ನವದೆಹಲಿ:ಆರ್‌ಎಸ್‌ಎಸ್‌ನ ಸಿದ್ದಾಂತಕಾರರಲ್ಲಿ ಒಬ್ಬರಾಗಿರುವ, ಭಾರತೀಯ ಮಜದೂರ್‌ ಸಂಘ (ಬಿಎಂಎಸ್) ಮತ್ತು ಸ್ವದೇಶಿ ಜಾಗರಣ್‌ ಮಂಚ್‌ (ಎಸ್‌ಜೆಎಂ) ಸೇರಿದಂತೆ ಆರ್‌ಎಸ್‌ಎಸ್ ಬೆಂಬಲಿತ ಹಲವಾರು ಸಂಸ್ಥೆಗಳ ಸ್ಥಾಪಕರೂ ಆಗಿರುವ ದತ್ತೋಪಂಥ್‌ ಠೇಂಗಡಿ ಅವರ ಜನ್ಮಶತಮಾನದ ವರ್ಷವಿದು. ಬಿಎಂಎಸ್ ದೇಶದ ಅತಿದೊಡ್ಡ ಕಾರ್ಮಿಕ ಸಂಘಟನೆಯಾಗಿದ್ದು, ಎಸ್‌ಜೆಎಂ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಭಾರತದ ಆರ್ಥಿಕ ನೀತಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ಠೇಂಗಡಿ ಅವರು ಆರ್‌ಎಸ್‌ಎಸ್‌ನ ಅತ್ಯಂತ ಪ್ರಭಾವಿ ಮುಖಂಡರಾಗಿದ್ದರೂ, ಹೆಚ್ಚಾಗಿ ಗುರುತಿಸಿಕೊಳ್ಳಲು ಇಷ್ಟಪಟ್ಟವರಲ್ಲ. ಆದ್ದರಿಂದ ಅವರು 1940ರ ಅವಧಿಯಲ್ಲಿ ಡಾ.ಭೀಮ್‌ರಾವ್‌ ಅಂಬೇಡ್ಕರ್‌ ಮತ್ತು ಆರ್‌ಎಸ್‌ಎಸ್‌ ನಡುವಿನ ಕೊಂಡಿಯಾಗಿದ್ದರು ಎನ್ನುವ ವಿಷಯ ಕೆಲವೇ ಜನರಿಗೆ ಮಾತ್ರ ತಿಳಿಸಿದೆ. ಮಹಾರಾಷ್ಟ್ರದ ಭಂಡಾರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಠೇಂಗಡಿ ಅವರು ಸ್ಪರ್ಧಿಸುವಂತೆ ಅಂಬೇಡ್ಕರ್‌ ಅವರು ಒತ್ತಾಯ ಕೂಡ ಮಾಡಿದ್ದರು. ಇವೆಲ್ಲರ ಕುರಿತ ವಿಸ್ತೃತ ಮಾಹಿತಿಯನ್ನು ಠೇಂಗಡಿ ಅವರು ತಮ್ಮ ಪುಸ್ತಕ ‘ಡಾ.ಅಂಬೇಡ್ಕರ್‌ ಔರ್‌ ಸಾಮಾಜಿಕ್‌ ಕ್ರಾಂತಿ ಕಿ ಯಾತ್ರಾ’ ದಲ್ಲಿ ವಿವರಿಸಿದ್ದಾರೆ.
ಅಂಬೇಡ್ಕರ್‌ ಚುನಾವಣಾ ಏಜೆಂಟ್‌ ಆಗಿ ಠೇಂಗಡಿಠೇಂಗಡಿಯವರು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಆರ್‌ಎಸ್‌ಎಸ್‌ ಪ್ರಚಾರಕ್‌ ಆಗಿದ್ದವರು. ಆ ನೀಲಿ ಕಣ್ಣುಗಳ ಹುಡುಗನನ್ನು ಕಂಡ ಅಂಬೇಡ್ಕರ್‌ ಅವರು ಎಷ್ಟು ಆಕರ್ಷಿತರಾಗಿದ್ದರು ಎಂದರೆ ತಾವು ಪರಿಶಿಷ್ಟ ಜಾತಿ ಒಕ್ಕೂಟದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಠೇಂಗಡಿ ಅವರನ್ನು ಅದರ ಕಾರ್ಯದರ್ಶಿಯಾಗಿ ನೇಮಿಸಿದ್ದರು. ಮಾತ್ರವಲ್ಲದೇ ಭಂಡಾರ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಅಂಬೇಡ್ಕರ್‌ ಅವರ ಚುನಾವಣಾ ಏಜೆಂಟ್‌ ಆಗಿ ಕೂಡ ಠೇಂಗಡಿ ಕಾರ್ಯ ನಿರ್ವಹಿಸಿದ್ದರು.
“ಗುರೂಜಿ (ಆರ್‌ಎಸ್‌ಎಸ್‌ನ ಎರಡನೆಯ ಮುಖ್ಯಸ್ಥ ಎಂ.ಎಸ್. ಗೋಲ್ವಾಲ್ಕರ್) ಅವರ ನಿರ್ದೇಶನದ ಮೇರೆಗೆ ಆರ್‌ಎಸ್‌ಎಸ್ ಕಾರ್ಯಕರ್ತರು ಈ ಚುನಾವಣೆಯಲ್ಲಿ ಅಂಬೇಡ್ಕರ್ ಅವರಿಗಾಗಿ ಹಗಲು ರಾತ್ರಿ ಕೆಲಸ ಮಾಡಿದರು. ಬಾಬಾಸಾಹೇಬ್ ಈ ಚುನಾವಣೆಯಲ್ಲಿ ಸೋತರೂ ಮತದಾನದ ಫಲಿತಾಂಶಗಳನ್ನು ವಿಶ್ಲೇಷಿಸಿದಾಗ ಅಲ್ಲಿದ್ದ ಪರಿಶಿಷ್ಟ ವರ್ಗಗಳ ಮತಕ್ಕಿಂತ ಉಳಿದವರ ಮತಗಳೇ ಅತ್ಯಧಿಕ ಸಂಖ್ಯೆಯಲ್ಲಿ ಬಾಬಾಸಾಹೇಬ್‌ ಅವರಿಗೆ ಚಲಾವಣೆ ಆಗಿದ್ದು ಕಂಡುಬಂದಿತ್ತು. ಇದನ್ನು ಕಂಡ ಬಾಬಾಸಾಹೇಬ್‌ ಅವರು ತುಂಬಾ ಖುಷಿಪಟ್ಟಿದ್ದರು’ ಎಂದು ಠೇಂಗಡಿಯಲ್ಲಿ ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಇದಾದ ಕೆಲವೇ ದಿನಗಳ ನಂತರ ಅಂಬೇಡ್ಕರ್‌ ಅವರು ಬೌದ್ಧಧರ್ಮವನ್ನು ಅಳವಡಿಸಿಕೊಂಡರು. ಆ ಸಂದರ್ಭದಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಸಭೆಯಲ್ಲಿ ಅಂಬೇಡ್ಕರ್ ಅವರು, ಪರಿಶಿಷ್ಟ ಜಾತಿ ಒಕ್ಕೂಟದ ಮುಖಂಡರನ್ನು ಉದ್ದೇಶಿಸಿ, ‘ಉಪ ಚುನಾವಣೆಯಲ್ಲಿ ನಡೆದಿರುವ ಫಲಿತಾಂಶ, ಅದರಲ್ಲಿ ನನಗೆ ಬಿದ್ದಿರುವ ಮತಗಳ ಬಗ್ಗೆ ನಿಮಗೆಲ್ಲಾ ಅರಿವಿದೆ. ಈ ಹಿನ್ನೆಲೆಯಲ್ಲಿ ಮೇಲ್ವರ್ಗ ಮತ್ತು ಹಿಂದುಳಿದ ಜಾತಿಗಳ ನಡುವೆ ಧ್ರುವೀಕರಣವು ಅಸ್ತಿತ್ವದಲ್ಲಿಲ್ಲ ಎಂಬುದು ಸಾಬೀತಾಗಿದೆ’ ಎಂದಿದ್ದರು. ‘ ನಮ್ಮ ಒಕ್ಕೂಟದ ಹೆಸರು ಜಾತಿ ನಿರ್ದಿಷ್ಟವಾಗಿದ್ದು, ಅದನ್ನೀಗ ಬದಲಾಯಿಸುವ ಕಾಲ ಬಂದಿದೆ’ ಎಂದಿದ್ದ ಅಂಬೇಡ್ಕರ್‌, ತಮ್ಮ ವಿಚಾರಧಾರೆ ಹಾಗೂ ಆರ್‌ಎಸ್‌ಎಸ್‌ ಸಿದ್ಧಾಂತಗಳನ್ನು ಒಳಗೊಂಡಿರುವ ಒಂದು ಹೆಸರು ಬೇಕೆಂದು ತೀರ್ಮಾನಿಸಿ ‘ರಿಪಬ್ಲಿಕನ್ ಪಾರ್ಟಿ’ ಸ್ಥಾಪಿಸುವ ನಿರ್ಧಾರಕ್ಕೆ ಬಂದರು.
1952 ರಲ್ಲಿ, ಮೊದಲ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ, ಅಂಬೇಡ್ಕರ್ ಅವರ ಪರಿಶಿಷ್ಟ ಜಾತಿ ಒಕ್ಕೂಟ ಮತ್ತು ಭಾರತೀಯ ಜನಸಂಘವು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಮಧ್ಯಪ್ರದೇಶದಲ್ಲಿ ಜಂಟಿಯಾಗಿ ಚುನಾವಣೆಗಳನ್ನು ನಡೆಸಿತು.ಆರ್‌ಎಸ್‌ಎಸ್‌ನ ದಾಖಲೆಗಳಲ್ಲಿ ಉಲ್ಲೇಖಗೊಂಡಿರುವಂತೆ ಅಂಬೇಡ್ಕರ್ ಅವರ ಮೊದಲ ಔಪಚಾರಿಕ ಮಾತುಕತೆ 1935 ರಲ್ಲಿ ನಡೆಯಿತು. ಅವರು ಆ ಸಂದರ್ಭದಲ್ಲಿ ಪುಣೆಯ ಆರ್‌ಎಸ್‌ಎಸ್ ತರಬೇತಿ ಶಿಬಿರಕ್ಕೆ ಭೇಟಿ ನೀಡಿದ್ದರು. ತುರ್ತು ಕೆಲಸಕ್ಕಾಗಿ ಪುಣೆ ಸಮೀಪದ ದಪೋಲಿಗೆ ಹೋಗಿದ್ದ ಅವರು, ಅಲ್ಲಿಯೇ ಆರ್‌ಎಸ್‌ಎಸ್‌ ಶಾಖೆಗೆ ಭೇಟಿ ಕೊಟ್ಟಿದ್ದರು. 1939 ರಲ್ಲಿ, ಪುಣೆಯ ಆರ್‌ಎಸ್‌ಎಸ್ ತರಬೇತಿ ಶಿಬಿರಕ್ಕೆ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿತ್ತು. ಅಲ್ಲಿ ಅವರು ಆರ್‌ಎಸ್‌ಎಸ್ ಸಂಸ್ಥಾಪಕ ಡಾ.ಕೆ.ಬಿ. ಹೆಡ್ಗೆವಾರ್ ಅವರನ್ನು ಭೇಟಿಯಾದರು.
ಶಿಬಿರದಲ್ಲಿ 500 ಕ್ಕೂ ಹೆಚ್ಚು ಆರ್‌ಎಸ್‌ಎಸ್ ಸ್ವಯಂಸೇವಕರು ಸಮವಸ್ತ್ರದಲ್ಲಿ ಇದ್ದರು. ಜಾತಿಯ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲ ಎಂಬ ಅಂಶದಿಂದ ಅಂಬೇಡ್ಕರ್ ಸಾಕಷ್ಟು ಪ್ರಭಾವಿತರಾದರು. ಈ ಘಟನೆಯನ್ನು ಆರ್‌ಎಸ್‌ಎಸ್‌ನ ದಾಖಲೆಗಳಲ್ಲಿ ಮಾತ್ರ ಎಲ್ಲೂ ಉಲ್ಲೇಖಿಸಲಾಗಿಲ್ಲ. ಆದರೆ ಹಲವಾರು ಆರ್‌ಎಸ್‌ಎಸ್ ನಾಯಕರು ಅಂಬೇಡ್ಕರ್ ಅವರ ವಿಚಾರಧಾರೆ ಮತ್ತು ಆರ್‌ಎಸ್‌ಎಸ್ ಸಿದ್ಧಾಂತರ ನಡುವಿನ ಸಂಪರ್ಕವನ್ನು ತೋರಿಸಲು ಅಂಬೇಡ್ಕರ್ ಅವರ ಈ ಭೇಟಿಯನ್ನು ಪದೇ ಪದೇ ವಿವರಿಸಿದ್ದಾರೆ.1948ರ ಜನವರಿ 30 ರಂದು ಗಾಂಧೀಜಿಯ ಹತ್ಯೆ ನಡೆದ ನಂತರ ಅಂದಿನ ಕಾಂಗ್ರೆಸ್ ಸರ್ಕಾರವು ಆರ್‌ಎಸ್‌ಎಸ್‌ ಮೇಲೆ ನಿಷೇಧವನ್ನು ಹೇರಿತ್ತು. ಈ ನಿಷೇಧವನ್ನು ತೆಗೆದುಹಾಕುವಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಹಾಯ ಮಾಡಿದ್ದರು. ಆದ್ದರಿಂದ ಅವರಿಗೆ ಕೃತಜ್ಞತೆ ಸಲ್ಲಿಸಲು 1949 ರ ಸೆಪ್ಟೆಂಬರ್‌ನಲ್ಲಿ, ಆರ್‌ಎಸ್‌ಎಸ್‌ನ ಎರಡನೇ ಸರಸಂಗಚಾಲಕ (ಮುಖ್ಯಸ್ಥ) ಎಂ.ಎಸ್‌.ಗೋಲ್ವಾಲ್ಕರ್‌ ಅವರು ದೆಹಲಿಗೆ ಹೋಗಿದ್ದರು. 1953 ಜೂನ್‌ನಲ್ಲಿ , ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತರಾದ ಮೊರೋಪಂತ್ ಪಿಂಗ್ಲೆ ಮತ್ತು ಬಾಲಾಸಾಹೇಬ್ ಸಾಥೆ ಮಹಾರಾಷ್ಟ್ರದ ಉರಂಗಾಬಾದ್‌ನಲ್ಲಿ ಅಂಬೇಡ್ಕರ್ ಅವರನ್ನು ಭೇಟಿಯಾಗಿ ಆರ್‌ಎಸ್‌ಎಸ್‌ ಕುರಿತು ಚರ್ಚಿಸಿದ್ದರು..
ಆರ್‌ಎಸ್‌ಎಸ್‌ ನಿಜವಾಗಿಯೂ ಹಿಂದೂ ಸಮಾಜವನ್ನು ಒಂದುಗೂಡಿಸಲು ಬಯಸಿದರೆ, ಅವರು ಸಂಘಟನೆಯ ವಿಸ್ತರಣೆಯನ್ನು ಚುರುಕುಗೊಳಿಸಬೇಕು ಎಂದು ಅಂಬೇಡ್ಕರ್ ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ತಿಳಿಸಿದರು. ಹಿಂದುಳಿದವರು ಹೆಚ್ಚು ಹೊತ್ತು ಕಾಯಲು ಸಾಧ್ಯವಿಲ್ಲ,. ಹಿಂದುಳಿದವರಿಗೆ ಸರಿಯಾದ ಮಾರ್ಗದರ್ಶನ ಶೀಘ್ರದಲ್ಲಿ ಸಿಗದೇ ಹೋದರೆ, ಅವರು ಕಮ್ಯುನಿಸಂ ಫಿರಂಗಿಗಳಿಗೆ ತುತ್ತಾಗುತ್ತಾರೆ’ ಆದ್ದರಿಂದ ಈ ಕಾರ್ಯವನ್ನು ಆರ್‌ಎಸ್‌ಎಸ್‌ ಅತಿ ವೇಗದಲ್ಲಿ ಚುರುಕುಗೊಳಿಸಬೇಕು ಎಂದಿದ್ದರು.ಈ ಸಂಭಾಷಣೆಯನ್ನು ವಿವರಿಸುತ್ತಾ, ಠೇಂಗಡಿ ತಮ್ಮ ಪುಸ್ತಕದಲ್ಲಿ “ಪರಿಶಿಷ್ಟ ಜಾತಿ ಮತ್ತು ಕಮ್ಯುನಿಸಂ ನಡುವೆ, ಅಂಬೇಡ್ಕರ್ ತಡೆಗೋಡೆ” ಎಂದು ಅಂಬೇಡ್ಕರ್ ಹೇಳಿದ್ದರ ಬಗ್ಗೆ ಉಲ್ಲೇಖಿಸಿದ್ದಾರೆ.
ಲೇಖಕ: ಅರುಣ್‌ ಆನಂದ್‌(ಇಂದ್ರಪ್ರಸ್ಥ ವಿಶ್ವ ಸಂವಾದ ಕೇಂದ್ರದ ಸಿಇಒ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − sixteen =
Remember me
