ಮುಂಬೈ:ಸೋಮವಾರ ಷೇರು ಪೇಟೆಯಲ್ಲಿ ಎಟಿಎಂ ಮಂತ್ರ ಮೊಳಗಿತು. ಇದರಿಂದಾಗಿ, ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟುವ ಮೂಲಕ ಹಲವು ದಾಖಲೆಗಳು ಸೃಷ್ಟಿಯಾದವು.
ಚುನಾವಣೆಯ ಜ್ವರವು ರಾಷ್ಟ್ರವನ್ನು ಆವರಿಸುತ್ತಿದ್ದಂತೆಯೇ, ಹೂಡಿಕೆದಾರರು ಮತ್ತೊಮ್ಮೆ ಪರಿಚಿತ ಮಂತ್ರದತ್ತ ತಿರುಗಿದರು. ಸೋಮವಾರ ದೇಶೀಯ ಹೂಡಿಕೆದಾರರು ‘ಆಯೇಗಾ ತೊ ಮೋದಿ’ (ಎಟಿಎಂ- ಮೋದಿಯೇ ಬರುತ್ತಾರೆ) ಮಂತ್ರ ಪಠಿಸಿದರು. 2019ರ ಲೋಕಸಭೆ ಚುನಾವಣೆಯ ಸಮಯದಲ್ಲಿ “ಆಯೇಗಾ ತೊ ಮೋದಿ” ಎಂಬ ನುಡಿಗಟ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು.
ಎಕ್ಸಿಟ್ ಪೋಲ್‌ಗಳು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಭಾರಿ ಗೆಲುವು ಸಾಧಿಸುವ ಮುನ್ಸೂಚನೆ ನೀಡಿರುವುದರಿಂದ ಬೆಂಚ್‌ಮಾರ್ಕ್ ಷೇರು ಸೂಚ್ಯಂಕಗಳಾದ ಬಿಎಸ್​ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ ಶೇ. 3ರಷ್ಟು ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟುವ ಮೂಲಕ ದಾಖಲೆ ಬರೆದವು.
30-ಷೇರುಗಳ ಬಿಎಸ್‌ಇ ಸೂಚ್ಯಂಕ 2,507.47 ಅಂಕಗಳು ಅಥವಾ 3.39 ಪ್ರತಿಶತದಷ್ಟು ಏರಿಕೆಯಾಗಿ 76,468.78 ರ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿತು. ಇದು ಕಳೆದ ಮೂರು ವರ್ಷಗಳಲ್ಲಿ ಒಂದೇ ದಿನದಲ್ಲಿ ಸೂಚ್ಯಂಕದ ಗರಿಷ್ಠ ಏರಿಕೆಯಾಗಿದೆ. ದಿನದ ವಹಿವಾಟಿನಲ್ಲಿ ಈ ಸೂಚ್ಯಂಕವು 2,777.58 ಅಂಕಗಳು ಅಥವಾ 3.75 ಪ್ರತಿಶತದಷ್ಟು ಜಿಗಿದು 76,738.89 ರ ದಾಖಲೆಯ ಇಂಟ್ರಾ-ಡೇ ಗರಿಷ್ಠ ಮಟ್ಟವನ್ನು ತಲುಪಿತ್ತು.
2021ರ ಜನವರಿ 2ರಂದು ಎರಡೂ ಸೂಚ್ಯಂಕಗಳು ತಲಾ 5 ಪ್ರತಿಶತದಷ್ಟು ಏರಿಕೆಯಾಗಿದ್ದು, ಇದು ಸೆನ್ಸೆಕ್ಸ್ ಮತ್ತು ನಿಫ್ಟಿ 50 ಈ ಎರಡೂ ಸೂಚ್ಯಂಕಗಳ ಅತಿದೊಡ್ಡ ಏಕದಿನ ಲಾಭವಾಗಿದೆ.
ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 733.20 ಅಂಕಗಳು ಅಥವಾ ಶೇಕಡಾ 3.25 ರಷ್ಟು ಏರಿಕೆಯಾಗಿ 23,263.90 ಕ್ಕೆ ತಲುಪಿತು. ದಿನದ ವಹಿವಾಟಿನಲ್ಲಿ, ಇದು 808 ಅಂಕಗಳು ಅಥವಾ ಶೇಕಡಾ 3.58 ರಷ್ಟು ಏರಿಕೆಯಾಗಿ 23,338.70 ರ ಹೊಸ ಇಂಟ್ರಾ-ಡೇ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತ್ತು.
ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಲೂ-ಚಿಪ್ ಸ್ಟಾಕ್‌ಗಳಲ್ಲಿನ ತೀಕ್ಷ್ಣವಾದ ರ್ಯಾಲಿ ಸೂಚ್ಯಂಕಗಳನ್ನು ಜೀವಮಾನದ ಗರಿಷ್ಠ ಮಟ್ಟಕ್ಕೆ ತಳ್ಳಿತು.
ವಲಯವಾರು ಸೂಚ್ಯಂಕಗಳ ಪೈಕಿ, ಪಿಎಸ್‌ಯು, ಪವರ್, ಯುಟಿಲಿಟೀಸ್, ಆಯಿಲ್, ಎನರ್ಜಿ, ಕ್ಯಾಪಿಟಲ್ ಗೂಡ್ಸ್ ಮತ್ತು ರಿಯಾಲ್ಟಿ ಸೂಚ್ಯಂಕಗಳು ಶೇಕಡಾ 8 ರಷ್ಟು ಏರಿಕೆಯಾಗಿರುವುದು ಕೂಡ ದಾಖಲೆಯಾಗಿದೆ.
ಶನಿವಾರ ಪ್ರಕಟಗೊಂಡ ಎಕ್ಸಿಟ್ ಪೋಲ್‌ಗಳು ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿವೆ.
ಎನ್‌ಟಿಪಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪವರ್ ಗ್ರಿಡ್ ಷೇರುಗಳ ಬೆಲೆ ತಲಾ 9 ಪ್ರತಿಶತದಷ್ಟು ಜಿಗಿದವು. ಲಾರ್ಸೆನ್ ಅಂಡ್ ಟೂಬ್ರೊ, ಆಕ್ಸಿಸ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಅಲ್ಟ್ರಾಟೆಕ್ ಸಿಮೆಂಟ್, ಮಹೀಂದ್ರಾ ಮತ್ತು ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಷೇರುಗಳು ಕೂಡ ದೊಡ್ಡ ಲಾಭ ಗಳಿಸಿದವು. ಸನ್ ಫಾರ್ಮಾ, ಎಚ್‌ಸಿಎಲ್ ಟೆಕ್ನಾಲಜೀಸ್, ಏಷ್ಯನ್ ಪೇಂಟ್ಸ್, ನೆಸ್ಲೆ ಮತ್ತು ಇನ್ಫೋಸಿಸ್ ಷೇರುಗಳು ಹಿನ್ನಡೆ ಕಂಡವು.
ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್, ಟೋಕಿಯೊ ಮತ್ತು ಹಾಂಗ್ ಕಾಂಗ್ ಲಾಭ ಮಾಡಿದವು. ಶಾಂಘೈ ನಷ್ಟ ಕಂಡಿತು. ಐರೋಪ್ಯ ಮಾರುಕಟ್ಟೆಗಳು ಸಕಾರಾತ್ಮಕವಾಗಿ ವಹಿವಾಟು ನಡೆಸಿದವು. ಶುಕ್ರವಾರದಂದು ಅಮೆರಿಕ ಮಾರುಕಟ್ಟೆಗಳು ಲಾಭದಲ್ಲಿ ಕೊನೆಗೊಂಡವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ 1,613.24 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.
ಶುಕ್ರವಾರ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ 75.71 ಅಂಕಗಳು ಅಥವಾ ಶೇಕಡಾ 0.10 ರಷ್ಟು ಏರಿಕೆ ಕಂಡು 73,961.31 ಕ್ಕೆ ಸ್ಥಿರವಾಗಿದ್ದರೆ, ನಿಫ್ಟಿ ಸೂಚ್ಯಂಕವು 42.05 ಅಥವಾ ಶೇಕಡಾ 0.19 ರಷ್ಟು ಏರಿಕೆ ಕಂಡಿತ್ತು.
ಸೋಮವಾರದ ಖರೀದಿಯು ಕೇವಲ ದೊಡ್ಡ ಕ್ಯಾಪ್ ಸ್ಟಾಕ್‌ಗಳಿಗೆ ಸೀಮಿತವಾಗಿರಲಿಲ್ಲ. ಮಿಡ್ ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್ ಸೂಚ್ಯಂಕಗಳು ಕೂಡ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 44560.97 ಅನ್ನು ಮುಟ್ಟಿದ ನಂತರ, ಶೇ. 3.54 ರಷ್ಟು ಏರಿಕೆಯಾಗಿ 44,367.67 ಕ್ಕೆ ತಲುಪಿತು. ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕವು ತನ್ನ ಹೊಸ ದಾಖಲೆಯ ಗರಿಷ್ಠ ಮಟ್ಟವಾದ 48,973.96 ಅನ್ನು ತಲುಪಿ, ಅಂತಿಮವಾಗಿ ಶೇ. 2.05 ರಷ್ಟು ಏರಿಕೆಯೊಂದಿಗೆ 48,232.30 ಕ್ಕೆ ಸ್ಥಿರವಾಯಿತು.
ಬಿಎಸ್​ಇಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಸೋಮವಾರ ಒಂದೇ ದಿನದಲ್ಲಿ ರೂ. 14 ಲಕ್ಷ ಕೋಟಿ ಏರಿಕೆಯಾಯಿತು. ಹಿಂದಿನ ವಹಿವಾಟು ದಿನದಲ್ಲಿನ ರೂ. 412 ಲಕ್ಷ ಕೋಟಿಗಳಿಂದ ರೂ. 426 ಲಕ್ಷ ಕೋಟಿಗಳಿಗೆ ಬಂಡವಾಳವು ಏರಿತು. ಈ ಮೂಲಕ ಹೂಡಿಕೆದಾರರು ಒಂದೇ ದಿನದಲ್ಲಿ ರೂ. 14 ಲಕ್ಷ ಕೋಟಿಗಳಷ್ಟು ಶ್ರೀಮಂತರಾದರು.
ಷೇರು ಮಾರುಕಟ್ಟೆ ಪ್ರವೇಶಿಸುತ್ತಿರುವ ಓಲಾ ಎಲೆಕ್ಟ್ರಿಕ್ ಉದ್ಯೋಗಿಗಳ ಸಂಖ್ಯೆ ಕಡಿತ ಮಾಡುತ್ತಿರುವುದೇಕೆ?

ಆಫರ್​ ಲೆಟರ್​ ಕೊಟ್ಟರೂ ನೇಮಕಾತಿ ಮಾಡಿಕೊಳ್ಳದ ಇನ್ಫೋಸಿಸ್​: ಕ್ಯಾಂಪಸ್ ನೇಮಕ ವಿಳಂಬ ತನಿಖೆಗೆ ಆಗ್ರಹ

ಇಂಡಿಗೋ ಜತೆ ಜಪಾನ್ ಏರ್‌ಲೈನ್ಸ್ ಒಪ್ಪಂದ: ಭಾರತದ ಅನೇಕ ಸ್ಥಳಗಳಿಗೆ ಸಂಚಾರ ವಿಸ್ತರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
