ನವದೆಹಲಿ:ಲಡಾಖ್​ ಪ್ರವಾಸದಲ್ಲಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಭಾನುವಾರ ತಮ್ಮ ತಂದೆ ಮಾಜಿ ಪ್ರಧಾನಿ, ದಿ. ರಾಜೀವ್​ ಗಾಂಧಿ ಅವರ ಜನ್ಮ ದಿನಾಚರಣೆಯನ್ನು ಪ್ಯಾಂಗಾಂಗ್​ ಸರೋವರದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಿಸಿದ್ದಾರೆ.
ಇತ್ತ ರಾಹುಲ್​ ಗಾಂಧಿ ಲಡಾಖ್​ ಪ್ರವಾಸವನ್ನು ಟೀಕಿಸಿರುವ ಬಿಜೆಪಿ ನಾಯಕರು ನರೇಂದ್ರ ಮೋದಿ ಸರ್ಕಾರದ ಅತ್ಯುತ್ತಮ್ಮ ಕಾರ್ಯಗಳನ್ನು ಕಾಂಗ್ರೆಸ್​ ನಾಯಕರು ಪ್ರಚಾರ ಮಾಡುತ್ತಿರುವುದಾಗಿ ಅವರ ಕಾಲೆಳೆದಿದ್ದಾರೆ. ಶನಿವಾರ ರಾಹುಲ್​ ಗಾಂಧಿ ಲಡಾಖ್​ನಿಂದ ಪ್ಯಾಂಗಾಂಗ್​ ಸರೋವರಕ್ಕೆ ಬೈಕ್​ ರೈಡ್​ ಮಾಡಿದ್ದರು.
Thanks to Rahul Gandhi for promoting excellent roads of Ladakh built by the@narendramodigovt. Earlier, he also showcased how Tourism is booming in Kashmir Valley & reminded all that our "National Flag" can be peacefully hoisted at Lal Chowk in Srinagar now!pic.twitter.com/vta6HEUnXM
ಇದನ್ನೂ ಓದಿ:ಮಹಿಳೆಯೊಂದಿಗೆ ಮಾಜಿ ಶಾಸಕನ ಫೋಟೋ-ವಿಡಿಯೋ ವೈರಲ್​
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಕೇಂದ್ರ ಸಚಿವ ಕಿರಣ್​ ರಿಜುಜು ನರೇಂದ್ರ ಮೋದಿ ಸರ್ಕಾರವು ಲಡಾಖ್​ನಲ್ಲಿ ನಿರ್ಮಿಸಿರುವ ಅತ್ಯುತ್ತಮ್ಮ ರಸ್ತೆಗಳ ಬಗ್ಗೆ ಪ್ರಚಾರ ಮಾಡಿದ್ದಕ್ಕಾಗಿ ರಾಹುಲ್​ ಗಾಂಧಿ ಅವರಿಗೆ ಧನ್ಯವಾದಗಳು. ಕಾಶ್ಮೀರ ಕಣಿವೆಯಲ್ಲಿ ಪ್ರವಾಸೋದ್ಯಮವು ಹೇಗೆ ಪ್ರವರ್ಧಮಾನಕ್ಕೆ ಬರುತ್ತಿದ್ದೆ ಎಂದು ರಾಹುಲ್​ ಗಾಂಧಿ ಅವರು ಈ ಹಿಂದೆ ತೋರಿಸಿಕೊಟ್ಟಿದ್ದಾರೆ.
ಶ್ರೀನಗರದ ಲಾಲ್​ಚೌಕ್​ನಲ್ಲಿ ಯಾವುದೇ ಆತಂಕವಿಲ್ಲದೆ ರಾಷ್ಟ್ರಧ್ವಜವನ್ನು ಹಾರಿಸಬಹುದು ಎಂದು ಅವರು ದೇಶದ ಜನತೆಗೆ ತೋರಿಸಿಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯಗಳನ್ನು ಜನತೆಯ ಮುಂದೆ ಪ್ರಸ್ತಾಪಿಸಿದ್ದಕ್ಕೆ ಧನ್ಯವಾದಗಳು ಎಂದು ಪರೋಕ್ಷವಾಗಿ ಯುಪಿಯ ಆಡಳಿತನ್ನು ಟೀಕಿಸಿದ್ದಾರೆ.
ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕಣಿವೆ ರಾಜ್ಯದಲ್ಲಿ 370ನೇ ವಿಧಿಯನ್ನು ರದ್ದು ಮಾಡಿದ ನಂತರ ರಾಹುಲ್​ ಗಾಂಧಿ ಅವರು ಬೆಳವಣಿಗೆಗಳನ್ನು ವೀಕ್ಷಿಸಲು ಪ್ರವಾಸ ಕೈಗೊಂಡಿದ್ದಾರೆ. ರಾಹುಲ್​ ಗಾಂಧಿ ಅವರು ಲಡಾಖ್​ನಲ್ಲಿ ಪ್ರವಾಸ ಕೈಗೊಂಡಿರುವುದು ನಮಗೆ ಖುಷಿ ನೀಡಿದ್ದು, ಅವರ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
To witness and spread the word about post-Article 370 developments in Leh and Ladakh, Shri Rahul Gandhi himself has taken a trip to the valley. We are elated and delighted to watch glimpses of his road trip.pic.twitter.com/X0mC18C40j
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 3 =
Remember me
