ಹಾಲಿವುಡ್​ನ ಅನೇಕಸ್ಟಾರ್​​ಗಳು​ ಸೇರಿದಂತೆ ಇತರೆ ಕ್ಷೇತ್ರದ ಸ್ಟಾರ್​ ಸೆಲೆಬ್ರಿಟಿಗಳು ತಮ್ಮ ಬಳಿ ಆಟೋಗ್ರಾಫ್ ಕೊಡುವಂತೆ ನೀಲಿ ಇಂಕ್​ನ ಪೆನ್/ ಮಾರ್ಕರ್​​ ಹಿಡಿದು ಬಂದರೆ ಖಂಡಿತ ಸಹಿ ಹಾಕುವುದಿಲ್ಲ. ಬದಲಿಗೆ ಬೇರೆ ಬಣ್ಣದ ಇಂಕ್ ತಗೊಂಡು ಬನ್ನಿ ಸಿಗ್ನೇಚರ್​ ಕೊಡ್ತೀನಿ ಎನ್ನುತ್ತಾರೆ. ಇದರಿಂದ ಅಪಾರ ಸಂಖ್ಯೆಯ ಅಭಿಮಾನಿಗಳ ಮನಸ್ಸಿಗೆ ನೋವುಂಟಾದ ಪ್ರಸಂಗಗಳು ಇವೆ. ತಮ್ಮ ನೆಚ್ಚಿನ ಸ್ಟಾರ್​ಗಳು ಹೀಗೆ ಹೇಳುತ್ತಿದ್ದಂತೆ ಕೆಲವರು ಮೌನಕ್ಕೆ ಜಾರಿದರೆ, ಇನ್ನು ಕೆಲವರು ಇದ್ಯಾಕೆ ಈ ರೀತಿ ಮಾಡ್ತಾರೆ? ಅವರಿಗೆ ಅಹಂಕಾರ, ಸ್ಟಾರ್​ ಪಟ್ಟದ ನಶೆ ಏರಿರಬಹುದು ಎಂದು ಅಂದುಕೊಂಡಿದ್ದಾರೆ. ಆದರೆ ಅದು ತಪ್ಪು!
ಇದನ್ನೂ ಓದಿ:ವೊಡಾಫೋನ್ ಐಡಿಯಾದ ಷೇರು ಬೆಲೆಯಲ್ಲಿ ಬಿರುಗಾಳಿ: ವರ್ಷದ ಸ್ಟಾಕ್ ಇದಾಗಲಿದೆ ಎಂದು ತಜ್ಞರು ಹೇಳುತ್ತಿರುವುದೇಕೆ?
ಇದಕ್ಕೆ ಇತ್ತೀಚೆಗಷ್ಟೇ ಹಾಲಿವುಡ್​ ನಟಿಯೊಬ್ಬರು ಫ್ಯಾನ್ಸ್​ಗಳೊಂದಿಗೆ ನಡೆದುಕೊಂಡ ರೀತಿ ಸ್ವಲ್ಪವು ಇಷ್ಟವಾಗಿಲ್ಲ. ಅದರ ವಿಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹರಿದಾಡಿ, ಚರ್ಚೆಗೆ ಗ್ರಾಸವಾಗಿತ್ತು. ದಿ ಕ್ರೌಂನ್ ಸೀರಿಸ್​ನ ನಟಿ ಕ್ಲೇರ್​ ಫೋಯ್​ಗೆ ಅಭಿಮಾನಿಯೊಬ್ಬರು ಆಟೋಗ್ರಾಫ್ ನೀಡುವಂತೆ ತಮ್ಮ ಬಳಿಯಿದ್ದ ಬ್ಲೂ ಇಂಕ್ ಪೆನ್ ಕೊಟ್ಟರು. ಇದನ್ನು ನೋಡುತ್ತಿದ್ದಂತೆ ನಟಿ ಸಹಿ ಹಾಕಲ್ಲ, ಕಪ್ಪು ಅಥವಾ ಬೇರೆ ಬಣ್ಣದ ಇಂಕ್​ ಇದ್ದರೆ ತನ್ನಿ ಎಂದು ಸ್ಥಳದಿಂದ ಹೊರಟರು. ಇದು ಅಭಿಮಾನಿಗೆ ಅತೀವ ನೋವು ತಂದಿತು.
ಈ ವಿಡಿಯೋ ವೈರಲ್ ಆಗ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಸಹ ಭುಗಿಲೆದ್ದಿತು. ಫ್ಯಾನ್ಸ್​ಗಳಿಗೆ ಸಹಿ ಹಾಕಲು ಯಾಕಿಷ್ಟು ಅಸಡ್ಡೆ ತೋರುತ್ತಾರೆ? ನೀಲಿ ಇಂಕ್​ನಲ್ಲಿ ಆಟೋಗ್ರಾಫ್​ ಏಕೆ ಹಿಂದೇಟು ಹಾಕ್ತಿದ್ದಾರೆ? ಇದರ ಹಿಂದಿನ ಉದ್ದೇಶವೇನು ಎಂಬ ಹತ್ತು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಆದರೆಮ ಇದ್ಯಾವುದಕ್ಕೂ ಸೂಕ್ತ ಉತ್ತರ ಸಿಗಲಿಲ್ಲ. ಆದರೆ, ಒಬ್ಬನೇ ಒಬ್ಬ ಕಮೆಂಟ್ ಸೆಕ್ಷನ್​ನಲ್ಲಿ ವಿವರಿಸಿದ ರೀತಿಗೆ ಅಭಿಮಾನಿಗಳು ದಂಗಾದರು. ಅಸಲಿಗೆ ಆತ ಹೇಳಿದ್ದೇನು ಗೊತ್ತಾ? ಕೇಳಿದ್ರೆ ನೀವು ಶಾಕ್ ಆಗ್ತೀರಾ.
ಇದನ್ನೂ ಓದಿ:ಮದ್ದೂರಿನಲ್ಲಿ ಮತದಾನ ಜಾಗೃತಿ
ನೀಲಿ ಬಣ್ಣದ ಇಂಕ್​ನಲ್ಲಿ ಸಹಿ ಹಾಕೋದಿಲ್ಲ ಎಂಬ ಸಂಗತಿ ಒಂದು ರೀತಿ ವಿಚಿತ್ರ ಎನಿಸಿದರು ಅದರ ಹಿಂದೆ ಭಯಾನಕ ಸಂಗತಿ ಅಡಗಿರುವುದು ಅಷ್ಟೇ ಸತ್ಯ. ಯಾರೇ ದೊಡ್ಡ ಸ್ಟಾರ್​ಗಳಾಗಲಿ ಅವರು ನೀಲಿ ಇಂಕ್​ನಲ್ಲಿ ಆಟೋಗ್ರಾಫ್ ನೀಡಲು ಬಯಸೋದಿಲ್ಲ. ಕಾರಣ, ಬ್ಲೂ ಇಂಕ್​ನಲ್ಲಿ ಮಾಡಿದ್ರೆ, ಅದನ್ನು ಬಹಳ ಸುಲಭವಾಗಿ ಸ್ಕ್ಯಾನ್ ಮಾಡಿ, ನಂತರದಲ್ಲಿ ನಕಲು ಮಾಡಬಹುದು. ಇದನ್ನು ಮೀರಿ ಹಣದ ಆಸೆಗೆ ಮಾರಾಟವು ಕೂಡ ಮಾಡಬಹುದು ಎಂಬ ಭಯದಿಂದ ಸ್ಟಾರ್ ಸೆಲೆಬ್ರಿಟಿಗಳು ಬ್ಲೂ ಇಂಕ್​ನಲ್ಲಿ ಎಂದಿಗೂ ಸಿಗ್ನೇಚರ್ ಮಾಡಲು ಬಯಸುವುದಿಲ್ಲ,(ಏಜೆನ್ಸೀಸ್).
4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

ನಾಯಕತ್ವ ವಹಿಸಿಕೊಂಡ್ರೆ ಸಾಲದು… ಹಾರ್ದಿಕ್​ಗೆ ಮುಖಕ್ಕೆ ಹೊಡದಂಗೆ ಹೇಳಿದ್ರು ಮಾಜಿ ಸ್ಟಾರ್​ ಕ್ರಿಕೆಟಿಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
