ಕೋಲ್ಕತ: ಬಿಜೆಪಿ ಕಾರ್ಯಕರ್ತರ ಹತ್ಯೆ ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಕರೆ ನೀಡಿದ್ದ #ನಬನ್ನಾಚಲೋ (#NabannoCholo) ರ‍್ಯಾಲಿ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ನಡುಕ ಹುಟ್ಟಿಸಿದೆಯೇ?! ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಪ್ರತಿರೋಧ ಹೆಚ್ಚಾಗುತ್ತಿರುವುದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ನಿದ್ದೆಗೆಡಿಸಿದೆಯೇ? ಬಿಜೆಪಿ ರ‍್ಯಾಲಿ ಘೋಷಣೆಯಾದ ಬಳಿಕ ನಿನ್ನೆ ಸರ್ಕಾರ ದಿಢೀರ್ ಆಗಿ ಸಂಪೂರ್ಣ ನಬನ್ನಾವನ್ನು ಇಂದು ಮತ್ತು ನಾಳೆಯ ಮಟ್ಟಿಗೆ ಬಂದ್ ಮಾಡಿರುವುದಾಗಿ ಘೋಷಿಸಿದೆ!
ದೀದಿ ಸರ್ಕಾರ ಕಚೇರಿ ಬಂದ್ ಮಾಡಿರುವುದಕ್ಕೆ ಸ್ಯಾನಿಟೈಸೇಷನ್ ಕಾರಣ ನೀಡಿ ಪ್ರಕಟಣೆಯನ್ನು ಹೊರಡಿಸಿದೆ. ನಬನ್ನಾ ಭವನದ ಪ್ರೆಸ್ ಕಾರ್ನರ್ ಕೂಡ ಬಂದ್ ಆಗಿರಲಿದೆ ಎಂದು ಅದು ಸ್ಪಷ್ಟಪಡಿಸಿದೆ. ಯುವ ಮೋರ್ಚಾದ ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ರ‍್ಯಾಲಿ ನಡೆದಿದ್ದು, ಬಿಜೆಪಿಯ ಎಲ್ಲ ಘಟಕದವರೂ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ:ದೀದಿ ನಾಡಲ್ಲಿ ಭುಗಿಲೆದ್ದ ಘರ್ಷಣೆ; ನಬನ್ನಾ ಚಲೋ ತಡೆದ ಪೊಲೀಸರ ವಿರುದ್ಧ ಬಿಜೆಪಿ ಆಕ್ರೋಶ
ಏನಿದು ನಬನ್ನಾ ಭವನ?:ಹೌರಾ ಜಿಲ್ಲೆಯ ಹೌರಾ ನಗರದಲ್ಲಿರುವ ನಬನ್ನಾ ಭವನ ಆಡಳಿತ ಕಚೇರಿಗಳ ಸಚಿವಾಲಯ. ಶಿಬ್​ಪುರದ ಮಂದಿರತಲ್​ ಎಂಬಲ್ಲಿದ್ದು, 14 ಮಹಡಿಗಳ ಕಟ್ಟಡವಾಗಿದೆ. ಪಶ್ಚಿಮ ಬಂಗಾಳದ ಸೆಕ್ರಟೇರಿಯೆಟ್ ತಾತ್ಕಾಲಿಕವಾಗಿ ಇಲ್ಲಿಂದಲೇ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 2013ರ ಅಕ್ಟೋಬರ್ 5ರಂದು ಇದನ್ನು ಉದ್ಘಾಟಿಸಿದರು. ಮುಖ್ಯಮಂತ್ರಿ ಕಚೇರಿ ಈ ಕಟ್ಟಡದ 14ನೇ ಮಹಡಿಯಲ್ಲಿದೆ. ನಬನ್ನಾ ಎಂಬ ಪದಕ್ಕೆ ಬಂಗಾಳಿ ಭಾಷೆಯಲ್ಲಿ ಹೊಸ ಕೊಯ್ಲು ಎಂಬ ಅರ್ಥವಿದೆ. (ಏಜೆನ್ಸೀಸ್)
ನಾಡಬಾಂಬ್ ಎಸೆದ್ರು ನಮ್ಮ ರ‍್ಯಾಲಿ ಮೇಲೆ, ಟಿಎಂಸಿಯ ಗೂಂಡಾಗಳದ್ದೇ ಕೆಲ್ಸ ಇದು- ತೇಜಸ್ವಿಸೂರ್ಯ ಗಂಭೀರ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 6 =
Remember me
