ನವದೆಹಲಿ:ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿ, ಬಾಲಗಂಗಾಧರ ತಿಲಕರಂಥ ಮಹಾನ್ ವ್ಯಕ್ತಿಗಳ ಚಳವಳಿಗಳನ್ನು ಹತ್ತಿಕ್ಕಲು ಬಳಸಲಾಗುತ್ತಿದ್ದ ವಸಾಹತು ಕಾಲದ ಕಾನೂನನ್ನು ಈಗಲೂ ಈ ದೇಶದಲ್ಲಿ ಏಕೆ ಬಳಸಲಾಗುತ್ತಿದೆ? ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಂಡರೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 124 (ಎ) ಅಡಿಯ ದೇಶದ್ರೋಹ ನಿಬಂಧನೆ ಈಗ ಅಗತ್ಯವಿದೆಯೇ?
ದೇಶದ್ರೋಹ ಕಾನೂನಿನ ದುರ್ಬಳಕೆ ಹಾಗೂ ಅದರ ಹೆಸರಲ್ಲಿ ಹಲವರನ್ನು ಬಂಧಿಸಿ ಶೋಷಿಸುತ್ತಿರುವುದನ್ನು ಪ್ರಶ್ನಿಸಿ ನಿವೃತ್ತ ಮೇಜರ್ ಜನರಲ್ ಎಸ್.ಜಿ. ವೆಂಬಟ್ಕೆರೆ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾ.ಎಸ್.ಬೋಪಣ್ಣ ಮತ್ತು ನ್ಯಾ. ಹೃಷಿಕೇಶ್ ರಾಯ್ ತ್ರಿಸದಸ್ಯ ಪೀಠವು ಈ ಪ್ರಶ್ನೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದೆ.
ಐಪಿಸಿಯ 124 (ಎ) ದೇಶದ್ರೋಹವನ್ನುಅಪರಾಧೀಕರಿಸುತ್ತದೆ. ಭಾರತದಲ್ಲಿ ಸರ್ಕಾರದ ವಿರುದ್ಧ ಭಾಷಣ ಅಥವಾ ಅಭಿವ್ಯಕ್ತಿಯ ಮೂಲಕ ದ್ವೇಷ ಅಥವಾ ತಿರಸ್ಕಾರದ ಮನೋಭಾವ ಪ್ರದರ್ಶಿಸುವುದು ಮತ್ತು ಇತರರನ್ನು ಪ್ರಚೋದಿಸುವುದು ಸೆಕ್ಷನ್ ಪ್ರಕಾರ ಅಪರಾಧಿಕ ಕೃತ್ಯವಾಗಿದ್ದು, ಅಪರಾಧಿಗೆ ಗರಿಷ್ಠ ಎಂದರೆ ಜೀವಾವಧಿ ಶಿಕ್ಷೆ ಕೂಡ ನೀಡಬಹುದಾಗಿದೆ. ಇಂಥದ್ದೊಂದು ಕಾನೂನು ಈಗಲೂ ಚಾಲ್ತಿಯಲ್ಲಿರುವುದು ಅಸಾಂವಿಧಾನಿಕವಾಗಿದ್ದು, ನಿರ್ದಾಕ್ಷಿಣ್ಯವಾಗಿ ವಜಾಗೊಳ್ಳಬೇಕು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.
ಪೊಲೀಸರು ಯಾರನ್ನಾದರೂ ಸಿಲುಕಿಸಲು ಬಯಸಿದರೆ, ಅವರು ಐಪಿಸಿ ಸೆಕ್ಷನ್ 124 ಎ ಬಳಸಿಕೊಳ್ಳಬಹುದು ಮತ್ತು ಇದನ್ನು ಪ್ರಯೋಗಿಸಿದಾಗ ಆತಂಕಕ್ಕೊಳಗಾಗುವುದು ಸಹಜವೇ. ಈ ಸೆಕ್ಷನ್ ಅಡಿಯಲ್ಲಿ ದಾಖಲಾಗಿರುವ ದೂರುಗಳನ್ನು ಗಮನಿಸಿದಾಗ, ಆರೋಪಿಗಳನ್ನು ತಪ್ಪಿತಸ್ಥರು ಎಂದು ಗುರುತಿಸಿರುವ ಪ್ರಮಾಣ ತೀರಾ ಕಡಿಮೆಯಿದೆ. ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಅಸಮಾಧಾನ ಹೊರಹಾಕಿದ ಸಿಜೆಐ ರಮಣ್, ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66 ಎ ಅನ್ನು 2015ರಲ್ಲಿ ರದ್ದು ಮಾಡಿದರೂ, ದೇಶದೆಲ್ಲೆಡೆ ಸಾವಿರಾರು ಪ್ರಕರಣಗಳನ್ನು ದಾಖಲಿಸುತ್ತಿರುವ ಬಗ್ಗೆಯೂ ಸಿಜೆಐ ಕೇಂದ್ರ ಸರ್ಕಾರದ ಗಮನಸೆಳೆದರು.
1870ರಲ್ಲಿ ಐಪಿಸಿಗೆ ಸೇರ್ಪಡೆ:ದೇಶದ್ರೋಹದ ಬಗ್ಗೆ ಪ್ರಸ್ತಾಪಿಸುವ ಐಪಿಸಿಯ ಸೆಕ್ಷನ್ 124 (2)ನ ಕರಡನ್ನು ಮೊದಲು ಸಿದ್ಧಪಡಿಸಿದ್ದು ಭಾರತದಲ್ಲಿ ಪಾಶ್ಚಿಮಾತ್ಯ ಮಾದರಿ ಶಿಕ್ಷಣ ಪರಿಚಯಿಸಿದ ಥಾಮಸ್ ಬಾಬಿಂಗ್ಟನ್ ಮೆಕಾಲೆ. 1870ರಲ್ಲಿ ಈ ಸೆಕ್ಷನ್​ನ್ನು ಐಪಿಸಿಯಲ್ಲಿ ಸೇರಿಸಲಾಯಿತು.
124 (ಎ) ಸೆಕ್ಷನ್ ರದ್ದಾಗುವುದೇ?:ಗಾಂಧಿಯವರು ಹಿಂದೆ ಸೆಕ್ಷನ್ 124 (ಎ) ನಾಗರಿಕರ ಸ್ವಾತಂತ್ರ್ಯ ನಿಗ್ರಹಿಸಲು ವಿನ್ಯಾಸಗೊಳಿಸಲಾದ ಕಾನೂನು ಎಂದು ಟೀಕಿಸಿದ್ದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಈ ಸೆಕ್ಷನ್ ಅಸಹ್ಯಕರ ಮತ್ತು ಆಕ್ಷೇಪಾರ್ಹ ಎಂದಿದ್ದರು. ಶೀಘ್ರದಲ್ಲಿ ಇದನ್ನು ತೊಡೆದುಹಾಕುತ್ತೇವೆ ಎಂದು ಹೇಳಿದ್ದರು. 2019ರ ಜುಲೈ ತಿಂಗಳಲ್ಲಿ ಗೃಹ ಇಲಾಖೆಯ ಅಂದಿನ ರಾಜ್ಯ ಸಚಿವರಾಗಿದ್ದ ನಿತ್ಯಾನಂದ್ ರಾಯ್, ಈ ಸೆಕ್ಷನ್ ರದ್ದುಗೊಳಿಸುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ. ರಾಷ್ಟ್ರ ವಿರೋಧಿ, ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಶಕ್ತಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಈ ನಿಬಂಧನೆ ಉಳಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ರಾಜ್ಯಸಭೆಗೆ ತಿಳಿಸಿದ್ದರು. ಸುಪ್ರೀಂಕೋರ್ಟ್ ವಿಚಾರಣೆ ವೇಳೆ ಕೇಂದ್ರದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಸೆಕ್ಷನ್​ನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ಕಾನೂನಿನ ಪುಸ್ತಕದಲ್ಲೂ ಉಳಿದುಕೊಳ್ಳಲಿದೆ ಎಂದಿದ್ದಾರೆ. ಆದರೆ ದುರ್ಬಳಕೆ ತಡೆಗೆ ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ತಿಳಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಇನ್ನು ಸ್ಮಾರ್ಟ್​ಫೋನ್​ ಇಲ್ಲದೆ ವಾಟ್ಸ್​ಆ್ಯಪ್​ ಬಳಸಬಹುದು; ಬೀಟಾ ಯೂಸರ್ಸ್​ಗೆ ಹೊಸ ಆಪ್ಷನ್​!

ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
