ನವದೆಹಲಿ:ಇಂದಿನ ದಿನದಲ್ಲಿ ವಿಮಾನ ಪ್ರಯಾಣಿಕರು ಹಲವಾರು ನಿಯಮಗಳನ್ನು ಪಾಲಿಸಬೇಕಾಗಿರುವುದು ಅನಿವಾರ್ಯವಾಗಿದೆ. ಅದರಲ್ಲಿ ಸೀಟ್​ ಬೆಲ್ಟ್​ ಧರಿಸುವುದು ಒಂದು ಉದಾಹರಣೆಯಾಗಿದೆ. ನಿಯಮವನ್ನು ಪಾಲಿಸುವ ಅನೇಕರು ಅದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಉದಾಹರಣೆಗೆ ವಿಮಾನದ ಟೇಕಾಫ್​ ಮತ್ತು ಲ್ಯಾಂಡಿಂಗ್​ ಸಮಯದಲ್ಲಿ ಕ್ಯಾಬಿನ್​ ಲೈಟ್​ ಅನ್ನು ಏಕೆ ಮಂಕಾಗಿಸುತ್ತಾರೆ ಎಂಬುದು ಎಷ್ಟೋ ಮಂದಿಗೆ ತಿಳಿದಿಲ್ಲ. ಆದರೆ ಅದರ ಹಿಂದಿನ ಉದ್ದೇಶವೇನು ಎಂಬುದನ್ನು ಛೇದರ್​ ಎಂಬ ನ್ಯೂಸ್​ ವೆಬ್​ಸೈಟ್​ ತಿಳಿಸಿದೆ.
ಟೇಕಾಫ್​ ಮತ್ತು ಲ್ಯಾಂಡಿಂಗ್​ ಸಮಯದಲ್ಲಿ ವಿಮಾನದ ಲೈಟ್ಸ್​ ಅನ್ನು ಮಂಕಾಗಿಸುವುದು ಇಂದಿನ ದಿನಗಳಲ್ಲಿ ತುಂಬಾ ಮುಖ್ಯವಾಗಿದೆ. ಏಕೆಂದರೆ ಈ ಸಮಯದಲ್ಲಿ ಪ್ರಯಾಣಿಕರ ಕಣ್ಣುಗಳು ಕತ್ತಲೆಗೆ ಹೊಂದಿಕೊಳ್ಳಲು ಹೀಗೆ ಮಾಡಲಾಗುತ್ತದೆ
ನಮ್ಮ ಕಣ್ಣುಗಳು ಕತ್ತಲೆಗೆ ಹೊಂದಿಕೊಳ್ಳಲು ಸುಮಾರು 10 ರಿಂದ 30 ನಿಮಿಷ ತೆಗೆದುಕೊಳ್ಳುತ್ತದೆ. ಹೀಗಾಗಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಾಗ ಈ ಕೆಲವು ನಿಮಿಷಗಳಲ್ಲಿ ಎಲ್ಲ ರೀತಿಯ ವ್ಯತ್ಯಾಸಗಳನ್ನು ಮಾಡಬಹುದಾಗಿದೆ. ಲೈಟ್ಸ್​ಗಳನ್ನು ಮಂಕಾಗಿಸುವುದರಿಂದ ನಮ್ಮ ಕಣ್ಣುಗಳು ಮುಂಚೆಯೇ ಕತ್ತಲೆಗೆ ಹೊಂದಿಕೊಳ್ಳಲು ನೆರವಾಗುತ್ತದೆ. ಒಂದು ವೇಳೆ ತಕ್ಷಣ ಏನಾದರೂ ಸಂಭವಿಸಿದರೆ ಮತ್ತು ವಿದ್ಯುತ್​ ಹೋದರೆ ನಮ್ಮ ಕಣ್ಣುಗಳಿಗೆ ಏನಾಗುವುದಿಲ್ಲ ಎಂದು ಏರ್​ಲೈನ್​ ಪೈಲಟ್​ ಪ್ಯಾಟ್ರಿಕ್​ ಸ್ಮಿತ್​ ತಿಳಿಸಿದ್ದಾರೆ.
ವಿಮಾನದ ಲೈಟ್ಸ್​ಗಳನ್ನು ಡಿಮ್ಮಿಂಗ್​ ಅಥವಾ ಆಫ್​ ಮಾಡುವುದರಿಂದ ಎಮರ್ಜೆನ್ಸಿ ಪಾಥ್​-ಲೈಟಿಂಗ್​ ಮತ್ತ ಸಂಕೇತಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಇನ್ನು ಟೇಕಾಫ್​ ಮತ್ತು ಲ್ಯಾಂಡಿಂಗ್​ ಸಮಯದಲ್ಲೇಕೆ ಲೈಟ್ಸ್​ಗಳನ್ನು ಆಫ್​ ಮಾಡುತ್ತಾರೆಂದರೆ, ಸಾಕಷ್ಟು ವಿಮಾನ ಅಪಘಾತಗಳು ಟೇಕಾಫ್​ ಮತ್ತು ಲ್ಯಾಂಡಿಂಗ್​ ಸಮಯದಲ್ಲೇ ಸಂಭವಿಸುವುದರಿಂದ ಸುರಕ್ಷಿತ ದೃಷ್ಟಿಯಿಂದ ಹೀಗೆ ಮಾಡಲಾಗುತ್ತದೆ ಎಂದಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 9 =
Remember me
