ಬೆಂಗಳೂರು:ಕನ್ನಡದಲ್ಲಿ ಸೇವೆ ನೀಡಲು ಹಿಂದೇಟು ಹಾಕಿರುವ ಇಂಡಿಗೋ ಏರ್‌ಲೈನ್ ವಿರುದ್ಧ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಅಸಮಾಧಾನ ಹೊರಹಾಕಿದ್ದಾರೆ. ಬುಧವಾರ ಬೆಂಗಳೂರಿನಿಂದ ಬೆಳಗಾವಿಗೆ ಇಂಡಿಗೋ ವಿಮಾನದಲ್ಲಿ ತೆರಳಿದ್ದು ಈ ವೇಳೆ ವಿಮಾನದೊಳಗೆ ಉದ್ಘೋಷಕರು ಕನ್ನಡ ಬಳಸದೇ ಇರುವ ಕುರಿತು ಪ್ರಶ್ನೆ ಎತ್ತಿದ್ದಾರೆ. ಈ ಸಂಬಂಧ ಟ್ವೀಟ್ ಪ್ರಶ್ನೆ ಮಾಡಿರುವ ಅವರು, ಕರ್ನಾಟಕದಲ್ಲಿ ಇಂಡಿಗೊ ಹಾಗೂ ಇತರ ಕಂಪನಿಗಳಿಗೆ ಕನ್ನಡದಲ್ಲಿ ಸೇವೆ ನೀಡಲು ಇರುವ ಸಮಸ್ಯೆಯಾದರೂ ಏನು? ಎಂದು ಪ್ರಶ್ನಿಸಿದರು.
ಬ್ರಿಟಿಷ್ ಏರ್‌ವೇಸ್ ಎಮಿರೇಟ್ಸ್, ಸಿಂಗಾಪುರ ಏರ್‌ಲೈನ್ಸ್ ಕನ್ನಡದಲ್ಲಿ ಸೇವೆ ನೀಡುತ್ತವೆ. ಇಂಡಿಗೊ ಕ್ಯಾಬಿನ್ ಸಿಬ್ಬಂದಿ ಇಂಗ್ಲಿಷ್, ಹಿಂದಿ ಹಾಗೂ ಮಲಯಾಳಂ ಬಳಸುವುದಾದರೆ, ಕನ್ನಡದಲ್ಲಿ ಸೇವೆ ನೀಡದಿರುವುದು ಅಚ್ಚರಿ ಮೂಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಮಾತಿಗೆ ಅನೇಕರು ದನಿ ಗೂಡಿಸಿ, ಇಂಡಿಗೋವನ್ನು ಪ್ರಶ್ನೆ ಮಾಡಿದ್ದಾರೆ.
I have been talking about this issue for some time now. Here is a January 2018 tweet of mine.https://t.co/KIOyP0f39f
— ಎಲ್ ಕೆ ಅತೀಕ್ L K Atheeq (@lkatheeq)December 16, 2020

It is not difficult:
Airlines to recruit cabin crew from all states
At least 1 crew member of the state is included in flights going to any airport in that state
Announcements & menus in the language of the state mandatory for flights going to the state.@MoCA_GoI@DGCAIndiahttps://t.co/p86yzHZi0M
— ಎಲ್ ಕೆ ಅತೀಕ್ L K Atheeq (@lkatheeq)December 16, 2020

Service in Kannada by Singapore Airlines!https://t.co/jAzlcYfvYe
— ಎಲ್ ಕೆ ಅತೀಕ್ L K Atheeq (@lkatheeq)December 16, 2020

ಸಿಂಗಾಪುರ ಏರ್‌ಲೈನ್‌ನಲ್ಲಿ ಆಹಾರದ ಮೆನು ಕೂಡ ಕನ್ನಡದಲ್ಲಿ ಇರುವುದನ್ನು ಚಿತ್ರಸಹಿತ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿಮಾನಯಾನ ಸಂಸ್ಥೆಗಳು ಆಯಾ ರಾಜ್ಯದವರನ್ನೇ ಸಿಬ್ಬಂದಿ ಆಗಿ ನೇಮಿಸಿಕೊಳ್ಳಲಿ, ಇಲ್ಲವಾದರೆ ಆ ತಂಡದಲ್ಲಿ ಒಬ್ಬರಾದರೂ ಆಯಾ ರಾಜ್ಯದವರು ಇರಲಿ. ಇದೇನು ಕಷ್ಟದ ಕೆಲಸವಲ್ಲ ಎಂದು ಕುಟುಕಿದ್ದಾರೆ. ಉದ್ಘೋಷಣೆ, ಮೆನು ಆಯಾ ರಾಜ್ಯದ ಭಾಷೆಯಲ್ಲೇ ಇರಬೇಕು ಎಂದು ಹೇಳಿರುವ ಅವರು ಕೇಂದ್ರ ವಿಮಾನ ಯಾನ ಇಲಾಖೆ ಹಾಗೂ ಇಂಡಿಗೋಗೂ ತಮ್ಮ ಅಭಿಪ್ರಾಯವನ್ನು ಟ್ಯಾಗಿಸಿದ್ದಾರೆ.
ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ: ಪ್ರತಾಪಚಂದ್ರ ಶೆಟ್ಟಿ ಇಂಗಿತ

ರಾಜ್ಯದಲ್ಲಿ ಮೂರು ದಿನ ಮಳೆ; ವಾಯುಭಾರ ಕುಸಿತ ಪರಿಣಾಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + four =
Remember me
