| ಚೇತನ್ ಎಸ್,ಮ್ಯೂಚುಯಲ್ ಫಂಡ್ ವಿತರಕರು
ಸ್ವಾತಂತ್ರ್ಯಾನಂತರಸಾರ್ವಜನಿಕ ವಲಯದ ಉದ್ಯಮಗಳು (PSU) ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ದೇಶದ ಆರ್ಥಿಕತೆಯ ಆಧಾರಸ್ತಂಭ ಎನ್ನುವ ಯಾವುದೇ ಒಂದು ವಲಯವನ್ನು ತೆಗೆದುಕೊಂಡರೂ ಅದರಲ್ಲಿ ಪಿಎಸ್​ಯು ಹೆಸರು ಇರುವುದು ಗಮನಾರ್ಹವಾಗಿದೆ. ಪಿಎಸ್​ಯುನ ವೈಶಿಷ್ಟ್ಯವೇನೆಂದರೆ ಇದರಲ್ಲಿ ಭಾರತ ಸರ್ಕಾರವು (ಕೇಂದ್ರ, ರಾಜ್ಯ ಅಥವಾ ಎರಡೂ) ಕನಿಷ್ಠ ಶೇ. 51 ರಷ್ಟು ಪಾಲನ್ನು ಹೊಂದಿರುತ್ತದೆ.
ಪಿಎಸ್​ಯು ಕಂಪೆನಿಗಳಲ್ಲಿ ಹೂಡಿಕೆಯ ಪ್ರಯೋಜನಗಳು:ಪಿಎಸ್​ಯು ಕಂಪೆನಿಗಳು, ಖಾಸಗಿ ಕಂಪೆನಿಗಳಿಗಿಂತಲೂ ಭಿನ್ನವಾಗಿದ್ದು, ಕೆಲವೊಂದು ವೈಶಿಷ್ಟ್ಯಗಳನ್ನು ಹೊಂದಿವೆ. ಪಿಎಸ್‌ಯು ಕಂಪೆನಿಗಳಲ್ಲಿ ಹೂಡಿಕೆ ಮಾಡುವ ಕೆಲವು ಪ್ರಯೋಜನಗಳು ಇಲ್ಲಿವೆ:
* ಕಡಿಮೆ ವೆಚ್ಚದ ಸಾಲ –ಪಿಎಸ್​ಯು ಕಂಪೆನಿಗಳು ಅತ್ಯುತ್ತಮ ಕ್ರೆಡಿಟ್ ರೇಟಿಂಗ್ ಹೊಂದಿರುವ ಹಿನ್ನೆಲೆಯಲ್ಲಿ ಸಾಲದ ವೆಚ್ಚವು ಕಡಿಮೆ ಮಟ್ಟದಲ್ಲಿ ಇರುತ್ತದೆ. ಇಂಥ ಕಂಪೆನಿಗಳು ಬಂಡವಾಳ ಮಾರುಕಟ್ಟೆಗಳಿಗೆ ಸುಲಭವಾಗಿ ಪ್ರವೇಶವನ್ನು ಪಡೆಯಬಹುದಾದ ಹಿನ್ನೆಲೆಯಲ್ಲಿ, ಬಡ್ಡಿದರ ಪ್ರಮಾಣವು ಏರುಗತಿಯಲ್ಲಿ ಇರುವಾಗಲೂ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ದರದಲ್ಲಿ ಬಾಂಡ್‌ಗಳನ್ನು ತ್ವರಿತವಾಗಿ ವಿತರಿಸಬಲ್ಲವು.
* ಹೆಚ್ಚಿನ ಮಟ್ಟದ ಸ್ಥಿರತೆ:ಖಾಸಗಿ ಕಂಪೆನಿಗಳು ಒಬ್ಬ ವ್ಯಕ್ತಿ ಅಥವಾ ಸಮೂಹದ ಒಡೆತನದಲ್ಲಿ ಇರುತ್ತವೆ. ಆದರೆ ಪಿಎಸ್​ಯು ಬೋರ್ಡ್‌ಗಳು ಪ್ರಾಥಮಿಕವಾಗಿ ಸರ್ಕಾರದಿಂದ ನಿಯಂತ್ರಿಸಲ್ಪಡುತ್ತವೆ. ಈ ಕಾರಣದಿಂದಾಗಿ ಖಾಸಗಿ ಕಂಪೆನಿಗಳಿಗೆ ಹೋಲಿಸಿದರೆ ಹೆಚ್ಚಿನ ಮಟ್ಟದ ಸ್ಥಿರತೆಯನ್ನು ಹೊಂದಿವೆ.
*ಅಪಾಯದ ಮಟ್ಟ ಕಡಿಮೆ:ಪಿಎಸ್​ಯು ಕಂಪೆನಿಗಳು ಸಂಬಂಧವಿಲ್ಲದ ವ್ಯವಹಾರಗಳಿಗೆ ಕೈ ಹಾಕುವುದಿಲ್ಲ. ಸರ್ಕಾರದ ಅನುಮೋದನೆ ಇಲ್ಲದ ಆಸ್ತಿಗಳ ಮಾರಾಟ ಮಾಡುವುದಾಗಲೀ, ಸಂಬಂಧವಿಲ್ಲದ ವ್ಯವಹಾರಗಳಲ್ಲಿ ಹೂಡಿಕೆ ಮಾಡುವುದಾಗಲೀ ಮಾಡುವುದಿಲ್ಲ. ಈ ಹಿನ್ನೆಲೆಯಲ್ಲಿ ಖಾಸಗಿ ಕಂಪೆನಿಗಳಿಗೆ ಹೋಲಿಸಿದರೆ ಇಲ್ಲಿನ ವ್ಯವಹಾರದಲ್ಲಿ ಅಪಾಯದ ಮಟ್ಟ ತೀರಾ ಕಡಿಮೆ ಎನ್ನಬಹುದು.
* ಹೆಚ್ಚಿನ ಲಾಭಾಂಶಗಳು
ಪಿಎಸ್​ಯು ಷೇರುಗಳಲ್ಲಿ ಹೂಡಿಕೆ ಮಾಡುವುದು ಏಕೆ ಮತ್ತು ಹೇಗೆ?ಬೇರೆ ಎಲ್ಲಾ ಕಂಪೆನಿಗಳಿಗೆ ಹೋಲಿಸಿದರೆ ಅತ್ಯಂತ ಸುರಕ್ಷಿತವಾಗಿರುವ ಕಂಪೆನಿಗಳ ಹೆಸರಿನಲ್ಲಿ ಮೊದಲಿಗೆ ಕೇಳಿಬರುವುದು ಪಿಎಸ್​ಯು. ಇಂದಿನ ಬದಲಾಗುತ್ತಿರುವ ಸನ್ನಿವೇಶದಲ್ಲಿ ಪಿಎಸ್​ಯು ಕಂಪೆನಿಗಳಲ್ಲಿ ಸುರಕ್ಷತೆ ಹೆಚ್ಚು ಎಂದೇ ಹೇಳಬಹುದು. ಇಂಧನ, ಬ್ಯಾಂಕ್​, ರಕ್ಷಣಾ ಕ್ಷೇತ್ರ ಮುಂತಾದವುಗಳಲ್ಲಿ ಕೂಡ ಪಿಎಸ್​ಯು ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ.
ಇತ್ತೀಚೆಗೆ ಐಸಿಐಸಿಐ ಪ್ರುಡೆನ್ಶಿಯಲ್​, ‘ಐಸಿಐಸಿಐ ಪ್ರುಡೆನ್ಶಿಯಲ್ ಪಿಎಸ್​ಯು ಇಕ್ವಿಟಿ ಫಂಡ್’ ಅನ್ನು ಪರಿಚಯಿಸಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + 19 =
Remember me
