಯದವರೆಗೆ ಪ್ರಜ್ಞಾಹೀನನಾಗುತ್ತಾನೆ. ಔಷಧಿಗಳ ಕೆಲಸವೂ ಇದೇ ರೀತಿಯದ್ದಾಗಿದೆ, ಆದ್ದರಿಂದ ಜನರು ಹಾವು ಕಡಿತದಂತಹ ಔಷಧಿಗಳನ್ನು ತುಂಬಾ ಸೇವಿಸುತ್ತಾರೆ. ಹಾವಿನ ವಿಷವು ಮಾದಕ ವಸ್ತುವಾಗಿ ಕೆಲಸ ಮಾಡಿದರೂ ಅದರ ವಿಷವನ್ನು ಪಡೆಯುವುದು ಅಷ್ಟು ಸುಲಭವಲ್ಲ. ಹೀಗಾಗಿಯೇ ನೇರವಾಗಿ ಹಾವಿಂದ ಕಚ್ಚಿಸಿಕೊಳ್ಳಲು ಜನ ಸಿದ್ಧರಾಗಿದ್ದಾರೆ. ಹೀಗೆ ಮಾಡುವುದರಿಂದ ತಮ್ಮ ಶಕ್ತಿ ಹೆಚ್ಚುತ್ತದೆ ಎಂದು ಅವರು ಭಾವಿಸುತ್ತಾರೆ.
ಹಾವು ಕಚ್ಚುವುದು ಹೇಗೆ?ಮಾದಕ ವ್ಯಸನಿಗಳು ತಮ್ಮನ್ನು ತಾವು ಕಚ್ಚಿಸಿಕೊಳ್ಳುವ ಹಾವುಗಳಲ್ಲಿ ನಾಗರಹಾವು, ಕ್ರೈಟ್ ಅಥವಾ ಮರಗಳ ಮೇಲೆ ಕಂಡುಬರುವ ಹಸಿರು ಬಣ್ಣದ ಹಾವುಗಳು ಸೇರಿವೆ. ಅನೇಕ ಸ್ಥಳಗಳಲ್ಲಿ ಹಾವುಗಳನ್ನು ಸಾಕುವುದು ಮಾತ್ರವಲ್ಲದೆ ಸೌಮ್ಯ, ಮಧ್ಯಮ ಮತ್ತು ತೀವ್ರ ಕಡಿತದ ಮೂಲಕ ಅಮಲು ಬರಿಸಲಾಗುತ್ತದೆ. ಹಾವಿನ ಕೋರೆಹಲ್ಲುಗಳು ವ್ಯಕ್ತಿಯ ನಾಲಿಗೆ ಅಥವಾ ಬಾಯಿಯೊಂದಿಗೆ ಸಂಪರ್ಕವನ್ನು ಹೊಂದುತ್ತವೆ, ಅಲ್ಲಿ ವಿಷವನ್ನು ಪರಿಚಯಿಸಲಾಗುತ್ತದೆ. ಈ ನಿಯಂತ್ರಿತ ವಿಧಾನವು ಹಾವು ಕಡಿತಕ್ಕೆ ಸಂಬಂಧಿಸಿದ ಅಪಾಯವನ್ನು ಕಡಿಮೆ ಮಾಡುತ್ತದೆ.
ವಿಷ ನೇರವಾಗಿ ರಕ್ತ ಸೇರುವುದು ಅಪಾಯಕಾರಿ
ಯಾವುದೇ ಹಾವಿನ ವಿಷ ನೇರವಾಗಿ ಮನುಷ್ಯರ ರಕ್ತ ಸೇರುವುದು ಅಪಾಯಕಾರಿ ಎನ್ನುತ್ತಾರೆ ವೈದ್ಯರು. ಈ ಕಾರಣದಿಂದಾಗಿ, ಯಾರಾದರೂ ಸಾಯಬಹುದು. ಇದರಲ್ಲಿಯೂ ಸಹ, ವಿಷವನ್ನು ಸೇವಿಸುವ ವ್ಯಕ್ತಿಯು ತನ್ನ ಬಾಯಿಯಲ್ಲಿ ಯಾವುದೇ ರೀತಿಯ ಗುಳ್ಳೆ ಅಥವಾ ಯಾವುದೇ ರೀತಿಯ ಕಡಿತವಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ವಿಷವು ಅವನ ರಕ್ತದ ಸಂಪರ್ಕಕ್ಕೆ ಬರಬಹುದು ಮತ್ತು ಸಾವಿಗೆ ಕಾರಣವಾಗಬಹುದು.
ಹಾವಿನ ವಿಷ ಪೂರೈಕೆ; ಕಾನೂನು ಏನು ಹೇಳುತ್ತದೆ?ಭಾರತೀಯ ಸಂವಿಧಾನದ ವನ್ಯಜೀವಿ (ರಕ್ಷಣೆ) ಕಾಯಿದೆ, 1972 ವಿವಿಧ ಜಾತಿಯ ಸಸ್ಯಗಳು ಮತ್ತು ಕಾಡು ಪ್ರಾಣಿಗಳಿಂದ ತಯಾರಿಸಿದ ಉತ್ಪನ್ನಗಳ ವ್ಯಾಪಾರದ ನಿಯಂತ್ರಣಕ್ಕಾಗಿ ನಿಯಮಗಳನ್ನು ವಿಧಿಸಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 49 ಮತ್ತು ಸೆಕ್ಷನ್ 49 ಬಿ ಅಡಿಯಲ್ಲಿ ಯಾವುದೇ ಕಾಡು ಪ್ರಾಣಿಯನ್ನು ಸಾಕುವುದು ಅಥವಾ ಯಾವುದೇ ರೀತಿಯಲ್ಲಿ ಬಳಸುವುದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಕಾನೂನು ಉಲ್ಲಂಘಿಸುವವರಿಗೆ ಮೂರರಿಂದ ಏಳು ವರ್ಷಗಳವರೆಗೆ ಶಿಕ್ಷೆಯ ನಿಬಂಧನೆ ಇದೆ.
ಡೀಪ್‌ಫೇಕ್‌ ತಂತ್ರಜ್ಞಾನದ ಇತಿಹಾಸ: ವಂಚನೆ ಹೇಗೆ ನಡೆಯುತ್ತದೆ?, ಇದರಿಂದ ಪಾರಾಗುವುದು ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 1 =
Remember me
