ನವದೆಹಲಿ:ಫ್ಲೈಯಿಂಗ್ ಸಿಖ್ ಎಂದೇ ಪ್ರಖ್ಯಾತಿ ಪಡೆದಿದ್ದ ಓಟಗಾರ ಮಿಲ್ಖಾ ಸಿಂಗ್ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಅಷ್ಟಕ್ಕೂ ಅವರಿಗೆ ಈ ಫ್ಲೈಯಿಂಗ್ ಸಿಖ್ ಎನ್ನುವ ಹೆಸರು ಬಂದಿದ್ದು ಹೇಗೆ? ಪಾಕಿಸ್ತಾನದ ಅಧ್ಯಕ್ಷರನ್ನು ಅವರು ಮೋಡಿ ಮಾಡಿದ್ದು ಹೇಗೆ ಎನ್ನುವ ಸ್ಟೋರಿ ಇಲ್ಲಿದೆ.
ಅದು 1960ರ ಸಮಯ. ಪಾಕಿಸ್ತಾನದಲ್ಲಿ ಅಂತರರಾಷ್ಟ್ರೀಯ ಅಥ್ಲೀಟ್ ಸ್ಪರ್ಧೆ ನಡೆಯುತ್ತಿತ್ತು. ಮಿಲ್ಖಾ ಸಿಂಗ್ ಅವರನ್ನು ಸ್ಪರ್ಧೆಗೆ ಆಹ್ವಾನಿಸಲಾಗಿತ್ತು. ಆದರೆ ಅದಾಗಲೇ ಪಾಕ್​ ಮತ್ತು ಭಾರತ ವಿಭಜನೆಯಿಂದಾಗಿ ನೋವಿನಲ್ಲಿದ್ದ ಮಿಲ್ಖಾ ಸಿಂಗ್ ಪಾಕಿಸ್ತಾನಕ್ಕೆ ಹೋಗುವುದಕ್ಕೆ ಹಿಂದೇಟು ಹಾಕಿದ್ದರು. ಆದರೆ ಆಗಿನ ಪ್ರಧಾನಿ ನೆಹರು ಅವರು ಮಿಲ್ಖಾ ಸಿಂಗ್ ಅವರೊಂದಿಗೆ ಮಾತನಾಡಿ ಪಾಕ್​ಗೆ ತೆರಳಲು ಒಪ್ಪಿಸಿದ್ದರು.
ಆ ಸಮಯದಲ್ಲಿ ಪಾಕಿಸ್ತಾನದ ಅತ್ಯಂತ ವೇಗದ ಓಟಗಾರ ಅಬ್ದುಲ್ ಖಲೀಕ್ ಆಗಿದ್ದರು. ಆಟ ಶುರುವಾದಾಗ ಎಲ್ಲರೂ ಅಬ್ದುಲ್ ಅವರ ಹೆಸರನ್ನೇ ಕೂಗಲಾರಂಭಿಸಿದ್ದರು. ಆದರೆ ಮಿಲ್ಖಾ ಸಿಂಗ್ ಅವರು ಅಬ್ದುಲ್ ಅವರನ್ನು ಹಿಂದಿಕ್ಕಿ ಜಯ ಸಾಧಿಸಿದ್ದರು. ಆಗ ಪಾಕ್​ ಅಧ್ಯಕ್ಷ ಮಾರ್ಷಲ್ ಅಯೂಬ್ ಖಾನ್ ಭಾರತದ ಮಿಲ್ಖಾ ಸಿಂಗ್ ಅವರಿಗೆ ಫ್ಲೈಯಿಂಗ್ ಸಿಖ್ ಎಂದು ಕರೆದರು. ಅದಾದ ನಂತರ ಅವರು ಅದೇ ಹೆಸರಲ್ಲಿ ಪ್ರಸಿದ್ಧರಾದರು. (ಏಜೆನ್ಸೀಸ್)
ಪಂಜಾಬ್​ನಲ್ಲಿ ಮೊದಲ ಗ್ರೀನ್ ಫಂಗಸ್​ ಪ್ರಕರಣ ದೃಢ! ರೋಗಿಯ ಸ್ಥಿತಿ ಗಂಭೀರ
ಗಂಡನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಾ ಹೊರಹೋದವಳು ದೂರದ ರೈಲ್ವೆ ಹಳಿ ಬಳಿ ಮಾಂಸವಾಗಿ ಪತ್ತೆ!
ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
