ಬೆಂಗಳೂರು:ಹಬ್ಬ ಬಂತೆಂದರೆ ಖುಷಿಯ ಜತೆಗೆ ಖರ್ಚು ಕೂಡ ಹೆಚ್ಚುತ್ತದೆ. ವೆಚ್ಚವನ್ನು ಕಡಿಮೆ ಮಾಡಲು ಜನರು ಅಡುಗೆ ಮಾಡುವಾಗ ಕೆಲವು ವಿಷಯಗಳ ಬಗ್ಗೆ ಜಾಗರೂಕರಾಗಿರುತ್ತಾರೆ. ಅಡುಗೆ ಎಣ್ಣೆಯಲ್ಲಿ ಕರಿದ ಖಾದ್ಯಗಳನ್ನು ಮಾಡಿ ಹಬ್ಬದ ಖುಷಿಯನ್ನು ಇಮ್ಮಡಿಗೊಳಿಸುತ್ತಾರೆ.  ಒಮ್ಮೆ  ಕರಿದ ಎಣ್ಣೆ ಉಳಿದಿರುತ್ತದೆ. ಅದೇ ಎಣ್ಣೆಯನ್ನು ಮತ್ತೆ ಮತ್ತೆ ಬಳಸುತ್ತಾರೆ. ಹೀಗೆ ಬಳಕೆ ಮಾಡುವುದು ಸರಿಯೇ ಎಂಬ ಆತಂಕವಿದೆ.
ತೈಲವನ್ನು ಮರುಬಳಕೆ ಮಾಡುವುದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆಯೇ?ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡಬಹುದೇ ಎಂಬ ನಿಮ್ಮ ಪ್ರಶ್ನೆಗೆ ತಜ್ಞರು ಹೌದು ಎನ್ನುತ್ತಾರೆ.ಎಣ್ಣೆಯು ಕೊಬ್ಬನ್ನು ಹೊಂದಿರುತ್ತದೆ.ಅದು ಬಿಸಿಯಾದಾಗ ಅದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ.ಹಾಗಾಗಿ ಮತ್ತೆ ಮತ್ತೆ ಎಣ್ಣೆ ಬಳಸಬಾರದು. ಮೂರ ರಿಂದ ನಾಲ್ಕು ಬಾರಿ ಬಳಕೆ ಮಾಡಬಹುದು ಎನ್ನುತ್ತಿದ್ದಾರೆ ಆರೋಗ್ಯ ತಜ್ಞರು.
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ, ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಸಿಮಾಡಲಾಗುತ್ತದೆ.ಹಾಗೆ ಕಾಯಿಸಿದಾಗ ಮಾತ್ರ ಎಣ್ಣೆ ಆರೋಗ್ಯಕ್ಕೆ ಹಾನಿಕರ.ಆ ಎಣ್ಣೆಯನ್ನು ಮತ್ತೆ ಬಳಸುವುದು ಒಳ್ಳೆಯದಲ್ಲ.ಅದೇ ಮನೆಯಲ್ಲಿ ಎಣ್ಣೆಯನ್ನು ಕಡಿಮೆ ದರದಲ್ಲಿ ಬಿಸಿಮಾಡಲಾಗುತ್ತದೆ.ಹಾಗಾಗಿ ತೈಲವನ್ನು ಮತ್ತೆ ಮತ್ತೆ ಬಳಸಬಹುದು ಎನ್ನುತ್ತಾರೆ ತಜ್ಞರು.ಮನೆಯಲ್ಲಿ ನೀವು ಪೂರಿ, ಬಜ್ಜಿ, ಪಕೋಡ ಮಾಡಿದ ಎಣ್ಣೆಯನ್ನು ಮೂರರಿಂದ ನಾಲ್ಕು ಬಾರಿ ಮರುಬಳಕೆ ಮಾಡಬಹುದು.
1) ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ಜೊತೆಗೆ ವಿವಿಧ ಆರೋಗ್ಯ ಸಮಸ್ಯೆಗಳು ತಲೆ ದೂರುತ್ತವೆ.
2) ಎಣ್ಣೆಯನ್ನು ಪುನಃ ಬಳಸುವುದರಿಂದ ಉರಿಯೂತ,ಸಂಧಿವಾತ, ಹೃದಯ ಸಮಸ್ಯೆ, ರಕ್ತದಲ್ಲಿ ಅಶುದ್ಧತೆ, ಬೊಜ್ಜು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
3) ಒಮ್ಮೆ ಆಹಾರ ಬಳಕೆಗಾಗಿ ಬಿಸಿ ಮಾಡಿದ ಎಣ್ಣೆಯಲ್ಲಿ ಪೋಷಕಾಂಶಗಳು ನಾಶವಾಗಿರುತ್ತವೆ. ಹೀಗಾಗಡಿ ನೀವು ಮಾಡುವ ಅಡುಗೆ ರುಚಿಯಾಗಿರುವುದಿಲ್ಲ ಜತೆಗೆ ಆರೋಗ್ಯಕ್ಕೂ ಹಾನಿಕಾರಕವಾಗಿದೆ.
4) ಪಿತ್ತಜನಕಾಂಗದ ಕಾಯಿಲೆ, ಮಧುಮೇಹ, ಬೊಜ್ಜುಗಳಂತಹ ಸಮಸ್ಯೆ ಉದ್ಭವವಾಗುತ್ತವೆ.
ಒಮ್ಮೆ ಬಳಸಿದ ತೈಲವನ್ನು ಹೇಗೆ ಸಂಗ್ರಹಿಸುವುದು?:ಎಣ್ಣೆ ಹುರಿದ ನಂತರ ಅದನ್ನು ಸೋಸಿಕೊಂಡು ಸ್ವಚ್ಛವಾದ ಪಾತ್ರೆಯಲ್ಲಿ ಹಾಕಿ ಮುಚ್ಚಿಡಿ.ಎಣ್ಣೆಯನ್ನು ನೀವು ಶುದ್ಧವಾದ ಬಟ್ಟೆಯನ್ನು ಬಳಸಿಎಣ್ಣೆಯನ್ನು ಸೋಸಿಕೊಳ್ಳಿ ಮತ್ತು ಗಾಳಿಯಾಡದ ಜಾರ್‌ನಲ್ಲಿ ಇರಿಸಿ.
ಗಮನಿಸಿ:ಈ ಮಾಹಿತಿಯನ್ನು ತಜ್ಞರಿಂದ ಸಂಗ್ರಹಿಸಲಾಗಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − one =
Remember me
