ನವದೆಹಲಿ:ಕೋವಿಡ್-19 ಸೋಂಕಿನ ಲಕ್ಷಣಗಳಿದ್ದರೂ ಆರ್​ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡಾಗ ವರದಿ ನೆಗೆಟಿವ್ ಬರುತ್ತಿರುವ ಅಸಂಖ್ಯಾತ ಪ್ರಕರಣಗಳು ದೇಶದಾದ್ಯಂತ ದಾಖಲಾಗಿವೆ. ಹೀಗೇಕೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದ್ದು, ಆರೋಗ್ಯ ಕ್ಷೇತ್ರದ ತಜ್ಞರ ನಿದ್ದೆಗೆಡಿಸಿದೆ. ವೈರಸ್ ರೂಪಾಂತರಗೊಂಡು ಪತ್ತೆಯಾಗುವುದರಿಂದ ತಪ್ಪಿಸಿಕೊಳ್ಳುವುದು, ಮಾದರಿಯ (ಸ್ಯಾಂಪಲ್) ಗುಣಮಟ್ಟ ಮತ್ತು ಆರ್​ಟಿ-ಪಿಸಿಆರ್ ಟೆಸ್ಟ್ ಕಿಟ್​ನ ದಕ್ಷತೆ ಕೊರತೆ ಮೊದಲಾದವು ಇದಕ್ಕೆ ಸಂಭಾವ್ಯ ಕಾರಣಗಳಾಗಿರಬಹುದು ಎನ್ನಲಾಗಿದೆ. ಸಾಂಕ್ರಾಮಿಕತೆ ಉಲ್ಬಣಗೊಳ್ಳುತ್ತಿರುವುದರ ಮಧ್ಯೆ ಆರ್​ಟಿ-ಪಿಸಿಆರ್ ಟೆಸ್ಟ್​ಗೆಬೇಡಿಕೆಯೂ ಹೆಚ್ಚುತ್ತಿದೆ.
ಆದರೆ, ಕರೊನಾ ಸೋಂಕಿನ ಲಕ್ಷಣವಿದ್ದು ಈ ಟೆಸ್ಟ್ ಮಾಡಿಸಿಕೊಂಡ ಶೇಕಡ 20ರಷ್ಟು ಜನರಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಪರೀಕ್ಷಾ ವರದಿ ಬರುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಇದರಿಂದಾಗಿ ನಿಜವಾಗಿಯೂ ಗಂಭೀರವಾದ ಕೋವಿಡ್ ರೋಗಿಗಳಿಗೆ ಆಸ್ಪತ್ರೆಗೆ ದಾಖಲಾತಿ ಹಾಗೂ ಅಗತ್ಯ ಚಿಕಿತ್ಸೆ ಹಾಗೂ ಆರೈಕೆ ಸಿಗದಿರುವ ಸಾಧ್ಯತೆ ಇದೆ. ಹೀಗಾಗಿ ಸೋಂಕಿನ ಲಕ್ಷಣವಿಲ್ಲದವರು ಎಗ್ಗಿಲ್ಲದೆ ಓಡಾಡಿ ವೈರಸ್ ಹರಡುವ ಅಪಾಯ ಇದೆ. ಈ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಏಮ್್ಸ ನಿರ್ದೇಶಕ ರಣದೀಪ್ ಗುಲೇರಿಯಾ ಸಹಿತ ಹಲವು ತಜ್ಞರು ಆರ್​ಟಿ-ಪಿಸಿಆರ್ ಟೆಸ್ಟ್ ಫಲಿತಾಂಶ ಏನೇ ಇರಲಿ, ಕರೊನಾ ಸೋಂಕಿನ ಶಾಸ್ತ್ರೀಯ ಲಕ್ಷಣವಿರುವ ಪ್ರತಿಯೊಬ್ಬರಿಗೂ ಕೋವಿಡ್-19 ಚಿಕಿತ್ಸೆ ನೀಡಬೇಕು ಸಲಹೆ ನೀಡಿದ್ದಾರೆ.
5ನೇ ದಿನದ ನಂತರ ಟೆಸ್ಟ್ ಸೂಕ್ತ
ಸೋಂಕಿನ ಚಕ್ರದ ಐದನೇ ದಿನ ಕೋವಿಡ್-19 ಸಾಕಷ್ಟು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಮುಂಚೆಯೇ ಪರೀಕ್ಷೆ ಮಾಡಿಸಿದರೆ ನೆಗೆಟಿವ್ ಬರುವುದು ಸಾಮಾನ್ಯ. ಆದಾಗ್ಯೂ ಸೋಂಕಿತರಾದರೂ ನೆಗೆಟಿವ್ ಬರುತ್ತಿರುವುದಕ್ಕೆ ಇದು ಹೆಚ್ಚಿನ ಕಾರಣ ಆಗಿರಲಾರದು ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − twelve =
Remember me
