ನವದೆಹಲಿ:ಲಡಾಖ್​ ಗಡಿ ಗಲಾಟೆಯ ಬಳಿಕ ಭಾರತೀಯರ ಖಾಸಗಿ ಮಾಹಿತಿಗಳ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಚೀನಾದ 59 ಆ್ಯಪ್​ಗಳನ್ನು ಕೇಂದ್ರ ಸರ್ಕಾರ ಸೋಮವಾರವಷ್ಟೇ ನಿಷೇಧಿಸಿದೆ. ಆದರೆ ಭಾರತದಲ್ಲಿ ಮಕ್ಕಳಿಂದ ಯುವಕರವರೆಗೆ ಸಾಕಷ್ಟು ಜನಪ್ರಿಯವಾಗಿರುವ ಮೊಬೈಲ್​ ಗೇಮ್​ ಆ್ಯಪ್​ ಪಬ್​ಜಿ ಯಾಕೆ ನಿಷೇಧವಾಗಿಲ್ಲ ಎಂಬ ಪ್ರಶ್ನೆ ಈಗ ಸಾಕಷ್ಟು ಜನರನ್ನು ಕಾಡುತ್ತಿದೆ. ಟಿಕ್​ಟಾಕ್​, ಶೇರ್​ಇಟ್​, ಯುಸಿ ಬ್ರೌಸರ್​ ಮತ್ತು ಕ್ಯಾಮ್​ ಸ್ಕಾನರ್​ನಂಥ ಹಲವು ಜನಪ್ರಿಯ ಆ್ಯಪ್​ಗಳು ಭಾರತದಲ್ಲಿ ಬ್ಯಾನ್​ ಆಗಿದ್ದರೂ, ಪ್ಲೇಯರ್​ ಅನ್​ನೋನ್ಸ್​ ಬ್ಯಾಟಲ್​ಗ್ರೌಂಡ್ಸ್​ (ಪಬ್​ಜಿ)ಗೇಮ್​ ಹೇಗೆ ನಿಷೇಧದಿಂದ ಪಾರಾಯಿತು ಎಂಬುದು ಹಲವರಿಗೆ ಅಚ್ಚರಿ ಹುಟ್ಟಿಸಿದೆ. ಇದಕ್ಕೆ ಕಾರಣ ಇಲ್ಲಿದೆ ಓದಿ…
ಪಬ್​ಜಿ ಸಂಪೂರ್ಣವಾಗಿ ಚೀನಾದ ಆ್ಯಪ್​ ಆಗದೇ ಇರುವುದು ಅದು ನಿಷೇಧಕ್ಕೊಳಗಾಗದಿರಲು ಪ್ರಮುಖ ಕಾರಣವಾಗಿದೆ. ಈ ಗೇಮ್​ ಅನ್ನು ದಕ್ಷಿಣ ಕೊರಿಯಾದ ಕಂಪನಿ ಬ್ಲೂಹೋಲ್​ ಸಿದ್ಧಪಡಿಸಿದ್ದು, ಅದುವೇ ಇದರ ನಿರ್ವಹಣೆಯನ್ನೂ ಮಾಡುತ್ತಿದೆ. ಆದರೆ ಈ ಗೇಮ್​ ಜನಪ್ರಿಯಗೊಂಡ ಬಳಿಕ ಚೀನಾದ ಬಹುರಾಷ್ಟ್ರೀಯ ಕಂಪನಿ ಟೆನ್​ಸೆಂಟ್​ ಕೂಡ ಈ ಆ್ಯಪ್​ನಲ್ಲಿ ಹೂಡಿಕೆ ಮಾಡಿದ್ದು, ಚೀನಾದಲ್ಲೂ ಇದನ್ನು ಸಾಕಷ್ಟು ಜನಪ್ರಿಯಗೊಳಿಸಿದೆ. ಬಳಿಕ ಅದನ್ನು ಭಾರತದಲ್ಲೂ ಹಂಚಿಕೆ ಮಾಡಿ ಜನಪ್ರಿಯಗೊಳಿಸಿದೆ. ಭಾರತದಲ್ಲಿ ಇದರ ಮಾರುಕಟ್ಟೆಯ ಹಕ್ಕು ಟೆನ್​ಸೆಂಟ್​ ಹೋಲ್ಡಿಂಗ್ಸ್​ ಬಳಿಯಲ್ಲಿಯೇ ಇದೆ. ಈ ರೀತಿ ಮಿಶ್ರ ಪಾಲುದಾರಿಕೆ ಹೊಂದಿರುವ ಕಾರಣದಿಂದಾಗಿ ಈ ನಿಷೇಧಕ್ಕೊಳಗಾಗಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಧೋನಿ, ಕೊಹ್ಲಿ 10ನೇ ತರಗತಿಯಲ್ಲಿ ಪಡೆದ ಅಂಕಗಳೆಷ್ಟು ಗೊತ್ತೇ ?
ನೆಟ್ಟಿಗರಿಂದ ಟ್ರೋಲ್​
ಪಬ್​ಜಿ ನಿಷೇಧದಿಂದ ಪಾರಾದ ಬೆನ್ನಲ್ಲೇ ಈ ಗೇಮ್​ ಇಷ್ಟಪಡುವವರು, ಟಿಕ್​ಟಾಕ್​ ಇಷ್ಟಪಡುವವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಮಾಡಲು ಆರಂಭಿಸಿದ್ದಾರೆ. ಪಬ್​ಜಿ ಆಡುತ್ತಲೇ ಹೆಚ್ಚಿನ ಸಮಯ ಕಳೆಯುವ ಮಕ್ಕಳ ಪಾಲಕರು, ಪಬ್​ಜಿ ನಿಷೇಧಿಸದಿರುವುದಕ್ಕೆ ಕೋಪಗೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.
#TikTokIndian parents searching#PUBGin Banned list be like –pic.twitter.com/N0cDLvgRg3— THE | Epic Blogger | (@Kush_official_)June 29, 2020
#TikTokIndian parents searching#PUBGin Banned list be like –pic.twitter.com/N0cDLvgRg3
#PUBGnot banned in IndiaWhile#tiktokbanned with other Chinese appsTiktok users :pic.twitter.com/wBbk3DiFfU— _Chillionaire_ (@kingmustansir)June 29, 2020
#PUBGnot banned in IndiaWhile#tiktokbanned with other Chinese appsTiktok users :pic.twitter.com/wBbk3DiFfU
Every tiktok user to government after tiktok got banned and not pubg😂pic.twitter.com/vyZMtqeOVZ— letswander♡ (@inshaahamid)June 29, 2020
Every tiktok user to government after tiktok got banned and not pubg😂pic.twitter.com/vyZMtqeOVZ
#PUBGnot banned in IndiaWhile#tiktokbanned with other Chinese appsTiktok users :pic.twitter.com/wBbk3DiFfU— _Chillionaire_ (@kingmustansir)June 29, 2020
#PUBGnot banned in IndiaWhile#tiktokbanned with other Chinese appsTiktok users :pic.twitter.com/wBbk3DiFfU

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 20 =
Remember me
