ನವದೆಹಲಿ:ಗಂಡ ಒಳ್ಳೆಯವನೇ.. ಹೆಂಡತಿ-ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾನೆ. ಆದರೂ ಪತ್ನಿ ಆತನಿಂದ ವಿಮುಖಳಾಗಿರುತ್ತಾಳೆ ಇಲ್ಲವೇ ಬಿಟ್ಟುಹೋಗುತ್ತಾಳೆ. ಯಾಕೆ ಹೀಗೆ?
ಇಂಥ ದಾಂಪತ್ಯ ಪ್ರಕರಣಗಳಿಗೆ ಉತ್ತರವಾಗಿ ಇಲ್ಲೊಂದು ಅಧ್ಯಯನದಲ್ಲಿ ಮಹತ್ವದ ಅಂಶಗಳು ಕಂಡುಬಂದಿವೆ. ಅಮೆರಿಕದ ಮ್ಯಾರೇಜ್​ ಕೌನ್ಸೆಲರ್ ಜಸ್ಟಿಸ್​ ಸ್ಕ್ಯಾನ್​ಫಾರ್ಬರ್ ಬ್ಲಾಗ್​ನಲ್ಲಿ ಈ ಅಧ್ಯಯನದ ಅಂಶಗಳು ಪ್ರಕಟಗೊಂಡಿದೆ. ಇದರಲ್ಲಿನ ಕೆಲವು ಅಂಶಗಳು ವಿವಾಹಿತ ಪುರುಷರಿಗೆ ಕಿವಿಮಾತು ಎಂದರೂ ಸರಿಯೇ, ಎಚ್ಚರಿಕೆ ಎಂದರೂ ಸರಿಯೇ ಎನ್ನಲಾಗಿದೆ.
ಪತಿಯನ್ನು ಪ್ರೀತಿಸುತ್ತಿದ್ದರೂ ಪತ್ನಿ ಯಾಕೆ ಆತನಿಂದ ವಿಮುಖಳಾಗುತ್ತಾಳೆ ಇಲ್ಲವೇ ಆತನನ್ನು ಬಿಟ್ಟು ಹೋಗುತ್ತಾಳೆ ಎಂಬುದಕ್ಕೆ ಈ ಅಧ್ಯಯನ ಪ್ರಮುಖ ಕಾರಣವೊಂದನ್ನು ಬಹಿರಂಗಪಡಿಸಿದೆ. ಜಸ್ಟಿಸ್​ ಸ್ಕ್ಯಾನ್​ಫಾರ್ಬರ್ ಬ್ಲಾಗ್​ನ ಈ ಪೋಸ್ಟ್ ವೈರಲ್ ಕೂಡ ಆಗಿದೆ.
ಇದನ್ನೂ ಓದಿ:ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ಇಂಥ ದಾಂಪತ್ಯದಲ್ಲಿನ ವಿರಸಕ್ಕೆ ಪ್ರಮುಖ ಕಾರಣ ಪತಿಯ ಭಾವನಾತ್ಮಕ ಅನುಪಸ್ಥಿತಿ. ಪತಿ ಭಾವುಕನಾಗಿ ಪತ್ನಿಗೆ ಸಮಯ ಕೊಡದಿರುವುದೇ ಆಕೆ ಆತನನ್ನು ಪ್ರೀತಿಸುತ್ತಿದ್ದರೂ ಆತನಿಂದ ವಿಮುಖಳಾಗಲು ಇಲ್ಲವೇ ಬಿಟ್ಟುಹೋಗಲು ಕಾರಣ ಎಂದು ಈ ಅಧ್ಯಯನ ಹೇಳಿದೆ.
ಸಾಂಸಾರಿಕ ಜೀವನದಲ್ಲಿ ಪತಿ ಭಾವನಾತ್ಮಕವಾಗಿ ಪತ್ನಿಯೊಂದಿಗೆ ಒಂದಷ್ಟು ಸಮಯವನ್ನಾದರೂ ಕಳೆಯದಿರುವುದೇ ಈ ದೊಡ್ಡ ಸಮಸ್ಯೆಗೆ ಕಾರಣ ಎಂಬುದು ಕಂಡುಬಂದಿದೆ. ಅದೇ ಕಾರಣಕ್ಕೆ ಪತಿ ಒಳ್ಳೆಯವನಾಗಿದ್ದರೂ, ಪತ್ನಿ-ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು, ಪತ್ನಿಗೂ ಆತನ ಮೇಲೆ ಪ್ರೀತಿ ಇದ್ದರೂ ಆಕೆ ಭಾವನಾತ್ಮಕವಾಗಿ ಆತನಿಂದ ವಿಮುಖಳಾಗಿರುತ್ತಾಳೆ. ಕೆಲವೊಂದು ವಿಪರೀತ ಪರಿಸ್ಥಿತಿಯಲ್ಲಿ ಬಿಟ್ಟುಕೂಡ ಹೋಗುತ್ತಾಳೆ ಎಂದು ಈ ಅಧ್ಯಯನ ಹೇಳಿದೆ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಎಷ್ಟೋ ಸಂದರ್ಭದಲ್ಲಿ ಪತಿ ಪತ್ನಿಯೊಂದಿಗೆ ಭೌತಿಕವಾಗಿ ಉಪಸ್ಥಿತನಿದ್ದರೂ, ಆಕೆಯೊಂದಿಗೆ ಕಾಲ ಕಳೆಯುತ್ತಿದ್ದರೂ, ಆತ ಆಕೆಯೊಂದಿಗೆ ಭಾವನಾತ್ಮಕವಾಗಿ ಸ್ಪಂದಿಸುತ್ತಿರುವುದಿಲ್ಲ. ಉತ್ತಮ ದಾಂಪತ್ಯಕ್ಕೆ ದಿನದಲ್ಲಿ ಆಗಾಗ ಕನಿಷ್ಠ ಐದು ನಿಮಿಷಗಳಷ್ಟಾದರೂ ಪತ್ನಿ ಮೇಲೆ ಸಂಪೂರ್ಣ ಕೇಂದ್ರೀಕೃತ ಭಾವನಾತ್ಮಕ ಸ್ಪಂದನೆ ಅತಿಮುಖ್ಯ ಎಂದು ಈ ಅಧ್ಯಯನ ಹೇಳಿದೆ.
ಇಂಥ ಸಂದರ್ಭಗಳಲ್ಲಿ ಯಾರಾದರೂ ಸ್ವಲ್ಪೇ ಸ್ವಲ್ಪ ನಮಗೆ ಪ್ರೀತಿ ತೋರಿಸಿದರೂ ಅದು ನಮ್ಮನ್ನು ಸುಲಭದಲ್ಲಿ ಅವರನ್ನು ಹಚ್ಚಿಕೊಳ್ಳುವಂತೆ ಮಾಡಿಬಿಡುತ್ತದೆ ಎಂಬ ಆತಂಕಕಾರಿ ಅಂಶವನ್ನೂ ಕೆಲವು ಪತ್ನಿಯರು ವ್ಯಕ್ತಪಡಿಸಿದ್ದಾಗಿ ಈ ಅಧ್ಯಯನ ತಿಳಿಸಿದೆ. –ಏಜೆನ್ಸೀಸ್
ಎಲಾನ್ ಮಸ್ಕ್ ಬಚ್ಚಿಟ್ಟಿದ್ದ ‘ಆ ಮೂರನೇ ಮಗು’ವಿನ ವಿಷಯ ಕೊನೆಗೂ ಬಹಿರಂಗ!

ಪಿಒಪಿ ಗಣೇಶ ತಯಾರಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ; ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − three =
Remember me
