ನವದೆಹಲಿ:ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿನ್ನೆ (ಜ.22) ನಡೆದ ನೂತನ ರಾಮ ಮಂದಿರ ಉದ್ಘಾಟನೆ ಮತ್ತು ಬಾಲರಾಮ ವಿಗ್ರಹ ಪ್ರತಿಷ್ಠಾಪನೆಯಂತಹ ಐತಿಹಾಸಿಕ ಸಮಾರಂಭಕ್ಕೆ ಇಡೀ ದೇಶವೇ ಸಾಕ್ಷಿಯಾಯಿತು. ಮಂದಹಾಸ ಬೀರುವ ರಾಮಲಲ್ಲಾನನ್ನು ಕಂಡು ಭಕ್ತರೆಲ್ಲರು ಪುಳಕಿತರಾದರು. ಜನ ಪ್ರತಿನಿಧಿಗಳು, ಕಲಾವಿದರು, ಕ್ರಿಕೆಟಿಗರು ಸೇರಿದಂತೆ ವಿವಿಧ ಕ್ಷೇತ್ರದ ಪ್ರಮುಖರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ರಾಮನ ಕೃಪೆಗೆ ಪಾತ್ರರಾದರು.
ಆದರೆ, ವಿಶೇಷ ಕಾರ್ಯಕ್ರಮಕ್ಕೆ ಆಹ್ವಾನವಿದ್ದರೂ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ವಿರಾಟ್​ ಕೊಹ್ಲಿ ಮತ್ತು ನಾಯಕ ರೋಹಿತ್​ ಶರ್ಮ ಹಾಗೂ ಮಾಜಿ ನಾಯಕ ಎಂ.ಎಸ್​. ಧೋನಿ ಏಕೆ ಹಾಜರಾಗಲಿಲ್ಲ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನವರು ಖುದ್ದಾಗಿ ಮನೆಗೆ ತೆರಳಿ ಆಹ್ವಾನ ನೀಡಿದರೂ ಈ ಮೂವರು ಸೆಲೆಬ್ರಿಟಿಗಳು ಗೈರಾಗಿದ್ದೇಕೆ ಕುತೂಹಲ ಎಲ್ಲರಲ್ಲಿದೆ.
ರಾಮಲಲ್ಲಾ ಪ್ರಾಣ ಪ್ರತಿಷ್ಠಾದಲ್ಲಿ ಭಾಗವಹಿಸಲು ಕೊಹ್ಲಿಗೆ ಬಿಸಿಸಿಐ ಅನುಮತಿ ಸಹ ನೀಡಿತ್ತು. ಆದರೂ ಕೊಹ್ಲಿ ಕಾಣಿಸಿಕೊಳ್ಳಲಿಲ್ಲ. ಮೂಲಗಳ ಪ್ರಕಾರ ಟೀಮ್​ ಇಂಡಿಯಾ, ಇಂಗ್ಲೆಂಡ್​ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಹೈದರಬಾದ್​ನಲ್ಲಿ ಬೀಡುಬಿಟ್ಟಿರುವ ತಂಡ ಭಾನುವಾರದಿಂದಲೇ ಅಭ್ಯಾಸ ಪಂದ್ಯದಲ್ಲಿ ನಿರತವಾಗಿದೆ. ರವೀಂದ್ರ ಜಡೇಜಾ ಮತ್ತು ವಿರಾಟ್​ ಕೊಹ್ಲಿ ಸಹ ಅಭ್ಯಾಸದಲ್ಲಿ ನಿರತರಾದರು. ಆದರೆ, ಕೆಲವು ವೈಯಕ್ತಿಕ ಕಾರಣಗಳಿಂದ ರೋಹಿತ್​ ಶರ್ಮ, ಅಭ್ಯಾಸ ಮಾಡದೇ ಮುಂಬೈಗೆ ತೆರಳಿದ್ದಾರೆ.
ಇನ್ನೊಂದೆಡೆ ವಿರಾಟ್​ ಕೊಹ್ಲಿ ಸಹ ವೈಯಕ್ತಿಕ ಕಾರಣಗಳಿಂದ ರಾಮ ಮದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆಗಲಿಲ್ಲ. ಈ ಸಂಬಂಧ ಬಿಸಿಸಿಐ ಸಹ ಪ್ರತಿಕಾ ಪ್ರಕಟಣೆ ಹೊರಡಿಸಿದೆ. ಇಂಗ್ಲೆಂಡ್​ ವಿರುದ್ಧದ 5 ಟೆಸ್ಟ್​ ಪಂದ್ಯಗಳಲ್ಲಿ ಹೈದರಾಬಾದ್​ ಮತ್ತು ವಿಶಾಖಪಟ್ಟಣದಲ್ಲಿ ನಡೆಯಲಿರುವ ಮೊದಲು ಎರಡು ಪಂದ್ಯಗಳಿಂದ ಕೊಹ್ಲಿ ಹೊರಗುಳಿಯಲಿದ್ದಾರೆ ಎಂದು ತಿಳಿಸಿದೆ. ಅಲ್ಲದೆ, ಕೊಹ್ಲಿ ಮತ್ತು ಅವರ ಕುಟುಂಬಕ್ಕೆ ಸ್ವಲ್ಪ ವೈಯಕ್ತಿಕ ಸ್ಥಳವನ್ನು ನೀಡುವಂತೆ ಮತ್ತು ಅವರ ಗೌಪ್ಯತೆಗೆ ಧಕ್ಕೆ ಮಾಡಿದಂತೆ ಅಭಿಮಾನಿಗಳಲ್ಲಿ ಬಿಸಿಸಿಐ ಒತ್ತಾಯಿಸಿದೆ.
ಇನ್ನೂ ಮಹೇಂದ್ರ ಸಿಂಗ್​ ಧೋನಿ ಅವರು ಯಾವ ಕಾರಣಕ್ಕೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಎಂಬುದಕ್ಕೆ ಯಾವುದೇ ಕಾರಣ ಬಹಿರಂಗವಾಗಿಲ್ಲ.
ಪ್ರಸ್ತತ ಟೀಮ್​ ಇಂಡಿಯಾದ ಆಟಗಾರರಲ್ಲಿ ರವೀಂದ್ರ ಜಡೇಜಾ ಮಾತ್ರ ಐತಿಹಾಸಿಕ ಕಾರ್ಯಕ್ರಮದಲ್ಲಿ ತಮ್ಮ ಪತ್ನಿ ರವಿಬಾ ಜತೆ ಭಾಗವಹಿಸಿದರು. ಇವರನ್ನು ಹೊರತುಪಡಿಸಿದರೆ, ಸಚಿನ್​ ತೆಂಡೂಲ್ಕರ್​, ಅನಿಲ್​ ಕುಂಬ್ಳೆ ಹಾಗೂ ವೆಂಕಟೇಶ್​ ಪ್ರಸಾದ್​ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಉಪಸ್ಥಿತರಿದ್ದರು.(ಏಜೆನ್ಸೀಸ್​)

ಗೃಹಪ್ರವೇಶಕ್ಕೂ ಮುನ್ನವೇ ಅಡಿಪಾಯ ಸಮೇತ ಧರೆಗುರುಳಿದ 3 ಅಂತಸ್ತಿನ ಕಟ್ಟಡ: ಕ್ಯಾಮೆರಾ ಕಣ್ಣಲ್ಲಿ ಭೀಕರ ದೃಶ್ಯ ಸೆರೆ

ಉದ್ಯಮಿ ಜತೆ ಅಫೇರ್​; ಪತಿಗೆ ಡಿವೋರ್ಸ್​ ಕೊಡಲು ಮುಂದಾದ ನಮಿತಾ!? ಸಂಚಲನ ಸೃಷ್ಟಿಸಿದ ನಟನ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
