ಕರಾಚಿ:ಬಾಲಿವುಡ್​ ನಟರಾಗಿದ್ದ ಇರ್ಫಾನ್​ ಖಾನ್​ ಹಾಗೂ ಶ್ರೀದೇವಿ ಅವರ ಬಗ್ಗೆ ಲಘುವಾಗಿ ಮಾತನಾಡಿದ ಪಾಕಿಸ್ತಾನದ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕ ಅಮೀರ್ ಲಿಯಾಕತ್ ಹುಸೇನ್ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನದ ನಟ ಅದ್ನಾನ್​ ಸಿದ್ದಿಕಿ ಇದೀಗ ಕ್ಷಮೆ ಕೋರಿದ್ದಾರೆ.
ಲೈವ್​ ಚಾಟ್​ ಷೋ ಜೇವೆ ಪಾಕಿಸ್ತಾನದಲ್ಲಿ ಭಾಗವಹಿಸಿದ್ದ ಸಿದ್ದಿಕಿ ಅವರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಈ ಷೋನ ನಿರೂಪಕ ಅಮೀರ್​, ಇರ್ಫಾನ್​ ಖಾನ್​ ಹಾಗೂ ಶ್ರೀದೇವಿ ಅವರ ಬಗ್ಗೆ ಅಪಹಾಸ್ಯ ಮಾಡಿದ್ದು, ಇದರಿಂದ ನಾನು ಈ ಎರಡೂ ನಟರ ಕುಟುಂಬದ ಕ್ಷಮೆ ಕೋರುತ್ತಿದ್ದೇನೆ ಎಂದು ಸಿದ್ದಿಕಿ ಹೇಳಿದ್ದಾರೆ.
ಇದನ್ನೂ ಓದಿ:ರಿಲಾಯನ್ಸ್​ಗೆ ಹೊಡೆದಿದೆ ಜಾಕ್​ಪಾಟ್​: ಪಾಲು ಖರೀದಿಗೆ ತಾಮುಂದು, ನಾಮುಂದು!
ಆದದ್ದೇನು?:‘ಮಾಮ್’ ಚಿತ್ರದಲ್ಲಿ ಶ್ರೀದೇವಿ ಜತೆ ಹಾಗೂ ‘ಎ ಮೈಟಿ ಹಾರ್ಟ್’ ಚಿತ್ರದಲ್ಲಿ ಇರ್ಫಾನ್ ಖಾನ್​ ಜತೆ ಸಿದ್ದಿಕಿ ನಟಿಸಿದ್ದಾರೆ. ಇದರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಅಮೀರ್​ ಹುಸೇನ್​, ನೀವು ಇಬ್ಬರ ಜತೆ ಕೆಲಸ ಮಾಡಿದ್ದೀರಿ, ಇಬ್ಬರೂ ಈಗ ಸತ್ತರು. ಸದ್ಯ ರಾಣಿ ಮುಖರ್ಜಿ ಅವರೊಂದಿಗೆ ‘ಮರ್ದಾನಿ 2’ ಮತ್ತು ಬಿಪಾಶಾ ಬಸು ಅವರೊಂದಿಗೆ ‘ಜಿಸ್ಮ್ 2’ ಮಾಡಲು ಹೊರಟಿದ್ದೀರಿ. ಹಾಗೆ ಮಾಡದೇ ಅವರ ಪ್ರಾಣವನ್ನು ಕಾಪಾಡಿ ಎಂದು ಹಾಸ್ಯ ಮಾಡಲು ಹೋಗಿದ್ದರು.
ಈ ಮಾತು ಇರ್ಫಾನ್​ ಮತ್ತು ಶ್ರೀದೇವಿ ಕುಟುಂಬದವರಿಗೆ ತುಂಬಾ ನೋವು ತಂದಿದ್ದು, ನಾನು ಅವರ ಕ್ಷಮೆ ಕೋರುತ್ತೇನೆ ಎಂದು ಸಿದ್ದಿಕಿ ಹೇಳಿದ್ದಾರೆ. “ಮೃತಪಟ್ಟಿರುವ ಇಬ್ಬರು ಪ್ರಸಿದ್ಧ ನಟರ ಬಗ್ಗೆ ಈ ರೀತಿ ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಸಾವಿನಂಥ ಸೂಕ್ಷ್ಮ ವಿಷಯದಲ್ಲಿ ಅಮೀರ್​ ಗೇಲಿ ಮಾಡಿದ್ದಾರೆ. ಅವರ ಸಾವು ತಮಾಷೆಯ ವಸ್ತುವಲ್ಲ. ಇಬ್ಬರೂ ನನಗೆ ತೀರಾ ಹತ್ತಿರದವರಾಗಿದ್ದರು. ಈ ರೀತಿಯ ಹೇಳಿಕೆ ದುರದೃಷ್ಟಕರ ಎಂದಿದ್ದಾರೆ ಸಿದ್ದಿಕಿ. ಈ ಬಗ್ಗೆ ಬೇಸರ ವ್ಯಕ್ತಪಡಿಸಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಮದುವೆಯಾಗುವಂತೆ ಅಪ್ಪ-ಅಮ್ಮ ಚಿತ್ರಹಿಂಸೆ ನೀಡುತ್ತಿದ್ದಾರೆ… ದಯವಿಟ್ಟು ನನ್ನನ್ನು ಕಾಪಾಡಿ…
ಇದರಿಂದ ನಾನು ಪಾಠವನ್ನು ಕಲಿತಿದ್ದೇನೆ, ಮುಂದೆ ಇಂಥ ಕಾರ್ಯಕ್ರಮಗಳಿಗೆ ನಾನು ಹೋಗುವುದಿಲ್ಲ. ಇಂಥ ಯಾವುದೇ ಮಾತುಗಳನ್ನೂ ನಾನು ಸಹಿಸುವುದಿಲ್ಲ. ಇದು ಅಕ್ಷಮ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದಾದ ನಂತರ ನಿರೂಪಕ ಅಮೀರ್​ ಇರ್ಫಾನ್​ ಖಾನ್​ ಕೂಡ ಕ್ಷಮೆ ಕೋರಿದ್ದಾರೆ. ಲೈವ್​ ಷೋ ಮಾಡುವಾಗ ಆ ಸಮಯದಲ್ಲಿ ಕೆಲವೊಂದು ವಿಷಯ ಹಾಸ್ಯ ಎನಿಸಿಬಿಡುತ್ತದೆ. ಅದು ಆಗ ಗೊತ್ತಾಗುವುದೇ ಇಲ್ಲ. ಆದರೆ ನಂತರ ಅದರ ಬಗ್ಗೆ ವಿಚಾರ ಮಾಡಿದಾಗ ತುಂಬಾ ನೋವಾಗುತ್ತದೆ. ಯಾವುದೇ ದುರುದ್ದೇಶದಿಂದ ಈ ಹೇಳಿಕೆ ನಾನು ನೀಡಿರಲಿಲ್ಲ. ಇದರ ಬಗ್ಗೆ ಶ್ರೀದೇವಿ, ಇರ್ಫಾನ್​ ಖಾನ್​ ಹಾಗೂ ಸಿದ್ದಿಕಿ ಅವರ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.(ಏಜೆನ್ಸೀಸ್​)ಇದನ್ನೂ ಓದಿ:2 ಪ್ಯಾಕೆಟ್​ ಕುರುಂಕುರುಂ ತಿಂಡಿ ಕೇಳಿದ್ದಕ್ಕೆ 2 ಲಕ್ಷ ರೂಪಾಯಿ ಗುಳುಂ! ಆಗಿದ್ದೇನು?
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:13 − eight =
Remember me
