ನವದೆಹಲಿ:ಊರೆಂದ ಮೇಲೆ ಅಲ್ಲಿ ಸಾಮಾನ್ಯವಾಗಿ ಎಲ್ಲರೂ ಎಲ್ಲವೂ ಇರುತ್ತವೆ. ಆದರೆ ಇಲ್ಲೊಂದು ಊರಲ್ಲಿ ಆ ಒಂದು ತಿಂಗಳ ಕಾಲ ಕಾಗೆಗಳು ಕಾಣಿಸುವುದಿಲ್ಲ. ಇಂಥದ್ದೊಂದು ಅಚ್ಚರಿ ಪ್ರತಿ ಮೂರು ವರ್ಷಗಳಿಗೊಮ್ಮೆ ಇಲ್ಲಿ ಕಂಡುಬರುತ್ತದೆ.
ಮಲಮಾಸ ಎಂದು ಆಚರಿಸಲಾಗುವ ಇಲ್ಲವೇ ಅಧಿಕ ಮಾಸ ಎನ್ನಲಾಗುವ ಈ ಸಂದರ್ಭದಲ್ಲಿ ಈ ಊರಲ್ಲಿರುವ ಕಾಗೆಗಳೆಲ್ಲ ಕಣ್ಮರೆ ಆಗುವುದು ಇಲ್ಲಿನ ವಿಶೇಷ. ಇದಕ್ಕೊಂದು ಪೌರಾಣಿಕ ಇತಿಹಾಸ ಕೂಡ ಇದೆಯಂತೆ.
ಪ್ರತಿ ಮೂರು ವರ್ಷಗಳಿಗೆ ಬರುವ ಅಧಿಕ ಮಾಸವನ್ನು ಇಲ್ಲಿ ವಿಶೇಷವಾದ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ಆ ಸಂದರ್ಭದಲ್ಲಿ ಊರಿನಲ್ಲಿ ಸಾಮಾನ್ಯವಾಗಿ ಕಾಣಿಸುವ ಕಾಗೆಗಳೂ ಕಣ್ಮರೆ ಆಗಿರುತ್ತವೆ. ಬಿಹಾರದ ರಾಜ್​ಗಿರ್ ಎಂಬ ಜಿಲ್ಲೆಯಲ್ಲಿ ಈ ವಿದ್ಯಮಾನ ಕಂಡುಬರುತ್ತದೆ.
ರಾಜ್​ಗಿರ್​ನಲ್ಲಿ ಈ ಅಧಿಕಮಾಸದಲ್ಲಿ 33 ಕೋಟಿ ದೇವತೆಗಳೂ ಬಂದು ನೆಲೆಸುತ್ತಾರೆ ಎಂಬ ಪ್ರತೀತಿ ಇದ್ದು, ಆ ಸಂದರ್ಭದಲ್ಲಿ ಕಾಗೆಗಳು ಕಣ್ಮರೆ ಆಗುತ್ತವೆ ಎಂದು ಇಲ್ಲಿನ ರಾಜ್​ಗಿರ್​ ತೀರ್ಥ ಪಾಂಡಾ ಕಮಿಟಿಯ ಮುಖ್ಯಸ್ಥ ಸುಧೀರ್ ಉಪಾಧ್ಯಾಯ ಹೇಳುತ್ತಾರೆ.
ಬ್ರಹ್ಮನ ಪುತ್ರ ರಾಜಾ ಬಸು ರಾಜ್​ಗಿರ್​ನ ಬ್ರಹ್ಮಕುಂಡ ಸಂಕೀರ್ಣದಲ್ಲಿ ಒಮ್ಮೆ ಯಜ್ಞ ಹಮ್ಮಿಕೊಂಡಿದ್ದ. ಅದಕ್ಕೆ 33 ಕೋಟಿ ದೇವತೆಗಳನ್ನು ಆಹ್ವಾನಿಸಲಾಗಿದ್ದು, ಕಪ್ಪುಕಾಗೆಗಳಿಗೆ ಕರೆದಿರಲಿಲ್ಲ. ಹಾಗೇ ಪ್ರತಿ ಅಧಿಕಮಾಸಕ್ಕೆ ಆಚರಿಸುವ ಇಲ್ಲಿನ ಹಬ್ಬಕ್ಕೆ 33 ಕೋಟಿ ದೇವತೆಗಳು ಬಂದು ತಂಗುತ್ತಾರೆ ಎನ್ನುವ ಪ್ರತೀತಿ ಇದ್ದು, ಆ ಸಮಯದಲ್ಲಿ ಇಲ್ಲಿ ಕಾಗೆಗಳು ಕಾಣಿಸಿಕೊಳ್ಳುವುದಿಲ್ಲ ಎಂದು ವಿವರಿಸಿದ್ದಾರೆ. ಅಂದಹಾಗೆ ಈ ವರ್ಷ ಜುಲೈ 18ರಿಂದ ಆ. 15ರ ವರೆಗೆ ಇಲ್ಲಿ ಅಧಿಕ ಮಾಸ ಆಚರಣೆ ಆಗುತ್ತಿದ್ದು, ಈ ಅವಧಿಯಲ್ಲಿ ಕಾಗೆಗಳು ಕಾಣಿಸಿಕೊಳ್ಳುವುದಿಲ್ಲ ಎಂದು ವರದಿಯಾಗಿದೆ. –ಏಜೆನ್ಸೀಸ್
ಮದುವೆಯಾಗುವುದಾಗಿ ಸಂಪರ್ಕ ಬೆಳೆಸಿ ವಂಚಿಸಿದ ಉದ್ಯಮಿ?: ನಟಿಯಿಂದ ಪೊಲೀಸರಿಗೆ ದೂರು

2000 ರೂ. ನೋಟು ಹಿಂಪಡೆ ವಿಚಾರ: ಆರ್​ಬಿಐನಿಂದ ಮತ್ತೆ ಮನವಿ; ಇಲ್ಲಿದೆ ವಿವರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + three =
Remember me
